Sunday, September 8, 2024

ಅನ್ನಪೂರ್ಣಿ ಸಿನೆಮಾ ವಿವಾದದ ಬಗ್ಗೆ ಮೌನ ಮುರಿದ ನಟಿ  | ಸಾಮಾಜಿಕ ಸುಧಾರಣೆಯೇ ನಮ್ಮ ಪ್ರಾಮಾಣಿಕ ಪ್ರಯತ್ನವಾಗಿತ್ತು : ನಯನತಾರ

ಜನಪ್ರತಿನಿಧಿ ವಾರ್ತೆ (ನವ ದೆಹಲಿ ) : ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿರುವ ಆರೋಪದ ಹಿನ್ನೆಲೆಯಲ್ಲಿ ಬಹುಭಾಷ ನಟಿ ನಯನತಾರಾ ತನ್ನ ಅಧಿಕೃತವ ಇನ್ಸ್ಟಾಗ್ರಾಂ ಮೂಲಕ ಕ್ಷಮೆಯಾಚಿಸಿದ್ದಾರೆ.

ನನ್ನನ್ನು ಒಳಗೊಂಡು ʼಅನ್ನಪೂರ್ಣಿ” ಸಿನೆಮಾ ತಂಡದವರು ಇತರರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಉದ್ದೇಶವನ್ನು ಹೊಂದಿಲ್ಲʼ ಎಂದು ನಯನತಾರ ಸ್ಪಷ್ಟನೆ ನೀಡಿದ್ದಾರೆ.

ಅಚಾನಾಕಾಗಿ ಧಾರ್ಮಿಕ ಧಕ್ಕೆ ಉಂಟಾಗಿರಬಹುದು. ಸಕಾರಾತ್ಮಕ ಸಂದೇಶವನ್ನು ಹಂಚಿಕೊಳ್ಳುವುದೇ ನಮ್ಮ ಪ್ರಾಮಾಣಿಕ ಉದ್ದೇಶ ಹಾಗೂ ಪ್ರಯತ್ನವಾಗಿತ್ತು. ಚಿತ್ರಮಂದಿರಗಳಲ್ಲಿ ಈ ಹಿಂದೆ ಪ್ರದರ್ಶಿಸಲಾದ, ಸೆನ್ಸಾರ್‌ಗೆ ಒಳಪಟ್ಟಿದ್ದ ಸಿನೆಮಾವನ್ನು ಒಟಿಟಿ ಪ್ಲ್ಯಾಟ್‌ಫಾರ್ಮ್‌ನಿಂದ ತೆಗೆದು ಹಾಕುವುದರ ಬಗ್ಗೆ ನಮಗೆ ನಿರೀಕ್ಷೆಯೇ ಇರಲಿಲ್ಲ. ನನ್ನನ್ನು ಒಳಗೊಂಡು ಸಿನೆಮಾ ತಂಡದವರು ಜನರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಹೊಂದಿರಲಿಲ್ಲ ಎಂದು ಅವರು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್‌ ಮೂಲಕ ತಿಳಿಸಿದ್ದಾರೆ.

ದೇವರನ್ನು ನಾನು ಅಪಾರವಾಗಿ ನಂಬುತ್ತೇನೆ ಹಾಗೂ ದೇಶದಾದ್ಯಂತ ಹಲವು ದೇವಾಲಯಗಳಿಗೆ ಭೇಟಿ ಮಾಡಿದ್ದೇನೆ. ಯಾರ ಭಾವನೆಗಳಿಗಾದರೂ ಧಕ್ಕೆ ಉಂಟು ಮಾಡಿದ್ದರೇ ನಾನು  ಅವರಲ್ಲಿ ಈ ಮೂಲಕ ಪ್ರಾಮಾಣಿಕ ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ʼಅನ್ನಪೂರ್ಣಿʼ ಸಿನೆಮಾದ ಉದ್ದೇಶ ಸಾಮಾಜಿ ಸುಧಾರಣೆ ಬಯಸುವುದೇ ಆಗಿತ್ತು ಹೊರತಾಗಿ ಇತರರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದಾಗಿರಲಿಲ್ಲ. ಕಳೆದ ಎರಡು ದಶಕಗಳಿಂದ ಸಿನೆಮೋದ್ಯಮದಲ್ಲಿ ನನ್ನ ಪ್ರಯಾಣ ಸಕಾರಾತ್ಮಕತೆಯನ್ನು ಹರಡುವುದೊಂದಿಗೆ ಸಾಗಿದೆ ಎಂದು ಅವರು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡ ಕ್ಷಮಾಪಣಾ ಪತ್ರದಲ್ಲಿ ನಟಿ ನಯನತಾರಾ ಬರೆದುಕೊಂಡಿದ್ದಾರೆ.

