spot_img
Thursday, April 16, 2026
spot_img

ಉಡುಪಿಯ ಕುಂಜಿಬೆಟ್ಟಿನ ಶಾರದಾ ಪಿ.ಯು ಕಾಲೇಜಿನ ವಿದ್ಯಾರ್ಥಿ ಕೃತಿ ಎಸ್ ಕುಲಾಲ್ ಗೆ 2024ರ ‘ಐ.ಎಂ.ಜೆ.ಐ.ಎಸ್.ಸಿ ಯಂಗ್ ಲೀಡರ್ ಅವಾರ್ಡ್’


ಕುಂದಾಪುರ: ವಿವೇಕಾನಂದರ ತತ್ವ ಮತ್ತು ಆದರ್ಶ ಕೇವಲ ಭಾರತಕ್ಕೆ ಅಲ್ಲ ಇಡೀ ವಿಶ್ವಕ್ಕೆ ಮಾದರಿ. ಯುವ ಪೀಳಿಗೆಯು ಅವರು ಬೋದಿಸಿದ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸತ್ಯದ ಹಾದಿಯಲ್ಲಿ ಸಾಗತ್ತಾ ಜೀವನದಲ್ಲಿ ಯಶಸ್ಸು ಸಾಧಿಸಬೇಕು. ಗೆಲುವಿಗಾಗಿ ಯಾವುದೇ ಅಡ್ಡ ಮಾರ್ಗ ಹಿಡಿಯದೆ ಆದರ್ಶ ವ್ಯಕ್ತಿತ್ವವನ್ನು ಮೈಗುಡಿಸಿಕೊಂಡು ಸದೃಢ ದೇಶವನ್ನು ಕಟ್ಟುವ ನೆಲೆಯಲ್ಲಿ ಸಿದ್ದರಾಗಬೇಕು ಎಂದು ಕುಂದಾಪುರದ ಭಂಡಾರ್ಕಾಕಾರ್ಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲಾರದ ಡಾ.ಎನ್.ಪಿ ನಾರಾಯಣ ಶೆಟ್ಟಿ ಹೇಳಿದರು.

ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆ ಮೂಡ್ಲಕಟ್ಟೆ, ಕುಂದಾಪುರ ಸ್ವಾಮಿ ವಿವೇಕಾನಂದರ ಜನ್ಮದಿನದ ಆಚರಣೆಯೊಂದಿಗೆ ‘ಐ ಎಂ ಜೆ ಐ ಎಸ್ ಸಿ ಯಂಗ್ ಲೀಡರ್ ಅವಾರ್ಡ್ 2024’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು,

ಪ್ರಸ್ತುತ ನಾವು ಸ್ಪರ್ಧಾ ಯುಗದಲ್ಲಿ ಇದ್ದೇವೆ. ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು. ವಿವೇಕಾನಂದರ ಆದರ್ಶದಂತೆ ಸತ್ಯತೇಯಿಂದ ಜೀವನದಲ್ಲಿ ಯಶಸ್ಸನ್ನು ಪಡೆಯಬೇಕು ಎಂದರು.

ಕಾಲೇಜಿನ ಉಪ ಪ್ರಾಂಶುಪಾಲರದ ಪ್ರೊ. ಜಯಶೀಲ ಕುಮಾರ್ ರವರು ಸ್ಪರ್ಧೆಯ ವಿವರವನ್ನು ನೀಡುತ್ತಾ ಆಯ್ಕೆಯ ಹಂತ ಮತ್ತು ಮಾನದಂಡವನ್ನು ವಿವರಿಸಿದರು. ಐದು ಹಂತದಲ್ಲಿ ನೆಡೆದ ಸ್ಪರ್ಧೆಯಲ್ಲಿ ವಿದ್ಯಾರ್ಥಿಯ ಶೈಕ್ಷಣಿಕ ಮತ್ತು ಇತರೆ ಪೂರ್ವ ಸಾಧನೆ, ಐಚ್ಚಿಕ ಮತ್ತು ಸ್ಥಳದಲ್ಲೇ ಆಯ್ದ ವಿಷಯದ ಕುರಿತ ಮಾತುಗರಿಕೆ, ಪ್ರಚಲಿತ ವಿದ್ಯಮಾನದ ತಿಳುವಳಿಕೆ ಮತ್ತು ಒತ್ತಡ ಸಂದರ್ಶನ ಇದರ ಆದರದ ಮೇಲೆ ಅಂತಿಮ ವಿಜೇತರನ್ನು ಘೋಷಿಸಲಾಗುವುದು ಎಂದರು. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಆಯ್ದ 22 ಕಾಲೇಜಿನಲ್ಲಿ ನಡೆದ ಎರಡು ಹಂತದ ಸ್ಪರ್ಧೆಯಲ್ಲಿ 200ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಅಂತಿಮ ಸ್ಪರ್ಧೆಯಲ್ಲಿ 15 ಕಾಲೇಜಿನ 45 ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ ಎಂದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದ ಸಂಸ್ಥೆಯ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ.ರಾಮಕೃಷ್ಣ ಹೆಗ್ಡೆ ಅಧ್ಯಕ್ಷಿಯ ಭಾಷಣದಲ್ಲಿ ಸ್ಪರ್ಧೆಯ ಮೂಲ ಉದ್ದೇಶ ಮತ್ತು ನಾಯಕತ್ವವನ್ನು ವಿದ್ಯಾರ್ಥಿ ಜೀವನದಲ್ಲಿ ಗುರುತಿಸುವುದು ತುಂಬಾ ಮುಖ್ಯ ಮತ್ತು ಅದರ ಪ್ರಾಮುಖ್ಯತೆ ಅವರ ಔದ್ಯೋಗಿಕ ನೆಲೆಯಲ್ಲಿ ಎಷ್ಟು ಪರಿಣಾಮಕಾರಿಯಾಗಬಲ್ಲದು ಎನ್ನುದನ್ನು ವಿವರಿಸಿದರು. ಈ ನಿಟ್ಟಿನಲ್ಲಿ ಸಂಸ್ಥೆಯು ಮುಂದಿನ ವರ್ಷವೂ ಈ ಸ್ಪರ್ಧೆಯನ್ನು ಇನ್ನಷ್ಟು ಮೌಲ್ಯಯುತವಾಗಿ ಹಮ್ಮಿಕೊಳ್ಳುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲೆ ಡಾ. ಪ್ರತಿಭಾ ಎಂ ಪಟೇಲ್, ತೀರ್ಪುಗಾರರಾದ ರಾಷ್ಟ್ರ ಪ್ರಶಸ್ತಿ ವಿಜೇತ ನಿರೂಪಕರಾದ ಅಕ್ಷಯ್ ಹೆಗ್ಡೆ, ಪ್ರೊ. ಅಮೃತಮಾಲ, ಡೀನ್ ಆಫ್ ಇಂಡಸ್ಟ್ರಿಯಲ್ ರಿಲೇಶನ್ಸ್ ಆಫ್ ಪ್ಲೇಸ್ಮೆಂಟ್. ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ. ಡಾ.ನಿಖಿಲಾ ಪೈ,BSH ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕರು, ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಸುಮನ ನೆರವೇರಿಸಿದರು. ಆಂಗ್ಲ ಸಹಾಯಕ ಪ್ರಾಧ್ಯಾಪಕಿ ಪ್ರೊ.ಪಾವನ ಪರಿಚಯಿಸಿದರು. ಬಿಸಿಎ ವಿಭಾಗದ ಮುಖ್ಯಸ್ಥೆಯವರಾದ ಪ್ರೊ. ಸ್ವರ್ಣ ರಾಣಿ ವಂದಿಸಿದರು. ವಿದ್ಯಾರ್ಥಿನಿ ಚೇತನ ಪ್ರಾರ್ಥನೆಗೈದರು.

