spot_img
Monday, April 6, 2026
spot_img

ಯಕ್ಷಗಾನ ಮನೋವಿಕಾಸಕ್ಕೆ ಪೂರಕ-ಜನಾರ್ದನ ಹಂದೆ

ಕೋಟ: ಕಲೆಯು ಹೆಚ್ಚು ವಿಜೃಂಬಿಸುವುದು ಕರ್ನಾಟಕದ ಕರಾವಳಿಯಲ್ಲಿ. ನಾಲ್ಕು ಗಟ್ಟಿಯಾದ ಕಂಬದ ಚೌಕಟ್ಟಿನೊಳಗಿನ ಭದ್ರವಾಗಿ, ಶತಮಾನಗಳಿಂದ ಅತೀ ಸುಂದರವಾಗಿ ಪ್ರದರ್ಶನಗೊಳ್ಳುತ್ತಾ ಬಂದಿದೆ. ಯಕ್ಷಗಾನ ಕಲಾ ವಿಭಾಗದಲ್ಲಿ ಅಪಾರ ಅನುಭವದ ಕೋಟ ಸುದರ್ಶನ ಉರಾಳರು ಯಕ್ಷ ಸಂಘಟನೆಯಲ್ಲಿ ಪ್ರವೀಣರು. ಶ್ರಮದ ಸಂಘಟನೆಯಿಂದಲೇ ಜನಜನಿತವಾದ ಉರಾಳರು ಪ್ರತೀ ವರ್ಷ ಪ್ರಾಯೋಜಕರನ್ನು ಒಡಗೂಡಿಕೊಂಡು ಸಾಲಿಗ್ರಾಮದ ದೇವರ ವಾರ್ಷಿಕ ಅವಭೃತ ಸ್ನಾನದ ಸಂದರ್ಭದಲ್ಲಿ ಒಂದು ಒಳ್ಳೆಯ ಕಾರ್ಯಕ್ರಮ ಸಂಯೋಜಿಸುತ್ತಿರುವ ಕಾರ್ಯ ಸ್ತುತ್ಯರ್ಹ ಎಂದು ಮಂಗಳೂರು ಯಕ್ಷದಾಮದ ಜನಾರ್ಧನ ಹಂದೆ ಹೇಳಿದರು.

ಅವರು ಗುರುವಾರ (೧೮-೧-೨೦೨೪ ರಂದು) ಕೋಟ ಹಂದೆ ದೇವಸ್ಥಾನದ ಪ್ರಾಂಗಣದಲ್ಲಿ ವಿಶ್ವವಿನಾಯಕ ವಿವಿಧೋದ್ದೇಶ ಸಹಕಾರಿ ಸಂಘ ಮತ್ತು ಕನ್ನಡ ಸಂಸ್ಕ್ರತಿ ಇಲಾಖೆ ಉಡುಪಿ ಜಂಟಿಯಾಗಿ ಆಯೋಜಿಸಿದ ಕೋಟ ಸುದರ್ಶನ ಉರಾಳ ಕಲಾ ತಂಡದ ಭೀಷ್ಫೋತ್ಪತ್ತಿ ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಕಲಾ ಪ್ರೋತ್ಸಾಹಕ ಹಂದಟ್ಟು ಶ್ರೀನಿವಾಸ ಭಟ್ ಕ್ಯಾಲಿಫೋರ್ನಿಯಾ ಮಾತನಾಡಿ ಕಲಾ ಕೈಂಕರ್ಯದಲ್ಲಿ ತೊಡಗಿಸಿಕೊಂಡವರ ಸಂಸರ್ಗದಿಂದ ಕಲಾಸಕ್ತಿಯನ್ನು ಬೆಳೆಸಿಕೊಂಡೆ ಅದು ನಾನು ನೆಲೆಸಿದ ಕ್ಯಾಲಿಫೋರ್ನಿಯಾದಲ್ಲೂ ಮುಂದುವರಿದು ನನ್ನಿಂದಾದ ಪ್ರೋತ್ಸಾಹವನ್ನು ಯಕ್ಷಗಾನ ಕಲೆಗೆ ನೀಡಿದೆ. ಇಂದು ನನ್ನೂರಿನಲ್ಲು ಭಾಗವಹಿಸುವ ಯೋಗ ದೊರಕಿದೆ ಎಂದರು.

ಗೆಳೆಯರ ಬಳಗ ಕಾರ್ಕಡದ ಅಧ್ಯಕ್ಷ ತಾರಾನಾಥ ಹೊಳ್ಳ ಶುಭಹಾರೈಸಿದರು ದೇವಳದ ಆಡಳಿತ ಮಂಡಳಿಯ ಅಮರ ಹಂದೆ ಅಧ್ಯಕ್ಷ ತೆ ವಹಿಸಿದ್ದರು. ಸಿದ್ದಿವಿನಾಯಕ ವಿವಿದ್ದೊದ್ದೇಶ ಸಂಘದ ಅಧ್ಯಕ್ಷ ವೆಂಕಟರಮಣ ಸೋಮಯಾಜಿ ಸದಸ್ಯ ನಾಗೇಂದ್ರ ಐತಾಳ್ ಯಶಸ್ವಿ ಕಲಾ ವೃಂದ ಕೊಮೆಯ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ರಾಘವೇಂದ್ರ ತುಂಗ ನಿರೂಪಿಸಿದರು.

ಬಳಿಕ ಸೃಜನ್ ಗಣೇಶ್ ಹೆಗಡೆ, ರಾಘವೇಂದ್ರ ಹೆಗಡೆ, ಕೋಟ ಶಿವಾನಂದ, ಸುಜಯೀಂದ್ರ ಹಂದೆ, ನಾಗರಾಜ ಕುಂಕಿಪಾಲ್, ಆದಿತ್ಯ ಭಟ್, ಸತೀಶ್ ಹಾಲಾಡಿ, ಉದಯ, ಗಣಪತಿ ಭಟ್, ಮಂಜುನಾಥ, ನವೀನ, ರಾಜು ಪೂಜಾರಿ ಮುಂತಾದ ಕಲಾವಿದ ಕೂಡುವಿಕೆಯಲ್ಲಿ ಭೀಷ್ಫೋತ್ಪತ್ತಿ ಯಕ್ಷಗಾನ ನಡೆಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!