ʼಅನ್ನಪೂರ್ಣಿʼ ಸಿನೆಮಾದ ಕೆಲವು ಸನ್ನಿವೇಶಗಳು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿರುವ ಎರಡು ಬಲಬಂಥೀಯ ಸಂಘಟನೆಗಳು ನಯನತಾರ ವಿರುದ್ಧ ಪ್ರತ್ಯೇಕ ದೂರು ದಾಖಲಿಸಿದ್ದವು.

ಸಿನೆಮಾದಲ್ಲಿ ಹಿಂದೂ ದೇವರು ರಾಮನನ್ನು ಮಾಂಸಹಾರಿ ಎಂದು ಕರೆದು ಅವಹೇಳನ ಮಾಡಲಾಗಿತ್ತು ಎಂದು ಹೇಳಲಾಗಿತ್ತು. ಅಲ್ಲದೇ ಲವ್‌ ಜಿಹಾದ್‌ ಅನ್ನು ಪ್ರೋತ್ಸಾಹಿಸಲಾಗಿತ್ತು ಎಂದು ಬಲಪಂಥೀಯ ಸಂಘಟನೆಗಳು ದಾಖಲಿಸಿದ್ದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಬಗ್ಗೆ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದರು.

ʼದಕ್ಷಿಣ ಮುಂಬೈನ ಲೋಕಮಾನ್ಯ ತಿಲಕ್‌ ಮಾರ್ಗದಲ್ಲಿರುವ ಪೊಲೀಸ್‌ ಠಾಣೆಯಲ್ಲಿ ಹಿಂದೂ ಐಟಿ ಸೆಲ್‌ ಸಂಸ್ಥಾಪಕ ರಮೇಶ್‌ ಸೋಲಂಕಿ ಅವರು ದೂರು ದಾಖಲಿಸಿದ್ದರೇ, ಇನ್ನೊಂದೆಡೆ, ಬಜರಂಗದಳದ ಕಾರ್ಯಕರ್ತರು ಮುಂಬೈನ ಓಶಿವಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಟಿ ನಯನತಾರ ಹಾಗೂ ಸಿನೆಮಾ ತಂಡದ ಪ್ರಮುಖರ ವಿರುದ್ಧ ಲಿಖಿತ ದೂರು ದಾಖಲಾಗಿತ್ತು.

ಏತನ್ಮಧ್ಯೆ, ಸಿನೆಮಾದ ಬಗ್ಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಒಟಿಟಿ ಪ್ಲ್ಯಾಟ್‌ಫಾರ್ಮ್‌ ನೆಟ್‌ಫ್ಲೆಕ್ಸ್ ನಿಂದ ಸಿನೆಮಾ ಕಾಣೆಯಾಗಿದೆ ಹಾಗೂ ಸಿನೆಮಾ ನಿರ್ಮಾಣ ಸಂಸ್ಥೆ ಜೀ೫ ಕ್ಷಮೆ ಕೋರಿ ಸಬಂಧಪಟ್ಟವರಿಗೆ ಪತ್ರ ಬರೆದಿದೆ.

ಹಾಗಾದ್ರೆ ಏನಿದು ʼಅನ್ನಪೂರ್ಣಿʼ ವಿವಾದ ?

ನಟನೆಯ ಅನ್ನಪೂರ್ಣಿ ಸಿನಿಮಾದಲ್ಲಿ ಶ್ರೀರಾಮನಿಗೆ ಹಾಗೂ ಹಿಂದೂ ಧರ್ಮಕ್ಕೆ ಧಕ್ಕೆ ಆಗುವಂತಹ ಸನ್ನಿವೇಶಗಳ ಇವೆ ಎನ್ನುವ ಕಾರಣಕ್ಕಾಗಿ ಹಲವಾರು ಜನರು ಆಕ್ರೋಶ ವ್ಯಕ್ತ ಪಡಿಸಿದ್ದರು. ಇದೀಗ ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ನಟಿ ನಯನತಾರಾ ಅವರ ಮೇಲೂ ಪ್ರಕರಣ ದಾಖಲಾಗಿದೆ.