ಅಂತಿಮ ಹಂತದ ಪ್ರಶಸ್ತಿ ವಿಜೇತರು
ಐ. ಎಂ. ಜೆ. ಐ. ಎಸ್. ಸಿ ಯಂಗ್ ಲೀಡರ್ ಅವಾರ್ಡ್ 2024 ಪುರಸ್ಕಾರ, 5000 ನಗದು ಮತ್ತು ಶಾಶ್ವತ ಫಲಕ- ಕೃತಿ.ಎಸ್ ಕುಲಾಲ್ (ಶಾರದಾ ಪಿ ಯು ಕಾಲೇಜು ಕುಂಜಿಬೆಟ್ಟು, ಉಡುಪಿ). ದ್ವಿತೀಯ-ಶಾಶ್ವತ ಪಾಲಕ ಮತ್ತು 2000 ನಗದು ಮತ್ತು ಶಾಶ್ವತ ಫಲಕ – ಕೈತಲಿನ್ (ಶಾರದಾ ಪಿ. ಯು ಕಾಲೇಜು ಕುಂಜಿಬೆಟ್ಟು ಉಡುಪಿ ). ತೃತೀಯ- ಶಾಶ್ವತ ಫಲಕ – ರಚನಾ ಆಚಾರ್ಯ (ಸಿದ್ದಾರ್ಥ ಪಿ ಯು ಕಾಲೇಜು ಭಟ್ಕಳ ). ಚತುರ್ಥ- ಸಹನಾ ಕಾಮತ್ ( ವಿವೇಕ ಪಿ ಯು ಕಾಲೇಜು ಕೋಟ ). ಪಂಚಮ: ಪ್ರಫುಲ್ (ಶಾರದಾ ಪಿ ಯು ಕಾಲೇಜು ಕುಂಜಿಬೆಟ್ಟು ಉಡುಪಿ ).

ಗುಂಪು ಹಂತದ ವಿಜೇತರು
ಸುಜ್ಞಾನ ತಂಡ: ಪ್ರಥಮ – ಶೈನಾ (ಭಂಡಾರ್ಕಾರ್ಸ್ ಪಿ. ಯು ಕಾಲೇಜು ಕುಂದಾಪುರ) ದ್ವಿತೀಯ- ಸುರಕ್ಷಾ ( ಆರ್ ಎನ್ ಶೆಟ್ಟಿ ಪಿ ಯು ಕಾಲೇಜು ಕುಂದಾಪುರ )
ಸಮೃದ್ಧಿ ತಂಡ: ಕೌಶಲ್ ಆಚಾರ್ಯ (ಜನತಾ ಇಂಡಿಪೆಂಡೆಂಟ್ ಪಿ ಯು ಕಾಲೇಜು ಹೆಮ್ಮಾಡಿ ) ದ್ವಿತೀಯ- ದುರ್ಗಾಶ್ರೀ (ಸರ್ಕಾರಿ ಪಿ ಯು ಕಾಲೇಜು ಬಿದ್ಕಲಕಟ್ಟೆ )
ಸಂಕಲ್ಪ ತಂಡ: ಪ್ರಥಮ – ಲಕ್ಷ್ಮಿಕಾಂತ್ (ಸರ್ಕಾರಿ ಪಿ ಯು ಕಾಲೇಜ್ ಉಡುಪಿ ) ದ್ವಿತೀಯ – ಮೇಘನಾ (ಸರ್ಕಾರಿ ಪಿ ಯು ಕಾಲೇಜು ಬೈಂದೂರು)

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!