Sunday, September 8, 2024

‘ಭಾರತವು ನಿಜವಾಗಿಯೂ ಜಾಗತಿಕ ಶಕ್ತಿಯಾಗಿದೆ, ವೇಗವಾಗಿ  ಆರ್ಥಿಕ ಪ್ರಗತಿಯತ್ತ ಸಾಗುತ್ತಿದೆ…ʼ : ಚೈನೀಸ್ ದಿನಪತ್ರಿಕೆ

ಜನಪ್ರತಿನಿಧಿ ವಾರ್ತೆ (ನವ ದೆಹಲಿ ) : ಪ್ರಮುಖ ಸರ್ಕಾರಿ ಪ್ರಾಯೋಜಿತ ಚೀನೀ ಪತ್ರಿಕೆ  ಗ್ಲೋಬಲ್ ಟೈಮ್ಸ್, , ಭಾರತ ಸರ್ಕಾರ ಆರ್ಥಿಕ ಪ್ರಗತಿಯನ್ನು ಶ್ಲಾಘಿಸಿದೆ.

ಫುಡಾನ್ ವಿಶ್ವವಿದ್ಯಾನಿಲಯದ ದಕ್ಷಿಣ ಏಷ್ಯಾ ಅಧ್ಯಯನ ಕೇಂದ್ರದ ನಿರ್ದೇಶಕ ಜಾಂಗ್ ಜಿಯಾಡಾಂಗ್ ಅವರು ಜನವರಿ 2 ರಂದು ಗ್ಲೋಬಲ್ ಟೈಮ್ಸ್ ಪತ್ರಿಕೆಯಲ್ಲಿ ಬರೆದ ಲೇಖನವೊಂದರಲ್ಲಿ ನಾಲ್ಕು ವರ್ಷಗಳಲ್ಲಿ ಭಾರತದ ಗಮನಾರ್ಹ ಸಾಧನೆಗಳನ್ನು ಎತ್ತಿ ತೋರಿಸಿದ್ದಾರೆ.

ಇದು ಭಾರತದ ಆರ್ಥಿಕ ಬೆಳವಣಿಗೆ, ನಗರ ಆಡಳಿತದಲ್ಲಿನ ಸುಧಾರಣೆಗಳು ಮತ್ತು ಅಂತರಾಷ್ಟ್ರೀಯ ಸಂಬಂಧ, ವಿಶೇಷವಾಗಿ ಚೀನಾದೊಂದಿಗೆ ಬದಲಾದ ಧೋರಣೆಯ ಬಗ್ಗೆ ಅವರು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.  

“ಒಂದೆಡೆ, ಭಾರತವು ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ಮಹತ್ತರವಾದ ಸಾಧನೆಗಳನ್ನು ಮಾಡಿದೆ. ಭಾರತದ ಆರ್ಥಿಕತೆತ ಪ್ರಗತಿ ದಿನೆದಿನೆ ವೇಗ ಪಡೆದುಕೊಳ್ಳುತ್ತಿದ್ದು, ವಿಶ್ವದ  ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕವಾಗಿ ಪ್ರಗತಿ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಒಂದಾಗುವ ಹಾದಿಯಲ್ಲಿದೆ” ಎಂದು ಜಾಂಗ್ ಲೇಖನದಲ್ಲಿ ಬರೆದಿದ್ದಾರೆ.

