Sunday, September 8, 2024

ರಾಮ ಮಂದಿರ ಲೋಕಾರ್ಪಣೆ : ಲಾಭ ಮತ್ತು ನಷ್ಟಗಳು ರಾಜಕಾರಣದ ಲೆಕ್ಕಚಾರ : ಕೋಟಾ ಶ್ರೀನಿವಾಸ ಪೂಜಾರಿ

ಜನಪ್ರತಿನಿಧಿ ವಾರ್ತೆ (ಕೆರಾಡಿ) : ಲಾಭ ಮತ್ತು ನಷ್ಟಗಳು ರಾಜಕಾರಣದ ಲೆಕ್ಕಚಾರ. ಭಾವುಕ ಭಕ್ತರಿಗೆ ಶ್ರೀರಾಮ ಮಂದಿರ ಲೋಕಾರ್ಪಣೆ ಆಗುತ್ತಿರುವುದೇ ಅತ್ಯಂತ ಖುಷಿಯ ವಿಚಾರ. ರಾಜಕೀಯ ಮಾಡುವವರು ರಾಜಕೀಯವೇ ಮಾಡುತ್ತಾರೆ. ಅಭಿವೃದ್ಧಿ ಮಾಡುವವರು ಅಭಿವೃದ್ಧಿ ಮಾಡುತ್ತಲೇ ಮುಂದೆ ಹೋಗುತ್ತಾರೆ ಎಂದುವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಇಲ್ಲಿ ಜನಪ್ರತಿನಿಧಿ ಪತ್ರಿಕೆಗೆ ಪ್ರತಿಕ್ರಿಯಿಸಿದ ಅವರು,ಈ ಪ್ರಪಂಚದಲ್ಲಿ ಮಾತುಗಳು, ವ್ಯಂಗ್ಯಗಳು, ಆಪಾದನೆಗಳು ಇರುವುದು ಸರ್ವೇ ಸಾಮಾನ್ಯ. ಅಡ್ವಾಣಿ ಅವರಿಗಾಗಲಿ, ಮುರುಳಿ ಮನೋಹರ ಜೋಶಿಯವರಿಗಾಗಲಿ ಅಥವಾ ರಾಷ್ಟ್ರಪತಿಯವರಿಗಾಗಲಿ ರಾಮ ಮಂದಿರ ಲೋಕಾರ್ಪಣೆಯ ಆಹ್ವಾನ ನೀಡಿಲ್ಲ ಎನ್ನುವುದು ಅಭಾಸವಾದ ಹೇಳಿಕೆಗಳು. ಎಲ್ಲರಿಗೂ ಆಹ್ವಾನ ನೀಡಲಾಗಿದೆ. ಎಲ್ಲರಿಗೂ ರಾಮ ಮಂದಿರದ ಕಾರ್ಯಕ್ರಮಕ್ಕೆ ಬನ್ನಿ ಎಂದೇ ಹೇಳಲಾಗಿದೆ. ವಯೋ ಸಹಜವಾದ ಸಮಸ್ಯೆಗಳಿದ್ದಲ್ಲಿ ಬರುವುದು, ಬಿಡುವುದು ಅವರವರ ಅನುಕೂಲಕ್ಕೆ ಬಿಟ್ಟಿದ್ದು. ಆಹ್ವಾನ ನೀಡಿಲ್ಲ ಎಂದು ಕೆಲವರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಇಂತಹ ವಿಚಾರಗಳನ್ನು ಸೃಷ್ಟಿ ಮಾಡುವುದೇ ಈ ಜೀವ ಜಗತ್ತಿನಲ್ಲಿ ಖುಷಿಯ ಸಂಗತಿ ಎಂದು ಅವರು ತಿಳಿದುಕೊಂಡಿದ್ದರೆ ಅಂತವರಿಗೆ ಶ್ರೀರಾಮಚಂದ್ರ ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಜನವರಿ ೨೨ ರಂದು ಅಧಿಕೃತವಾಗಿ ಲೋಕಾರ್ಪಣೆ ಆಗುವುದರ ಮೂಲಕ ದೇಶದ ಐತಿಹಾಸಿಕ ಘಟನೆ ಸಾಲಿಗೆ ಸೇರಲಿದೆ ಎನ್ನುವುದು ಶ್ರೀರಾಮ ಭಕ್ತರ ಭಾವನೆ. ಮಾತ್ರವಲ್ಲದೇ ಇದೊಂದು ಜಗತ್ತಿನ ಐತಿಹಾಸಿಕ ಘಟನೆ ಎಂಬ ಗೌರವಕ್ಕೆ ಪಾತ್ರವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ರಾಮ ಮಂದಿರ ಲೋಕಾರ್ಪಣೆ ಆಗುತ್ತಿರುವ ಹಿನ್ನೆಲೆಯಲ್ಲಿ ಜಾತಿ, ಧರ್ಮ, ವರ್ಗ, ವರ್ಣಗಳ ಬೇಧವಿಲ್ಲದೇ, ರಾಜಕೀಯವನ್ನು ಮರೆತು ಮನೆಮನೆಗೆ ಮಂತ್ರಾಕ್ಷತೆಯನ್ನು ನೀಡುವ ಸಂಪ್ರದಾಯ ನಿರಂತರವಾಗಿ ನಡೆಯುತ್ತಿದೆ.  ನಾನೂ ಕೂಡ ಇದರಲ್ಲಿ ಭಾಗಿಯಾಗಿದ್ದೇನೆ. ರಾಮ ಮಂದಿರ ಲೋಕಾರ್ಪಣೆ ಅತ್ಯಂತ ಶ್ರದ್ಧೆಯ ಕಾರ್ಯಕ್ರಮವಾಗಿ ರೂಪುಗೊಳ್ಳುತ್ತಿರುವುದು ಹೆಮ್ಮೆ ಎಂದರು ಅವರು ಹೇಳಿದ್ದಾರೆ.

