Sunday, September 8, 2024

ಮಾರಣಕಟ್ಟೆಯಲ್ಲಿ ಸಂಭ್ರಮದ ಮಕರ ಸಂಕ್ರಮಣ ಉತ್ಸವ ಆರಂಭ

ಕುಂದಾಪುರ: ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಮಕರ ಸಂಕ್ರಮಣ ಉತ್ಸವ ಜನವರಿ 15ರಂದು ಬೆಳಿಗ್ಗೆ ವಿಜೃಂಭಣೆಯಿಂದ ಆರಂಭಗೊಂಡಿತು. ಪೂರ್ವಾಹ್ನ 9 ಘಂಟೆಗೆ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮಹಾಮಂಗಳಾರತಿ ನಡೆಯಿತು.ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ಮಾರಣಕಟ್ಟೆ ಶ್ರೀ ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕ್ಷೇತ್ರ ಎನ್ನುವ ಪ್ರಸಿದ್ಧಿಯನ್ನು ಹೊಂದಿದೆ. ಮಕರ ಸಂಕ್ರಮಣದಂದು ಬೆಳಿಗ್ಗೆಯಿಂದ ಸೇವಂತಿಗೆ ಪ್ರಿಯ ಬ್ರಹ್ಮಲಿಂಗೇಶ್ವರ ಸನ್ನಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗುತ್ತವೆ. ಕಾರುಣ್ಯಸಿಂಧು ಪ್ರಾಣಲಿಂಗನಿಗೆ ಭಕ್ತಿಯಿಂದ ಭಕ್ತರು ಸೇವಂತಿಗೆ ಪುಷ್ಪ ಅರ್ಪಿಸಿ ಪುನೀತರಾಗುತ್ತಾರೆ. ಮಕರ ಸಂಕ್ರಮಣದ ಬೆಳಿಗ್ಗೆಯಿಂದಲೇ ತುಳುನಾಡಿನ ಭಕ್ತಾದಿಗಳು ಬುಟ್ಟಿಯಲ್ಲಿ ಸೇವಂತಿಗೆ ಹೊತ್ತು ಬ್ರಹ್ಮಲಿಂಗನ ಸನ್ನಿಧಿಗೆ ಅರ್ಪಿಸಿ ಸಿರಿಮುಡಿ ಗಂಧ ಪ್ರಸಾದವನ್ನು ಮನೆಗೆ ತಗೆದುಕೊಂಡು ಹೋಗುವ ದೃಶ್ಯ ಮಕರ ಸಂಕ್ರಾಂತಿಯಂದು ಮಾರಣಕಟ್ಟೆಯಲ್ಲಿ ವಿಶೇಷವಾಗಿ ಕಂಡು ಬರುತ್ತದೆ. ಇದು ತಲೆತಲಾಂತರಗಳಿಂದ ಬಂದಿರುವ ವಾಡಿಕೆ ಮತ್ತು ನಂಬಿಕೆ. ಇಂದಿಗೂ ಅದು ಚಾಲ್ತಿಯಲ್ಲಿದೆ. ವರ್ಷದಿಂದ ವರ್ಷಕ್ಕೆ ತುಳುನಾಡಿಯಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆಯೂ ಹೆಚ್ಚಳ ಆಗುತ್ತಲೇ ಇರುತ್ತದೆ. ಈ ಬಾರಿಯೂ ಕೂಡಾ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸಿದ್ದರು.

ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಸಿ.ಸದಾಶಿವ ಶೆಟ್ಟಿ, ರಾಜ್ಯೋತ್ಸವ ಪ್ರಶಸಿ ಪುರಸ್ಕೃತ ಹೈದರಬಾದ್ ಉದ್ಯಮಿ ಕೃಷ್ಣಮೂರ್ತಿ ಮಂಜರು, ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿಗಳಾದ ಡಾ.ಅತುಲ್ ಕುಮಾರ್ ಶೆಟ್ಟಿ, ವಂಡಬಳ್ಳಿ ಜಯರಾಮ ಶೆಟ್ಟಿ, ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಾಗೂ ಸಿ.ರಘುರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಭಕ್ತಾದಿಗಳ ಅನುಕೂಲ ಸಕಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಸ್ವಚ್ಛತೆಗೆ ವಿಶೇಷ ಒತ್ತು ನೀಡಲಾಗಿತ್ತು. ಪ್ಲಾಸ್ಟಿಕ್ ಮುಕ್ತ ಮಾರಣಕಟ್ಟೆ ಜಾತ್ರೆಯ ಅಭಿಯಾನ ಕೂಡಾ ಕಂಡುಬಂತು.

ಜ.15ರ ರಾತ್ರಿ ಘಂಟೆ 10-30ಕ್ಕೆ ಗೆಂಡಸೇವೆ ನಡೆಯಲಿದೆ. ಜನವರಿ 16ರಂದು ಮಂಗಳವಾರ ಪೂರ್ವಾಹ್ನ ಘಂಟೆ 9.30ಕ್ಕೆ ಮಹಾಮಂಗಳಾರತಿ, ನಂತರ ಮಂಡಲ ಸೇವೆ ನಡೆಯಲಿದೆ. ಜನವರಿ 17 ಬುಧವಾರ ಪೂರ್ವಾಹ್ನ 9.30ಕ್ಕೆ ಮಹಾಮಂಗಳಾರತಿ, ನಂತರ ಮಂಡಲ ಸೇವೆ, ರಾತ್ರಿ ಘಂಟೆ 8ಕ್ಕೆ ಕಡಬು ನೈವೇದ್ಯ, ಮಹಾಮಂಗಳಾರತಿ, ರಾತ್ರಿ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮೇಳದವರಿಂದ ಯಕ್ಷಗಾನ ಸೇವೆ ಆಟ ನಡೆಯಲಿದೆ.

(ಚಿತ್ರಗಳು: ಸುಜಿ ಸ್ಟುಡಿಯೋ ವಂಡ್ಸೆ)

ವಿಡಿಯೋ: https://fb.watch/pAFqlqYjcG/

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!