Sunday, September 8, 2024

ಮಹಿಳಾ ಕಳ್ಳಸಾಗಣೆ : ಮರಳಿ ದೇಶಕ್ಕೆ ಸುರಕ್ಷಿತವಾಗಿ ಕಳುಹಿಸುತ್ತೇವೆ : ಒಮಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ

ಜನಪ್ರತಿನಿಧಿ ವಾರ್ತೆ (ನವ ದೆಹಲಿ) : ಜಾರ್ಖಂಡ್‌ನ 48 ವರ್ಷದ ಮಹಿಳೆಯೊಬ್ಬರಿಗೆ ಕೆಲಸ ಕೊಡಿಸುವ ನೆಪದಲ್ಲಿ ಒಮಾನ್‌ಗೆ ʼಕಳ್ಳಸಾಗಣೆʼ ಮಾಡಿದ ವಿಚಾರಕ್ಕ ಸಂಬಂಧಿಸಿದಂತೆ, ಒಮಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಆಕೆಯನ್ನು ಸಂಪರ್ಕಿಸಿ ರಕ್ಷಣೆ ಮಾಡಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಓಮನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತನ್ನ ಅಧಿಕೃತ  ʼXʼ ಖಾತೆಯ ಮೂಲಕ ಮಾಹಿತಿ ನೀಡಿದ್ದು, ಕೆಸಲ ಕೊಡಿಸುವ ನೆಪದಲ್ಲಿ ʼಮಹಿಳಾ ಕಳ್ಳಸಾಗಣೆʼಗೆ ಒಳಗಾಗಿದ್ದ ಮಹಿಳೆಯನ್ನು ರಕ್ಷಣೆ ಮಾಡಲಾಗಿದ್ದು. ಆಕೆಯೊಂದಿಗೆ ಪ್ರಾಥಮಿಕ ಸಮಾಲೋಚನೆ ಮಾಡಿದ್ದು, ಆಕೆಯ ತವರಿಗೆ ಮರಳಿ ಕಳಿಸುವಲ್ಲಿ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಕಚೇರಿ ಜವಾಬ್ದಾರಿ ವಹಿಸುತ್ತದೆ ಎಂದು ಮಾಹತಿ ನೀಡಿದೆ.

ಹೈದರಾಬಾದ್‌ನ ಗೋಲ್ಕೊಂಡದ ನಿವಾಸಿ ಫರೀದಾ ಬೇಗಂ, ತನಗೆ ಶೆನಾಜ್ ಬೇಗಂ ಎಂಬ ಮಹಿಳೆ ದುಬೈನಲ್ಲಿ ಮನೆಗೆಲಸದ ಉದ್ಯೋಗವನ್ನು ನೀಡುವುದಾಗಿ ಮತ್ತು ವಸತಿ ಮತ್ತು ಊಟದ ಹೊರತಾಗಿ 1,400 ದಿರ್ಹಮ್ (ಸುಮಾರು 31,700 ರೂ.) ನೀಡುವುದಾಗಿ ಭರವಸೆ ನೀಡಿದ್ದಳು ಎಂದು ರಾಯಭಾರ ಕಚೇರಿ ಆಕೆಯನ್ನು ಸಂಪರ್ಕಿಸಿ ಆಪ್ತ ಸಮಾಲೋಚನೆ ಮಾಡಿದಾದಗ ಹೇಳಿಕೊಂಡಿದ್ದಾಳೆ ಎಂದು ರಾಷ್ಟ್ರೀಯ ಸುದ್ಧಿ ಸಂಸ್ಥೆ ಇಂಡಿಯಾ ಟುಡೇ ವರದಿ ಮಾಡಿದೆ.

ಫರೀದಾ ಅವರ ಸಹೋದರಿ ಫಹ್ಮೀದಾ ಹೇಳುವ ಪ್ರಕಾರ, ಕೆಲಸವು ಅತೃಪ್ತಿಕರವಾಗಿದ್ದರೆ ಫರೀದಾ ಬೇಗಂ ಅವರು ಬಯಸಿದಾಗ ಮನೆಗೆ ಮರಳಬಹುದು ಎಂದು ಕೂಡ ಶೆನಾಜ್ ಹೇಳಿದ್ದಳು ಎಂಬುದಾಗಿ ತಿಳಿದು ಬಂದಿದೆ.

ನವೆಂಬರ್ 4, 2023 ರಂದು, ಫರೀದಾ ಬೇಗಂ 30 ದಿನಗಳವರೆಗೆ ವಿಸಿಟಿಂಗ್‌ ವೀಸಾದಲ್ಲಿ ಯುಎಇಗೆ ತೆರಳಿದರು. ಆಕೆಯನ್ನು ಅರಬ್ ಕುಟುಂಬಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಅವರು ತಮ್ಮ ಮನೆಗೆಲಸದವಳಾಗಿ ಕೆಲಸ ಮಾಡಲು ಪ್ರಾರಂಭಿಸಿದರು ಎಂದು ಫರೀದಾ ಅವರ ಸಹೋದರಿ ಇಂಡಿಯಾ ಟುಡೇ ಟಿವಿಗೆ ತಿಳಿಸಿರುವೂದಾಗಿ ವರದಿಯಾಗಿದೆ.

ಆ ಬಳಿಕ ಒಂದು ತಿಂಗಳ ನಂತರ, ಫರೀದಾ ತೀವ್ರ ಅನಾರೋಗ್ಯಕ್ಕೆ ಒಳಗಾದರು ಮತ್ತು ಮನೆಗೆ ಮರಳುವ ಬಯಕೆಯನ್ನು ವ್ಯಕ್ತಪಡಿಸಿದರು, ಆದರೆ ಶೆನಾಜ್ ಬೇಗಂ ಅವರ ಪಾಸ್‌ಪೋರ್ಟ್ ಅನ್ನು ತಡೆಹಿಡಿಯಲಾಗಿದೆ ಎಂದು ಆರೋಪಿಸಲಾಗಿದೆ.

ಇದೇ ಸಂದರ್ಭದಲ್ಲಿ ಫರೀದಾಳ ಸ್ಥಿತಿ ಹದಗೆಟ್ಟಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಶೆನಾಜ್ ಬೇಗಂ ಆಕೆಯನ್ನು ಒಮಾನ್‌ನ ರಾಜಧಾನಿ ಮಸ್ಕತ್‌ಗೆ “ಟ್ರಾಫಿಕ್”/ ಮಹಿಳಾ ಕಳ್ಳಸಾಗಣೆ ಮಾಡಿದ್ದಾಳೆ ಎಂದು ಫಹ್ಮೀದಾ ಆರೋಪಿಸಿದ್ದಾರೆ.

ಮಸ್ಕತ್‌ನಲ್ಲಿ ಫರೀದಾ ಬೇಗಂ ಅವರಿಗೆ ಕಿಡ್ನಿ ಸೋಂಕು ಇರುವುದು ಪತ್ತೆಯಾಯಿತು ಎಂದು ಅವರ ಸಹೋದರಿ ತಿಳಿಸಿದ್ದಾರೆ.

ಫಹ್ಮೀದಾ ಅವರು ಡಿಸೆಂಬರ್ 28, 2023 ರಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದು, ತನ್ನ ಸಹೋದರಿಯನ್ನು ರಕ್ಷಿಸಬೇಕು ಎಂದು ಸರ್ಕಾರದ ಸಹಾಯವನ್ನು ಕೋರಿದ್ದರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!