spot_img
Tuesday, April 21, 2026
spot_img

40 ಸಾವಿರ ಕೋಟಿಯಲ್ಲಿ ಯಾರ ಪಾಲೆಷ್ಟು? ಹೆಣದ ಮೇಲೆ ಹಣ ಮಾಡುವ ದುರ್ಬುದ್ಧಿ ಬಂದಿದ್ದೇಕೆ? : ಕಾಂಗ್ರೆಸ್‌ ಪ್ರಶ್ನೆ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನಿನ್ನೆ (ಮಂಗಳವಾರ) ತನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದರೆ, ಕೋವಿಡ್‌ ಸಂದರ್ಭದಲ್ಲಿ ಬಿಜೆಪಿ ಸರ್ಕಾರದಿಂದ ಆದ ಸುಮಾರು 40 ಸಾವಿರ ಕೋಟಿ ಹಗರಣವನ್ನು ಬಯಲಿಗೆಳೆಯುತ್ತೇನೆ ಎಂದು ಹೇಳಿದ್ದ ಸ್ಪೋಟಕ ಹೇಳಿಯನ್ನು ಉಲ್ಲೇಖಿಸಿ ಆಡಳಿತಾರೂಢ ಕಾಂಗ್ರೆಸ್‌ ಬಿಜೆಪಿಯನ್ನು ಹಿಗ್ಗಾಮುಗ್ಗಾ ತಿವಿಯುವುದನ್ನು ಮುಂದುವರಿಸಿದೆ.

ತನ್ನ ಅಧಿಕೃತ ಮೈಕ್ರೋಬ್ಲಾಗಿಂಗ್‌ ʼಎಕ್ಸ್‌ʼ ಖಾತೆಯ ಮೂಲಕ ಬಿಜೆಪಿಯನ್ನು ಟೀಕಿಸಿದ ಕಾಂಗ್ರೆಸ್‌, 40 ಸಾವಿರ ಕೋಟಿ ಹಗರಣದ ಆರೋಪವನ್ನು ಸ್ವತಃ ಬಿಜೆಪಿಯ ಹಿರಿಯ ನಾಯಕರೇ ಮಾಡಿದ್ದಾರೆ.ಈ ಬಗ್ಗೆ ಉತ್ತರಿಸುವ ಹೊಣೆಗಾರಿಕೆ ಬಿಜೆಪಿ ಅಧ್ಯಕ್ಷ ಬಿ. ವೈ ವಿಜಯೇಂದ್ರ  ವಿರೋಧ ಪಕ್ಷದ ನಾಯಕ ಆರ್‌ ಅಶೋಕ್, ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರದ್ದು ಎಂದು ಹೇಳಿದೆ.

40 ಸಾವಿರ ಕೋಟಿಯಲ್ಲಿ ಯಾರ ಪಾಲೆಷ್ಟು? ಹೆಣದ ಮೇಲೆ ಹಣ ಮಾಡುವ ದುರ್ಬುದ್ಧಿ ಬಂದಿದ್ದೇಕೆ? ಎಂದು ಕೂಡ ಪ್ರಶ್ನೆ ಮಾಡಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!