Sunday, September 8, 2024

ಕಲ್ಲಡ್ಕ ಭಟ್ ಮೇಲೆ ಕ್ರಮಕ್ಕೆ ‘ಸಹಬಾಳ್ವೆ ಕುಂದಾಪುರ’ ಆಗ್ರಹ

ಕುಂದಾಪುರ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಡಿ.೨೪ರಂದು ಹಿಂದು ಜಾಗರಣ ವೇದಿಕೆ ಆಯೋಜಿಸಿದ್ದ ಹನುಮ ಮಾಲೆ ಸಂಕೀರ್ತನಾ ಯಾತ್ರೆ ಸಮಾರಂಭದಲ್ಲಿ ಆರ್.ಎಸ್.ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಎನ್ನುವವರು ಭಾರತದ ಸಂವಿಧಾನಿಕ ಕಾನೂನುಗಳನ್ನು ಉಲ್ಲಂಘಿಸುವ ಕೃತ್ಯಗಳನ್ನು ಎಸಗಿದ್ದಾರೆ ಎಂದು ಸಹಬಾಳ್ವೆ ಕುಂದಾಪುರ ಸಮಿತಿ’ ಆಕ್ರೋಶ ವ್ಯಕ್ತಪಡಿಸಿದೆ.

ಭಟ್ ಅವರು ತಮ್ಮ ಭಾಷಣದಲ್ಲಿ ಮೊದಲನೆಯದಾಗಿ ಮುಸ್ಲಿಮ್ ಮಹಿಳೆಯರೂ ಸೇರಿದಂತೆ, ಭಾರತದ ಮಹಿಳೆಯರನ್ನು ಹೀನಾಯವಾಗಿ ಅವಮಾನಿಸುವಂತಹ ಮಾತುಗಳನ್ನು ಆಡಿದ್ದಾರೆ. ಎರಡನೆಯದಾಗಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷವನ್ನು ಪ್ರಚೋಧಿಸುವ ಸಲುವಾಗಿ ವಾಸ್ತವಕ್ಕೆ ದೂರವಾದ ಕಲ್ಪಿತ ವಿಚಾರಗಳನ್ನು ಉದ್ರೇಕಕಾರಕವಾಗಿ ಹರಿ ಬಿಟ್ಟಿದ್ದಾರೆ. ಮೂರನೆಯದಾಗಿ ಸಂವಿಧಾನಿಕ ಅಧಿಕಾರ ವಹಿಸಿಕೊಂಡಿರುವ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಸುಳ್ಳು ಆರೋಪಗಳ ಮೂಲಕ ದೂಷಣೆ ಮಾಡಿದ್ದಾರೆ. ಹಾಗೂ ನಾಲ್ಕನೆಯದಾಗಿ ದೇಶದ ಸರ್ವೋಚ್ಛ ನ್ಯಾಯಾಲಯವನ್ನು ತುಚ್ಛೀಕರಿಸುವ ಅಸಂವಿಧಾನಿಕ ದೂಷಣೆ ಮಾಡಿದ್ದಾರೆ ಎಂದು ಸಮಿತಿ ಆರೋಪಿಸಿದೆ.

ಕರ್ನಾಟಕ ರಾಜ್ಯ ಪೊಲೀಸು ವರಿಷ್ಠಾಧಿಕಾರಿಗಳು, ಈ ಸಂವಿಧಾನಬಾಹಿರ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕ ಶಾಂತಿ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ, ಅವರ ಮೇಲೆ ಕಠಿಣ ಕ್ರಮವನ್ನು ಸ್ವವಿವೇಚನೆಯಿಂದ ಜರುಗಿಸಬೇಕು ಎಂದು ಸಹಬಾಳ್ವೆ, ಕುಂದಾಪುರ ತಾಲೂಕು ಸಂಚಾಲಕ ಸಮಿತಿಯು ಆಗ್ರಹಿಸುತ್ತದೆ ಎಂದು ಸಮಿತಿಯ ಸಂಚಾಲಕ ಹಾಗೂ ಜನಪರ ಚಿಂತಕ ರಾಮಕೃಷ್ಣ ಹೇರ್ಳೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಮಕೃಷ್ಣ ಹೇರ್ಳೆ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!