spot_img
Sunday, June 14, 2026
spot_img

ಎಚ್‌ಡಿಕೆ ಮಾತ್ರ ಬಿಜೆಪಿಯ ರಕ್ಷಣೆಗೆ ಬಿಜೆಪಿಗರಿಗಿಂತ ನಾಲ್ಕು ಹೆಜ್ಜೆ ಮುಂದೆ ನಿಂತಿದ್ದಾರೆ! : ಕಾಂಗ್ರೆಸ್‌ ವ್ಯಂಗ್ಯ 

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಜಗತ್ತಿನ ಏಕೈಕ ಮಹಾ ಪ್ರಾಮಾಣಿಕ ಎಚ್‌. ಡಿ ಕುಮಾರಸ್ವಾಮಿ ಅವರೇ, ನೀವು ನಂಬಬೇಕು ಎಂದರೆ ಹಗರಣ ಎಷ್ಟು ಸಾವಿರ ಕೋಟಿಯದ್ದಾಗಿರಬೇಕು? ಎಂದು ಆಡಳತರೂಢ ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

ಇತ್ತೀಚೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಕೋವಿಡ್‌ ಸಂದರ್ಭದಲ್ಲಿ ಬಿಜೆಪಿ ಸರ್ಕಾರದಲ್ಲಿ ಸುಮಾರು 40,000 ಕೋಟಿ ಭ್ರಷ್ಟಾಚಾರ ನಡೆದಿದೆ. ತನ್ನನ್ನು ಉಚ್ಚಾಟನೆ ಮಾಡಿದರೆ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ 40,000 ಕೋಟಿ ಕೂ. ಅಕ್ರಮ ಎಂದರೇ ನಂಬುವುದಕ್ಕೆ ಸಾಧ್ಯವಿದೆಯೇ ಎಂದು ಪ್ರಶ್ನಿಸಿ ಪರೋಕ್ಷವಾಗಿ ಬಿಜೆಪಿಯನ್ನು ಸಮರ್ಥಿಸಿಕೊಂಡಿದ್ದರು. ಇತ್ತೀಚೆಗೆ ಜೆಡಿಎಸ್‌ ಬಿಜೆಪಿಯೊಂದಿಗೆ ಮೈತ್ರಿಯಾಗಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಕುಮಾರ ಸ್ವಾಮಿ ಅವರ ಸಂದೇಹಕ್ಕೆ ಉತ್ತರಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರ, ಕುಮಾರಸ್ವಾಮಿ ಅವರನ್ನು ಉಲ್ಲೇಖಿಸಿ, ಬಹುಶಃ ತಮಗೆ 40,000 ಕೋಟಿ ಜುಜುಬಿ ಮೊತ್ತ ಇರಬಹುದೇನೋ! ಸ್ವತಃ ಬಿಜೆಪಿಗರೇ 40 ಸಾವಿರ ಕೋಟಿಯ ಹಗರಣದ ಬಗ್ಗೆ ಮಾತನಾಡಲು ತಯಾರಿಲ್ಲ, ನಿರಾಕರಿಸಲೂ ತಯಾರಿಲ್ಲ ಎಂದು ಹೇಳಿದೆ.

ಮಾತ್ರವಲ್ಲದೇ, ಕುಮಾರಸ್ವಾಮಿಯವರು ಮಾತ್ರ ಬಿಜೆಪಿಯ ರಕ್ಷಣೆಗೆ ಬಿಜೆಪಿಗರಿಗಿಂತ ನಾಲ್ಕು ಹೆಜ್ಜೆ ಮುಂದೆ ನಿಂತಿದ್ದಾರೆ! ಎಂದು ಕಾಂಗ್ರೆಸ್‌ ಅಪಹಾಸ್ಯ ಮಾಡಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!