spot_img
Monday, April 20, 2026
spot_img

ಕೇರಳದಲ್ಲಿ ನಕ್ಸಲ್‌ ಮಹಿಳೆ ಸಾವು : ಇದಕ್ಕೆ ಪ್ರತೀಕಾರ ತೀರಿಸಲಾಗುವುದು ಎಂಬ ಪೋಸ್ಟರ್‌ ಅಂಟಿಸಿದ ಮಾವೋವಾದಿಗಳು !

ಜನಪ್ರತಿನಿಧಿ ವಾರ್ತೆ(ವಯನಾಡು) : ಕಣ್ಣೂರು ಅಯ್ಯನ್‌ಕುನ್‌ನಲ್ಲಿ ನಡೆದ ಥಂಡರ್‌ಬೋಲ್ಟ್‌- ನಕ್ಸಲ್‌ ಕಾದಾಟದಲ್ಲಿ ಒಬ್ಬ ಮಹಿಳಾ ಸದಸ್ಯೆ ಹತಳಾಗಿದ್ದಾಳೆ ಎಂದು ಮಾವೋವಾದಿಗಳು ಪೋಸ್ಟರ್‌ನಲ್ಲಿ ಬಹಿರಂಗಪಡಿಸಲಾಗಿದೆ.

ನ. 13ರಂದು ಕಣ್ಣೂರಿನಲ್ಲಿ ನಡೆದ ಪೊಲೀಸರು ನಕ್ಸಲರ ಗುಂಪಿನ ಮೇಲೆ ಗುಂಡಿನ ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಲಕ್ಷ್ಮಿ ಅಲಿಯಾಸ್ ಕವಿತಾ ಎಂಬಾಕೆ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದಳು. ಆಕೆ ಚಿಕಿತ್ಸೆ ಪಡೆಯುತ್ತಿರುವಾಗ ಮೃತಪಟ್ಟಿದ್ದಾಳೆ. ಇದಕ್ಕೆ ಪ್ರತೀಕಾರ ತೀರಿಸಲಾಗುವುದು ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಕವಿತಾ ಆಂಧ್ರಪ್ರದೇಶ ಮೂಲದವಳಾಗಿದ್ದಾಳೆ.

2016ರಲ್ಲಿ ಕೇರಳದಲ್ಲಿ ಪಿಣರಾಯಿ ವಿಜಯನ್ ಅವರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಡೆದ ಎನ್‌ಕೌಂಟರ್‌ಗಳಲ್ಲಿ ಇದು 9ನೇ ಮಾವೊವಾದಿ ಹತ್ಯೆಯಾಗಿದೆ.
ವಯನಾಡಿನ ತಿರುನೆಲ್ಲಿಯ ಗುಂಡಿಕ ಪರಂಬ್‌ ಎಂಬ ಕಾಲೋನಿಯಲ್ಲಿ ಪ್ರತೀಕಾರದ ಪೋಸ್ಟರ್‌ ಹಾಕಲಾಗಿದೆ. ಗುರುವಾರ ರಾತ್ರಿ ಕಾಲೋನಿಗೆ ಬಂದ ಐದಾರು ನಕ್ಸಲರ ತಂಡ 5 ಪೋಸ್ಟರ್‌ ಮತ್ತು ಒಂದು ಚೀಟಿಯನ್ನು ಅಂಟಿಸಿದೆ.