“ಉದಾಹರಣೆಗೆ, ಚೀನಾ ಮತ್ತು ಭಾರತದ ನಡುವಿನ ವ್ಯಾಪಾರ ಅಸಮತೋಲನವನ್ನು ಚರ್ಚಿಸುವಾಗ, ಭಾರತೀಯ ವ್ಯವಹಾರದ ವಲಯದಲ್ಲಿ ಮೊದಲು ವ್ಯಾಪಾರದ ಅಸಮತೋಲನವನ್ನು ಕಡಿಮೆ ಮಾಡಲು ಚೀನಾದ ಕ್ರಮಗಳ ಮೇಲೆ ಪ್ರಾಥಮಿಕವಾಗಿ ಗಮನಹರಿಸುತ್ತಿದ್ದರು. ಆದರೆ ಈಗ ಭಾರತದ ರಫ್ತು ಸಾಮರ್ಥ್ಯದ ಮೇಲೆ ಹೆಚ್ಚು ಒತ್ತು ನೀಡುತ್ತಿದ್ದಾರೆ,” ಎಂದೂ ಕೂಡ ಉಲ್ಲೇಖಿಸಿದ್ದಾರೆ.

“ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ, ಭಾರತವು ಪಶ್ಚಿಮದೊಂದಿಗಿನ ತನ್ನ ಪ್ರಜಾಸತ್ತಾತ್ಮಕ ಒಮ್ಮತಕ್ಕೆ ಒತ್ತು ನೀಡುವುದರಿಂದ ಪ್ರಜಾಸತ್ತಾತ್ಮಕ ರಾಜಕೀಯದ ‘ಭಾರತೀಯ ವೈಶಿಷ್ಟ್ಯ’ವನ್ನು ಎತ್ತಿ ತೋರಿಸುತ್ತದೆ. ಪ್ರಸ್ತುತ, ಪ್ರಜಾಸತ್ತಾತ್ಮಕ ರಾಜಕೀಯದ ಭಾರತೀಯ ಮೂಲದ ಮೇಲೆ ಇನ್ನೂ ಹೆಚ್ಚಿನ ಒತ್ತು ನೀಡಲಾಗಿದೆ” ಎಂದು ಲೇಖನವು ಹೇಳಿದೆ.

ತನ್ನ ಲೇಖನದಲ್ಲಿ, ಜಿಯಾಡಾಂಗ್ ತನ್ನ ಐತಿಹಾಸಿಕ ವಸಾಹತುಶಾಹಿ ಕಾಲಘಟ್ಟವನ್ನು ಮೀರಿ  ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ “ವಿಶ್ವಕ್ಕೆ ಮಾರ್ಗದರ್ಶಿಯಾಗಿʼ ಬೆಳೆಯುವ ಭಾರತದ ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಲೇಖನದಲ್ಲಿ ಹೇಳಿರುವುದಲ್ಲದೇ, ರಷ್ಯಾ-ಉಕ್ರೇನ್‌ ನಡುವಿನ ಯುದ್ಧದ ಸಂದರ್ಭದಲ್ಲಿ ಯುಎಸ್, ಜಪಾನ್ ಮತ್ತು ರಷ್ಯಾದೊಂದಿಗಿನ ಸಂಬಂಧಗಳನ್ನು  ಹೇಗೆ ಸಹಾಯ ಮಾಡಿದೆ ಎಂಬುದನ್ನು ಎತ್ತಿ ತೋರಿಸುತ್ತಿರುವಾಗ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಬಹು-ಜೋಡಣೆ ತಂತ್ರವನ್ನು ಲೇಖನವು ಶ್ಲಾಘಿಸಿದೆ.

“ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡಾಗಿನಿಂದ, ಅವರು ಬಹು-ಜೋಡಣೆ ತಂತ್ರವನ್ನು ಪ್ರತಿಪಾದಿಸಿದ್ದಾರೆ, ಯುಎಸ್, ಜಪಾನ್, ರಷ್ಯಾ ಮತ್ತು ಇತರ ದೇಶಗಳು ಮತ್ತು ಪ್ರಾದೇಶಿಕ ಸಂಸ್ಥೆಗಳೊಂದಿಗೆ ಭಾರತದ ಸಂಬಂಧಗಳನ್ನು ಉತ್ತೇಜಿಸುತ್ತಿದ್ದಾರೆ” ಎಂದು ಜಾಂಗ್ ಲೇಖನದಲ್ಲಿ ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!