spot_img
Tuesday, April 21, 2026
spot_img

ಕತಾರ್‌ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಭಾರತೀಯ ನೌಕಪಡೆಯ ಎಂಟು ಮಾಜಿ ಸಿಬ್ಬಂದಿಗಳಿಗೆ ಬಿಗ್‌ ರಿಲೀಫ್‌ !

ಜನಪ್ರತಿನಿಧಿ ವಾರ್ತೆ (ಕತಾರ್‌) :  ಕತಾರ್‌ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಭಾರತೀಯ ನೌಕಪಡೆಯ ಎಂಟು ಮಾಜಿ ಅಧಿಕಾರಿಗಳ ಶಿಕ್ಷೆಯನ್ನು ಕತಾರ್‌ ಕೋರ್ಟ್‌ ಕಡಿತಗೊಳಿಸಿದೆ ಎಂದು ವಿದೇಶಾಂಗ ಸಚಿವಾಲಯ ಇಂದು(ಗುರುವಾರ) ಹೇಳಿದೆ.

ಭಾರತೀಯ ನೌಕಪಡೆಯ ಈ ಎಂಟು ಮಾಜಿ ಅಧಿಕಾರಿಗಳು ಕಳೆದ ವರ್ಷ ಆಗಸ್ಟ್‌ನಿಂದ ಕತಾರ್‌ನಲ್ಲಿ ಜೈಲಿನಲ್ಲಿದ್ದಾರೆ. ಈ ಎಲ್ಲಾ ಮಾಜಿ ಅಧಿಕಾರಿಗಳ ವಿರುದ್ಧ ಆರೋಪಗಳ ಬಗ್ಗೆ ಕತಾರ್‌ ಇನ್ನೂ ಮಾಹಿತಿ ನೀಡಿಲ್ಲ. ಆದರೇ, ಅವರೆಲ್ಲರ ಮೇಲೆ ಗೂಢಚಾರಿಕೆ ಆರೋಪ ಹೊರಿಸಲಾಗಿದೆ ಎಂದು ವರದಿಯಾಗಿದೆ.

ಇವರೆಲ್ಲರೂ ಕತಾರ್‌ನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಕಂಪೆನಿಯು ಕತಾರಿ ಎಮಿರಿ ನೌಕಪಡೆಗೆ ತರಬೇತಿ ಹಾಗೂ ಇತರ ಸೇವೆಗಳನ್ನು ಒದಗಿಸುತ್ತದೆ.

ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳ ಪ್ರಕಾರ, ಡಹ್ರಾ ಗ್ಲೋಬಲ್‌ ಟೆಕ್ನಾಲಜಿ ಹಾಗೂ ಕನ್ಸಲ್ಟೆನ್ಸಿ ಸರ್ವೀಸಸ್‌ ಕಂಪೆನಿಯು ತನ್ನನ್ನು ಕತಾರ್‌ ರಕ್ಷಣೆ, ಭದ್ರತಾ ಹಾಗೂ ಇತರೆ ಸರ್ಕಾರಿ ಏಜೆನ್ಸಿಗಳ ಸ್ಥಳೀಯ ಪಾಲುದಾರ ಎಂದು ವಿವರಿಸುತ್ತದೆ. ರಾಯಲ್‌ ಓಮನ್‌ ಏರ್‌ ಫೋರ್ಸ್‌ ನಿವೃತ್ತ ಸ್ಕ್ವಾಡ್ರನ್‌ ಲೀಡರ್‌ ಖಾಮೀಸ್‌ ಅಲ್‌ ಅಜ್ಮಿ ಈ ಕಂಪನಿಯ ಸಿಇಒ ಆಗಿದ್ದಾರೆ.

ಕತಾರ್‌ನಲ್ಲಿ ಗುಪ್ತ ಮಾಹಿತಿಯ ಸೋರಿಕೆಯ ಕಾರಣ ಭಾರತದ ಎಂಟು ಮಾಜಿ ನೌಕಪಡೆಯ ಯೋಧರಿಗೆ ಮರಣದಂಡನೆ ವಿಧಿಸಲಾಗಿತ್ತು. ಈ ಬಗ್ಗೆ ಭಾರತ ಸರ್ಕಾರ ಮಧ್ಯಪ್ರವೇಶಿಸಿ, ಅವರ ಶಿಕ್ಷೆಯ ಪ್ರಮಾಣ ಕಡಿತಕ್ಕೂ ಮನವಿ ಮಾಡಲಾಗಿತ್ತು.

ಭಾರತದ ಮನವಿಗೆ ಪುರಸ್ಕರಿಸಿದ ಕತಾರ್‌ ಸರ್ಕಾರ, ಭಾರತೀಯ ನೌಕಪಡೆಯ ಎಂಟು ಮಾಜಿ ಸಿಬ್ಬಂದಿಗಳಿಗೆ ವಿಧಿಸಲಾಗಿದ್ದಂತ ಶಿಕ್ಷೆಯನ್ನು ಕಡಿಮೆ ಮಾಡಿ ಆದೇಶಿಸಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಕತಾರ್‌ ಪೊಲೀಸರು ಬಂಧಿಸಿದ ಎಂಟು ಮಾಜಿ ನೌಕಪಡೆಗಳಲ್ಲಿ ರಾಷ್ಟ್ರಪತಿ ಪ್ರಶಸ್ತಿ ವಿಜೇತ ಕಮಾಂಡರ್‌ ಪೂರ್ಣಂದು ತಿವಾರಿ (ಆರ್‌) ಕೂಡ ಸೇರಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!