ನ. 13ರಂದು ಕಣ್ಣೂರಿನ ಅಯ್ಯನಕುನ್ನುದ ಆರಳದಲ್ಲಿ ಮುಂಜಾನೆ ಪೊಲೀಸರ ಥಂಡರ್‌ ಬೋಲ್ಟ್‌ ತಂಡ ಮತ್ತು ಮಾವೋವಾದಿಗಳ ನಡುವೆ ಕಾದಾಟ ನಡೆದಿತ್ತು. ಇಲ್ಲಿ ನಕ್ಸಲರ ಹಾಜರಿ ಕುರಿತಾಗ ಮಾಹಿತಿ ಬಂದ ಆಧಾರದಲ್ಲಿ ಪೊಲೀಸರು ಪರಿಶೀಲನೆ ನಡೆಸುವಾಗ, ನಕಲರು ಗುಂಡು ಹಾರಿಸಿದ್ದರು. ಇದಕ್ಕೆ ಥಂಡರ್ ಬೋಲ್ಟ್ ಪ್ರತಿ ದಾಳಿ ನಡೆಸಿತ್ತು. ಆದರೆ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಡಿಐಜಿ ಪುಟ್ಟ ವಿಮಲಾದಿತ್ಯ ತಿಳಿಸಿದ್ದರೂ, ದಾಳಿ ನಡೆದು ಎರಡು ದಿನದ ಬಳಿಕ ಕೆಲವರು ಗಾಯಗೊಂಡಿದ್ದಾರೆ ಎಂದು ಹೇಳಿಕೆ ಬದಲಾಯಿಸಿದ್ದರು. ಮಾವೋವಾದಿ ಗುಂಪಿನ ಕೆಲವರನ್ನು ಹತ್ಯೆ ಮಾಡಲಾಗಿದೆ ಎಂಬ ವದಂತಿ ಹಬ್ಬಿದ್ದರೂ ಇದನ್ನು ಖಚಿತಪಡಿಸಲು ಪೊಲೀಸರು ಸಿದ್ಧರಿರಲಿಲ್ಲ.

ಕವಿತಾಗೆ ಗುಂಡೇಟು ಬಿದ್ದು ಗಾಯವಾಗಿತ್ತು. ಮಾವೊವಾದಿಗಳು ಆಕೆಯನ್ನು ಬೇರೆಡೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದರು. ಆಕೆ ಯಾವಾಗ ಮೃತಪಟ್ಟಿದ್ದಾಳೆ ಎನ್ನುವುದನ್ನು ಬಹಿರಂಗಪಡಿಸಿಲ್ಲ. ಘಟನೆಯಲ್ಲಿ ಕೆಲವರಿಗೆ ಗಾಯವಾಗಿರುವುದನ್ನು ತಿಳಿದಿದ್ದ ಪೊಲೀಸರು, ಕಾಡಿನ ಒಳಗೆ ಹಲವು ದಿನಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿದ್ದರು.

ಇನ್ನು, ತಮ್ಮ ನಾಯಕಿಯ ಸಾವಿನ ಪ್ರತೀಕಾರ ತೀರಿಸಿಕೊಳ್ಳುವುದಾಗಿ ನಕ್ಸಲರ ಗುಂಪು ಪೋಸ್ಟರ್‌ಗಳಲ್ಲಿ ಎಚ್ಚರಿಕೆ ನೀಡಿದೆ. ಹತ್ಯೆಯಾದ ಕವಿತಾಳ ಮೃತದೇಹವನ್ನು ಪಶ್ಚಿಮ ಘಟ್ಟದ ಕಾಡಿನಲ್ಲಿ ಹೂಳಿರುವುದಾಗಿ ಕೂಡ ಪೋಸ್ಟರ್‌ಗಳಲ್ಲಿ ತಿಳಿಸಲಾಗಿದೆ. ಸಿಪಿಐ (ಮಾವೊವಾದಿ) ಪಶ್ಚಿಮ ಘಟ್ಟಗಳ ವಿಶೇಷ ವಲಯ ಸಮಿತಿ ವಕ್ತಾರ ಜೋಗಿ, ಲಕ್ಷ್ಮಿ ಅಲಿಯಾಸ್ ಕವಿತಾ ಹುತಾತ್ಮಳಾಗಿದ್ದಾಳೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ

ಪಿಎಲ್‌ಜಿಎದ ಮತ್ತೊಬ್ಬ ಸದಸ್ಯ ರಾಮು ಅಲಿಯಾಸ್ ಲಿಜೇಶ್ 2021ರಲ್ಲಿ ಪೊಲೀಸರಿಗೆ ಶರಣಾಗಿದ್ದ. ಕವಿತಾ ಆತನ ಪತ್ನಿ ಎನ್ನಲಾಗಿದೆ. ಪಶ್ಚಿಮ ಘಟ್ಟ ಸಮಿತಿ ರಚಿಸುವುದಕ್ಕೂ ಮುನ್ನ ಆಕೆ, ಕರ್ನಾಟಕದಲ್ಲಿನ ತುಂಗಭದ್ರ ಸ್ಕ್ವಾಡ್‌ನ ಸದಸ್ಯೆಯಾಗಿದ್ದಳು. 2015ರಲ್ಲಿ ಆಕೆ ಕಬನಿ ಸ್ಕ್ವಾಡ್ ಸೇರಿಕೊಂಡಿದ್ದಳು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!