ಇನ್ನು, ರಾಜ್ಯ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರು, ವಿಧಾನಸಭಾ ವಿಪಕ್ಷ ನಾಯಕ ಹಾಗೂ ಪರಿಷತ್‌ ವಿಪಕ್ಷ ನಾಯಕರ ಆಯ್ಕೆಯನ್ನು ಜಾತಿ ಆಧಾರದಲ್ಲಿ ಮಾಡಲಾಗಿದೆ, ಬಿಜೆಪಿಯಲ್ಲಿ ದೊಡ್ಡ ಒಡಕು ಕಾಣಿಸುತ್ತಿದೆ ಎಂಬ ಆರೋಪಗಳಿಗೆ ಉತ್ತರಿಸಿದ ಅವರು, ಬಿಜೆಪಿಯಲ್ಲಿ ಒಡಕೂ ಇಲ್ಲ, ಬಿರುಕೂ ಇಲ್ಲ. ಎಲ್ಲರೂ ಒಟ್ಟಾಗಿದ್ದೇವೆ ಎಂದು ಹೇಳಿದ್ದಲ್ಲದೇ, ಸಾಮಾಜಿಕವಾಗಿ ನ್ಯಾಯವನ್ನು ನೀಡಬೇಕಾಗಿರುವುದು ಒಂದು ರಾಜಕೀಯ ಪಕ್ಷದ ಜವಾಬ್ದಾರಿ. ಎಲ್ಲಾ ಒಂದೇ ಜಾತಿಯವರಿಗೆ ಕೊಟ್ಟರೆ, ಅದೊಂದು ಜಾತಿ ಪಕ್ಷವಾಗುತ್ತದೆ. ಬಿಜೆಪಿ ಸರ್ವರನ್ನು ಒಳಗೊಂಡ ರಾಜಕೀಯ ಪಕ್ಷ. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುವಾಗ ಎಲ್ಲಾ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅನಿವಾರ್ಯವಿದೆ. ಅದನ್ನು ಬಿಜೆಪಿ ಮಾಡಿದೆ ಎಂದು ಅವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!