spot_img
Tuesday, April 21, 2026
spot_img

ಬ್ರ್ಯಾಂಡ್ ಬೆಂಗಳೂರು ಬ್ಯಾಂಡ್ ಬಜಾಯಿಸುತ್ತಿದೆ..! : ಡಿಕೆಶಿ ಕಲ್ಪನೆಯ ಬ್ರ್ಯಾಂಡ್‌ ಬೆಂಗಳೂರನ್ನು ಟೀಕಿಸಿದ ಬಿಜೆಪಿ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ʼಆ‌ ದಿನಗಳ ಬ್ರ್ಯಾಂಡ್ʼ ಬೆಂಗಳೂರಿನ ಕನಸು ಹೊತ್ತಿರುವ ಡಿಸಿಎಂ ಡಿ. ಕೆ. ಶಿವಕುಮಾರ್ ಸಾಹೇಬರು ಅದನ್ನು ಅಚ್ಚುಕಟ್ಟಾಗಿ ಜಾರಿ ಮಾಡುತ್ತಿರುವುದಕ್ಕೆ ರಾಜಧಾನಿಯ ರಸ್ತೆಗಳ ದುಸ್ಥಿತಿಯೇ ಸಾಕ್ಷಿ ಎಂದು ವಿರೋಧ ಪಕ್ಷ ಬಿಜೆಪಿ ಆಕ್ರೋಶ ವ್ಯಕ್ತ ಪಡಿಸಿದೆ.

ಈಗಾಗಲೇ ಆ ದಿನಗಳಂತೆ ಬೆಂಗಳೂರಿನಲ್ಲಿ ಹಾಡಹಾಗಲೇ ರಾಜಾರೋಷವಾಗಿ ಗೂಂಡಾಗಿರಿ ನಡೆಯುತ್ತಿದೆ. ಗೂಂಡಾಗಿರಿ ಸಹಿಸಲಾರದೆ ಕೆಲಸ ಅರಸಿ ಬಂದವರು ಕಾಲ್ಕೀಳುತ್ತಿದ್ದಾರೆ ಎಂದೂ ಜರೆದಿದೆ.

ಮಾತ್ರವಲ್ಲದೇ, ರಸ್ತೆಗಳು ಗುಂಡಿಮಯವಾಗಿದ್ದರೆ, ಚರಂಡಿ, ಮ್ಯಾನ್ ಹೋಲ್‌ಗಳಿಂದ ಕೊಳಚೆ ನೀರು ಉಕ್ಕಿ ರಸ್ತೆಯಲ್ಲಿ ಹರಿದು ಸುಗಂಧ ಬೀಸುತ್ತಿವೆ!

ಟ್ರಾಫಿಕ್ ಸಮಸ್ಯೆಯ ನಡುವೆ ಈ ವಾಸನೆಯನ್ನು ಕುಡಿದು ಜನತೆ ಪಾವನರಾಗುತ್ತಿದ್ದಾರೆ‌.  ಬ್ರ್ಯಾಂಡ್ ಬೆಂಗಳೂರು ಬ್ಯಾಂಡ್ ಬಜಾಯಿಸುತ್ತಿದೆ..! ಎಂದು ಟೀಕಿಸಿದೆ.

ಪ್ರತಿದಿನ ಸಂಜೆಯಾಗುತ್ತಿದ್ದಂತೆ ಅವೆನ್ಯೂ ರೋಡ್‌ ನ ಕೆಲವೆಡೆ ಕೊಳಚೆಮಯವಾಗುತ್ತಿದೆ. ಸುತ್ತಮುತ್ತಲಿನ ವ್ಯಾಪಾರಿಗಳು ದುರ್ವಾಸನೆಯಲ್ಲೇ  ವ್ಯಾಪಾರ ಮಾಡುವಂತಾಗಿದೆ. ವಾಹನ ಸವಾರರು ಮೂಗು ಮುಚ್ಚಿಕೊಂಡು ಸಾಗುತ್ತಿದ್ದಾರೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾಮಗಾರಿ ನಡೆದಿದ್ದರೂ, ಸಮಸ್ಯೆ ಪರಿಹಾರವಾಗಿಲ್ಲ ಎಂಬ ಪತ್ರಿಕಾ ವರದಿಯೊಂದನ್ನು ಉಲ್ಲೇಖಿಸಿ ಬಿಜೆಪಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರ ಬ್ರ್ಯಾಂಡ್‌ ಬೆಂಗಳೂರು ಕಲ್ಪನೆಯನ್ನು ಟೀಕಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!