ಲೇಡಿ ಸೂಪರ್ ಸ್ಟಾರ್ ನಯನತಾರಾಗೆ ಇದು 75ನೇ ಸಿನಿಮಾ. ಈ ಸಿನಿಮಾದಲ್ಲಿ ನಯನತಾರಾ ಹೊಸ ಬಗೆಯ ಪಾತ್ರ ಮಾಡಿದ್ದಾರೆ. ಅವರ ಗೆಟಪ್ ಕಂಡು ಅಭಿಮಾನಿಗಳು ಸಂಭ್ರಮಿಸಿದ್ದರು. ಪಕ್ಕಾ ಸಂಪ್ರದಾಯಸ್ಥ ಕುಟುಂಬದ ಹುಡುಗಿಯಾಗಿ ನಯನತಾರಾ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ನಿಲೇಶ್‌ ಕೃಷ್ಣ ನಿರ್ದೇಶನದ ಈ ಸಿನೆಮಾ ಕಳೆದ ಡಿಸೆಂಬರ್‌ನಲ್ಲಿ ೧ರಂದು  ‘ಅನ್ನಪೂರ್ಣಿ’ ಎಂಬ ಸಿನಿಮಾ ರಿಲೀಸ್ ಆಗಿತ್ತು. ಒಟಿಟಿಯಲ್ಲಿ ರಿಲೀಸ್ ಆಗಿ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು.

ಸಂಪ್ರದಾಯಸ್ಥ ಬ್ರಾಹಣ ಕುಟುಂಬದಲ್ಲಿ ಹುಟ್ಟಿದ ಅನ್ನಪೂರ್ಣಿ (ಸಿನೆಮಾದಲ್ಲಿ ನಟಿ ನಯನತಾರಾ

ಅವರ ಪಾತ್ರದ ಹೆಸರು) ಅಡುಗೆ ಬಗ್ಗೆ ವಿಶಿಷ್ಟವಾದ ಆಸಕ್ತಿ ಹೊಂದಿದವಳಾಗಿರುತ್ತಾಳೆ, ಕುಟುಂಬದ ದೊಡ್ಡ ಮಟ್ಟದ ವಿರೋಧದ ನಡುವೆಯೂ ಮಾಂಸಹಾರಿ ಅಡುಗೆ ಮಾಡುವುದಕ್ಕೆ ಅನ್ನಪೂರ್ಣಿ ನಿರ್ಧರಿಸುತ್ತಾಳೆ. ಈ ಸಂದರ್ಭದಲ್ಲಿ ಅನ್ನಪೂರ್ಣಿಯ ಮುಸ್ಲೀಂ ಸ್ನೇಹಿತನ ಪರಿಚಯವಾಗುತ್ತದೆ. ಸಿನೆಮಾದ ಒಂದು ಸನ್ನಿವೇಶದಲ್ಲಿ ʼರಾಮನೂ ಮಾಂಸಹಾರಿʼ ಎಂದು ಮುಸ್ಲೀಂ ಸ್ನೇಹಿರ ಅನ್ನಪೂರ್ಣಿಗೆ ಹೇಳುತ್ತಾನೆ. ಮುಸ್ಲೀಂ ಸ್ನೇಹಿತನ ಪ್ರಭಾವಕ್ಕೊಳಗಾಗಿ ಅನ್ನಪೂರ್ಣಿ ಬಿರಿಯಾನಿ ಮಾಡುವ ವೇಳೆ ಹಿಜಾಬ್‌ ಧರಿಸುತ್ತಾಳೆ. ಈ ಎಲ್ಲಾ ಸನ್ನಿವೇಶಗಳು. ಹಿಂದೂ ಧಾರ್ಮಿಕ ನಂಬಿಕೆಗೆ ಧಕ್ಕೆ ಉಂಟು ಮಾಡಿದೆ ಹಾಗೂ ಲವ್‌ ಜಿಹಾದ್‌ಗೆ ಉತ್ತೇಜನೆ ನೀಡಲಾಗಿದೆ ಎಂದೆಲ್ಲಾ ವಿವಾದಗಳ ಸುಳಿಗೆ ಸಿನೆಮಾ ಸಾಕ್ಷಿಯಾಗಿದೆ. ಸದ್ಯ ನಟಿ ನಯನತಾರ ಕ್ಷಮಾಪಣಾ ಪತ್ರದ ಮೂಲಕ ಬಹಿರಂಗವಾಗಿ ಕ್ಷಮೆಯಾಚಿಸಿ ಸಿನೆಮಾದ ವಿವಾದದ ಬಗ್ಗೆ ಮೌನ ಮುರಿದಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!