spot_img
Saturday, April 18, 2026
spot_img

ʼಶ್ರೀರಾಮ ಮಾಂಸಹಾರಿʼ ಹೇಳಿಕೆ : ಕ್ಷಮೆಯಾಚಿಸಿದ ಎನ್‌ಸಿಪಿ ನಾಯಕ ಜಿತೇಂದ್ರ ಅವ್ಹಾದ್ !

ಜನಪ್ರತಿನಿಧಿ ವಾರ್ತೆ ( ನವ ದೆಹಲಿ ) : ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಜಿತೇಂದ್ರ ಅವ್ಹಾದ್ ಅವರು ಭಗವಾನ್ ರಾಮನನ್ನು ‘ಮಾಂಸಾಹಾರಿ’ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದು, ಅವರ ಹೇಳಿಕೆ ಇಂದು( ಗುರುವಾರ) ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಅವರು ಕ್ಷಮೆಯಾಚಿಸಿದ್ದಾರೆ.

ಮಹಾರಾಷ್ಟ್ರದ ಶಿರಡಿಯಲ್ಲಿ ನಿನ್ನೆ(ಬುಧವಾರ) ನಡೆದ ಕಾರ್ಯಕ್ರಮವೊಂದರಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎನ್‌ಸಿಪಿ-ಶರದ್ ಪವಾರ್ ಬಣದ ನಾಯಕ ಅವ್ಹಾದ್, “ರಾಮ ನಮ್ಮವನು, ಅವನು ಬಹುಜನ ಪ್ರಿಯ, ರಾಮ ಬೇಟೆಯಾಡಿ ತಿನ್ನುತ್ತಿದ್ದ, ನಾವು ಸಸ್ಯಾಹಾರಿಗಳಾಗಬೇಕೆಂದು ನೀವು ಬಯಸುತ್ತೀರಿ, ಆದರೆ ರಾಮನನ್ನು ಅನುಸರಿಸುತ್ತೇವೆ. ನಮ್ಮ ಆದರ್ಶಪುರಷನಂತೆ ನಾವು ಇದ್ದೇವೆ.  ಕುರಿ, ಮಾಂಸವನ್ನು ತಿನ್ನಿರಿ, ರಾಮ ಸಸ್ಯಾಹಾರಿಯಾಗಿರಲಿಲ್ಲ. ಮಾಂಸಾಹಾರಿಯಾಗಿದ್ದ. ನಾನು “ಸಂಶೋಧನೆ ಇಲ್ಲದೆ ಮಾತನಾಡುವುದಿಲ್ಲ” ಎಂದು ಉಲ್ಲೇಖಿಸಿದ ಅವ್ಹಾದ್, ಹಿಂದೂ ಮಹಾಕಾವ್ಯ ರಾಮಾಯಣವು ತಾನು ಹೇಳಿದ್ದನ್ನು ಉಲ್ಲೇಖಿಸುತ್ತದೆ ಎಂದು ಹೇಳಿದ್ದರು.

ಅಯೋಧ್ಯೆಯಲ್ಲಿ  ಶ್ರೀರಾಮಮಂದಿರದ ಶಂಕುಸ್ಥಾಪನೆಗೆ ಕೆಲವೇ ದಿನಗಳು ಇರುವಾಗಲೇ ಅವರ ಈ  ಹೇಳಿಕೆಗೆ ಬಿಜೆಪಿ ತೀವ್ರ ಟೀಕೆ ಮಾಡಿದೆ. ರಾಮನ ವಿರುದ್ಧ “ಆಕ್ಷೇಪಾರ್ಹ ಟೀಕೆಗಳನ್ನು” ಮಾಡಿದ್ದಕ್ಕಾಗಿ ಪಕ್ಷವು ಅವ್ಹಾದ್ ವಿರುದ್ಧ ದೂರು ದಾಖಲಿಸಿದೆ.

ಅವರ ಈ ಹೇಳಿಕೆ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ “ನಾನು ಸಂಶೋಧನೆಯಿಲ್ಲದೆ ಮಾತನಾಡುವುದಿಲ್ಲ … ನಾನು ಈ ವಿಷಯವನ್ನು ತೀವ್ರಗೊಳಿಸಲು ಬಯಸುವುದಿಲ್ಲ, ಆದರೆ ನಾನು ಹೇಳಿದ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಹೇಳಿದ್ದಾರೆ.

ಆದರೆ, “ನಾನು ಭಾಷಣ ಮಾಡಿದ ಹಲವಾರು ನಿದರ್ಶನಗಳಿವೆ, ಮತ್ತು ನನ್ನ ಭಾಷಣದಲ್ಲಿ ನಾನು ಏನನ್ನೂ ತಿರುಚಿಲ್ಲ, ಈ ವಿಷಯವನ್ನು ನಾನು ಉಲ್ಬಣಗೊಳಿಸಲು ಬಯಸುವುದಿಲ್ಲ. ಆದರೆ ವಾಲ್ಮೀಕಿ ರಾಮಾಯಣದಲ್ಲಿ, ಅನೇಕ ಕಾಂಡಗಳು (ಪುಸ್ತಕಗಳು) ಇವೆ. ಅಯೋಧ್ಯಾ ಕಾಂಡವಿದೆ, ಅದರಲ್ಲಿ ಶ್ಲೋಕ (ಶ್ಲೋಕ) 102 ಇದೆ, ಅದು ನಾನು ಈ ವಿಛಾರವನ್ನು ಉಲ್ಲೇಖಿಸುತ್ತದೆ.” “ತಾರ್ಕಿಕವಾಗಿ ಮಾತನಾಡಲು ಸಾಧ್ಯವಾಗದವರು ನನ್ನ ಆಖ಼ಪ ವ್ಯಕ್ತಪಡಿಸುತ್ತಿದ್ದಾರೆ. ರಾಮ ನಮ್ಮ ಹೃದಯದಲ್ಲಿ ಉಳಿಯುತ್ತಾನೆ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ” ಎಂದು ಅವ್ಹಾದ್ ಹೇಳಿದರು.

ಮಾತ್ರವಲ್ಲದೇ ಎನ್‌ಸಿಪಿ ನಾಯಕ ಅವ್ಹಾದ್ ತಮ್ಮ ಭಾಷಣದಲ್ಲಿ ಭಾರತವನ್ನು ಸಸ್ಯಾಹಾರಿ ರಾಷ್ಟ್ರವನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದರು. ದೇಶದ ಜನಸಂಖ್ಯೆಯ ಶೇಕಡಾ 80 ರಷ್ಟು ಜನರು ಇನ್ನೂ ಮಾಂಸಾಹಾರಿಗಳಾಗಿದ್ದು, ಅವರು ಶ್ರೀರಾಮನ ಭಕ್ತರು ಎಂದು ಅವರು ಹೇಳಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!