Sunday, September 8, 2024

ಪಾಕ್‌ ಸೇನೆಯಿಂದ ಶಾರದಾ ಮಂದಿರ ಅತಿಕ್ರಮಣ : ತೆರವುಗೊಳಿಸಲು ಸಹಾಯ ಕೋರಿ ಸಮಿತಿಯಿಂದ ಕೇಂದ್ರಕ್ಕೆ ಮನವಿ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿರುವ ಶಾರದಾ ಮಂದಿರದ ಆವರಣವನ್ನು ಪಾಕಿಸ್ತಾನ ಸೇನೆ ಅತಿಕ್ರಮಿಸಿಕೊಂಡಿರುವ ಹಿನ್ನೆಲೆಯಲ್ಲಿ, ಅದನ್ನು ತೆರವುಗೊಳಿಸಲು ಶಾರದಾ ಮಂದಿರ ಉಳಿಸಿ ಸಮಿತಿ(ಎಸ್‌ಎಸ್‌ಸಿ) ಇಂದು(ಶುಕ್ರವಾರ) ಕೇಂದ್ರ ಸರ್ಕಾರವನ್ನು ಕೋರಿದೆ.

ಇಲ್ಲಿನ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಸ್‌ಎಸ್‌ಸಿ ಸಂಸ್ಥಾಪಕ ರವೀಂದರ್ ಪಂಡಿತ್, ನ್ಯಾಯಾಲಯದ ಆದೇಶದ ಹೊರತಾಗಿಯೂ ಪಾಕಿಸ್ತಾನ ಸೇನೆಯು ಶಿಥಿಲಗೊಂಡಿರುವ ಹಳೆಯ ಶಾರದಾ ದೇವಸ್ಥಾನದ ಆವರಣವನ್ನು ಅತಿಕ್ರಮಿಸಿ ಕಾಫಿ ಹೋಮ್ ತೆರೆದಿದೆ ಎಂದು ಆರೋಪಿಸಿದ್ದಾರೆ.

ಶಾರದಾ ಪೀಠದ ಆವರಣದಲ್ಲಿ ಪಾಕಿಸ್ತಾನ ಸೇನೆಯು ಇತ್ತೀಚೆಗೆ ನಿರ್ಮಿಸಿರುವ ಕಾಫಿ ಹೋಮ್‌ನ ಅತಿಕ್ರಮಣ ಮತ್ತು ತೆರವು ಕುರಿತು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಶಾರದಾ ಮಂದಿರ ಉಳಿಸಿ ಸಮಿತಿ ಮನವಿ ಮಾಡಿದೆ.

“ಪಾಕಿಸ್ತಾನದ ಅಧಿಕಾರಿಗಳು ಹಾಗೂ ಅದರ ಸೇನೆಯಿಂದ ಕಾಫಿ ಹೋಮ್ ನನ್ನು ತೆರವುಗೊಳಿಸದಿದ್ದಲ್ಲಿ ನಾವು ಎಲ್ಒಸಿ ಮುತ್ತಿಗೆಗೆ ಕರೆ ನೀಡುತ್ತೇವೆ. ಎಲ್ಲಾ ಶಾರದಾ ದೇವಿಯ ಭಕ್ತಾದಿಗಳು ಮುಂದಿನ ದಿನಗಳಲ್ಲಿ ಮುತ್ತಿಗೆ ಹಾಕಲು ಸಿದ್ಧರಾಗಿರಬೇಕು” ಎಂದು ಅವರು ಅಭಿಪ್ರಾಯಪಟ್ಟರು.

ಶಾರದಾ ಪೀಠವನ್ನು ಯುನೆಸ್ಕೋ ಪಾರಂಪರಿಕ ತಾಣವನ್ನಾಗಿ ಘೋಷಿಸಬೇಕು ಎಂದು ಇದೇ ವೇಳೆ ಪಂಡಿತ್ ಒತ್ತಾಯಿಸಿದರು.

ಕಳೆದ ಮಾರ್ಚ್ ನಲ್ಲಿ ಜಮ್ಮು ಮತ್ತು ಕಾಶ್ಮೀರದ ಕುಪ್ವಾರದ ಭಾರತ- ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಪುನರ್ ನಿರ್ಮಿಸಲಾಗಿರುವ ಶಾರದಾ ದೇವಿ ದೇವಸ್ಥಾನವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!