Sunday, September 8, 2024

ಜನಸಾಮಾನ್ಯರ ಗೋಳು ಕಾಂಗ್ರೆಸ್ ಸರ್ಕಾರದ ಮುಂದೆ ‘ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ’ : ಬಿಜೆಪಿ ಆಕ್ರೋಶ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಮಕ್ಕಳ ಮೇಲಿನ ದೌರ್ಜನ್ಯದ ಘಟನೆ ಕೋಲಾರದ ಮಾಲೂರು ಯಲುವಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ನಡೆದಿರುವುದು ನೋಡಿದರೆ ರಾಜ್ಯದ ಕಾಂಗ್ರೆಸ್ ಸರ್ಕಾರದ ಹಳಿತಪ್ಪಿದ ಆಡಳಿತದಲ್ಲಿ ಮಕ್ಕಳು ಸುರಕ್ಷಿತವಾಗಿರಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿರುವುದು ಬಿಂಬಿತವಾಗುತ್ತಿದೆ ಎಂದು ಆಡೆಳಿತರೂಢ ಕಾಂಗ್ರೆಸ್‌ ಸರ್ಕಾರ ವಿರುದ್ಧ ಪ್ರತಿಪಕ್ಷ ಬಿಜೆಪಿ ಹರಿಹಾಯ್ದಿದೆ.  

ಕೋಲಾರದ ಮಾಲೂರು ಯಲುವಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ  ಶಾಲಾ ಮಕ್ಕಳನ್ನು ಮಲದ ಗುಂಡಿಗಿಳಿಸಿ ಸ್ವಚ್ಚಗೊಳಿಸಿದ ಪ್ರಕರಣ ಕಳೆದ ಡಿಸೆಂಬರ್‌ ನಲ್ಲಿ ನಡೆದಿತ್ತು.  ಶಾಲಾ ಮಕ್ಕಳನ್ನು ಮಲದ ಗುಂಡಿಗಿಳಿಸಿ ದೈಹಿಕ ದೌರ್ಜನ್ಯ ಮಾಡಲಾಗಿದೆ ಎಂದು ವಿರೋಧ ಪಕ್ಷ ಬಿಜೆಪಿ ಟೀಕಿಸಿತ್ತು.  

ತನ್ನ, ಅಧಿಕೃತ ಮೈಕ್ರೋ ಬ್ಲಾಗಿಂಗ್‌ ʼಎಕ್ಸ್‌ʼ ಖಾತೆಯ ಮೂಲಕ ಕಾಂಗ್ರೆಸ್‌ನನ್ನು ಟೀಕೆ ಮಾಡಿದ ಬಿಜೆಪಿ, ʼಪರಿಶಿಷ್ಟ ಸಮುದಾಯಕ್ಕೆ ಸೇರಿದವರೇ ದೌರ್ಜನ್ಯ ಶೋಷಣೆಗೆ ಗುರಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ನಿದ್ದೆಯಲ್ಲಿರುವ ಸರ್ಕಾರ ಎಚ್ಚರಗೊಳ್ಳುವುದು ಯಾವಾಗ? ಎಂದು ಪ್ರಶ್ನಿಸಿದ್ದಲ್ಲದೇ, ಮಳೆ ವಿಫಲ, ವ್ಯವಸಾಯಕ್ಕೆ ವಿದ್ಯುತ್ ನೀಡದ ಫಲ, ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ನಿರ್ಧಾರದಿಂದಾಗಿ ಬೆಳೆ ಉತ್ಪನ್ನ ಈ ಬಾರಿ ವಿಪರೀತ ತಗ್ಗಿದೆ. ಇದರ ಪರಿಣಾಮ ಅಕ್ಕಿ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು ಮುಂದಿನ ದಿನಗಳಲ್ಲಿ ‘ಅನ್ನ ಭಾಗ್ಯ’ ಯೋಜನೆಗೂ ಕುತ್ತು ತರಲಿದೆ ಎಂದು ಹೇಳಿದೆ.  

ಜನಸಾಮಾನ್ಯರ ಗೋಳು ಕಾಂಗ್ರೆಸ್ ಸರ್ಕಾರದ ಮುಂದೆ ‘ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ’. ಉಚಿತ ಬಸ್ ಯೋಜನೆಯಿಂದ ಗ್ರಾಮೀಣ ವಿದ್ಯಾರ್ಥಿಗಳ ಪಾಡು ಹೇಳತೀರದು, ಗಾಢ ನಿದ್ದೆಯಲ್ಲಿರುವ ಸರ್ಕಾರ ಎದ್ದು ತೊಂದರೆಗಳನ್ನು ಅನುಭವಿಸುತ್ತಿರುವ ಕಾಲೇಜು ವಿದ್ಯಾರ್ಥಿಗಳ ಸಮಸ್ಯೆ ಆಲಿಸುವುದೇ? ಎಂದು ಪ್ರಶ್ನಿಸಿದೆ.

ಇನ್ನು, ರಾಜ್ಯದ ಹದಗೆಟ್ಟ ಆರ್ಥಿಕ ಸ್ಥಿತಿ ದಿವಾಳಿಯತ್ತ ಸಾಗಿರುವುದನ್ನು ಸ್ವತಃ ಕಾಂಗ್ರೆಸ್ ಶಾಸಕರೇ ಸಾರಿ ಹೇಳುತ್ತಿದ್ದಾರೆ, ತಿಪಟೂರು ಶಾಸಕ ಷಡಕ್ಷರಿ ತಿಂಗಳಾದರೂ ಬಿಡಿಗಾಸು ಅನುದಾನವೂ ಬಿಡುಗಡೆಯಾಗದೆ, ಜನರ ಕೆಲಸ ಮಾಡಲಾಗದೇ ಬರಿಗೈ ಶಾಸಕರಾಗಿ ಖಾಲಿ ಕೂತಿದ್ದೇವೆ ಎಂದು ಆಡಳಿತ ಪಕ್ಷ ಶಾಸಕರಿಂದಲೇ ನಿದ್ದೆಯಲ್ಲಿರುವ ಸರ್ಕಾರದ ಬಂಡವಾಳ ಬಯಲಾಗುತ್ತಿದೆ.  ‘ಪರಿಹಾರ ಹೆಚ್ಚಿಸಿದ ಬಳಿಕ ರೈತರ ಆತ್ಮಹತ್ಯೆ ಹೆಚ್ಚಳವೆಂದು ನಿಮ್ಮ ಸಚಿವರು ಹೇಳಿಕೆ ನೀಡಿದ್ದಾರೆ. ಮೋದಿ ಸರ್ಕಾರ ನೀಡುತ್ತಿರುವ ಕಿಸಾನ್ ಸಮ್ಮಾನ್ ಯೋಜನೆಯ 6,000 ರೂ. ಗಳ ಜೊತೆ ಯಡಿಯೂರಪ್ಪ ಅವರು ನೀಡುತ್ತಿದ್ದ 4,000 ರೂ. ಕಡಿತಗೊಳಿಸಿರುವ ನಿಮ್ಮ ಸರ್ಕಾರಕ್ಕೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಉಳಿದಿದೆಯೇ? ನಿದ್ದೆಯಲ್ಲಿರುವ ಸರ್ಕಾರ ಎದ್ದು ರೈತರಿಗೆ ಬೆಳೆ ಪರಿಹಾರ ನೀಡಲಿ ಎಂದು ಒತ್ತಾಯಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!