spot_img
Wednesday, January 22, 2025
spot_img

2024ರ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ಸಿಗೆ ಅಸ್ತಿತ್ವವೇ ಇರುವುದಿಲ್ಲ : ಬಿಜೆಪಿ ಭವಿಷ್ಯ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : 2024ರ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ಸಿಗೆ ಅಸ್ತಿತ್ವವೇ ಇರುವುದಿಲ್ಲ ಎಂದು ಕಾಂಗ್ರೆಸ್‌ನ ಭವಿಷ್ಯ ನುಡಿದಿದೆ.

ತನ್ನ ಅಧಿಕೃತ ಮೈಕ್ರೋಬ್ಲಾಗಿಂಗ್‌ ಎಕ್ಸ್‌ ಖಾತೆಯ ಮೂಲಕ ಕಾಂಗ್ರೆಸ್‌ ನನ್ನು ಟೀಕೆ ಮಾಡಿದ ಬಿಜೆಪಿ,  ಇಂದು ಕಾಂಗ್ರೆಸ್‌ ಸಂಸ್ಥಾಪನಾ ದಿನ. 139 ವರ್ಷದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅದು ಹೇಗೆ ವಿದೇಶಿ ಕೈಕೊಂಬೆಯಾಗಿ ಗುಲಾಮಗಿರಿ ತೋರಿಸಿದೆ ಎಂದು ಹೇಳಿದ್ದಲ್ಲದೇ, ಕೆಲವು ಅಂಶಗಳ ಸಾಕ್ಷಿಯನ್ನೂ ನೀಡಿದೆ.

▪️1885ರಲ್ಲಿ ಕಾಂಗ್ರೆಸ್‌ ಸ್ಥಾಪನೆ ಮಾಡಿದ್ದೇ ಬ್ರಿಟಿಷ್ ಅಧಿಕಾರಿ ಎ. ಒ. ಹ್ಯೂಮ್‌.

▪️ನೆಹರು ಅವರು ಬ್ರಿಟಿಷರಿಗೆ ನಿಷ್ಠೆಯಿಂದ ಇದ್ದ ಕಾರಣ ಪ್ರಧಾನಿ ಪಟ್ಟ ಸಿಕ್ಕಿತು.

▪️ನೆಹರು ಅವರಂತೆ ಮರಿಮೊಮ್ಮಗ ರಾಹುಲ್‌ ಗಾಂಧಿ ವಿದೇಶಿಗರ ಕೈಗೊಂಬೆ.

▪️ಭಾರತ ವಿರೋಧಿ ರಾಷ್ಟ್ರಗಳಿಗೆ ರಾಹುಲ್‌ ಗಾಂಧಿಯೇ ಬಹುದೊಡ್ಡ ಅಸ್ತ್ರ.

▪️ಭಾರತದ ಒಳಗೆ ಮತ್ತು ಹೊರಗೆ ದೇಶವನ್ನು ಅವಮಾನಿಸುತ್ತಿದ್ದಾರೆ ರಾಹುಲ್.

ವಿದೇಶಿಗರ ಕೈಗೊಂಬೆಯಾಗಿ ರಾಹುಲ್‌ ಗಾಂಧಿ ನಶಿಸುತ್ತಿರುವ ಕಾಂಗ್ರೆಸ್‌ ಅನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ ಎಂದು ಹೇಳಿದೆ.

ಇನ್ನು,‌ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ ಇಂದು (ಗುರುವಾರ) ತನ್ನ 139ನೇ ಸಂಸ್ಥಾಪನಾ ದಿನಾಚರಣೆಯನ್ನು ತನ್ನ ರಾಷ್ಟ್ರೀಯ ಕಚೇರಿಯಲ್ಲಿ ಆಚರಿಸಿಕೊಂಡಿತ್ತು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!