spot_img
Tuesday, April 21, 2026
spot_img

ʼವೀರಶೈವ ಲಿಂಗಾಯತ” ಎಂಬುದು ಹಿಂದೂ ಸಂಸ್ಕೃತಿಯ ಭಾಗವಾಗಿದ್ದು ಅಲ್ಲಿಯೂ ಶಿವನೆ ಇಲ್ಲಿಯೂ ಶಿವನೆ : ಯತ್ನಾಳ್‌

ಜನಪ್ರತಿನಿಧಿ ವಾರ್ತೆ(ವಿಜಯಪುರ) : ʼವೀರಶೈವ ಲಿಂಗಾಯತ ಎಂಬುದು ಹಿಂದೂ ಸಂಸ್ಕೃತಿಯ ಭಾಗವಾಗಿದ್ದು ಅಲ್ಲಿಯೂ ಶಿವನೆ ಇಲ್ಲಿಯೂ ಶಿವನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪ್ರತಿಪಾದಿಸಿದ್ದಾರೆ.

ಲಿಂಗಾಯತರು ಹಿಂದೂಗಳಲ್ಲ ಎಂಬ ಕೆಲವರ ಹೇಳಿಕೆ ರಾಜಕೀಯ ಪ್ರೇರಿತವಾಗಿದ್ದು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರತ್ಯೇಕ ಧರ್ಮದ ಚರ್ಚೆ ಆರಂಭಿಸಿದ್ದಾರೆ. ಇದರಲ್ಲಿ ಸಿದ್ದರಾಮಯ್ಯನವರು 2018ರಲ್ಲಿ ಸೃಷ್ಟಿಸಿದ್ದ ಗೊಂದಲದ ಮುಂದುವರಿದ ಭಾಗ ಎಂದು ಯತ್ನಾಳ್‌ ಗಂಭೀರವಾಗಿ ಆರೋಪಿಸಿದ್ದಾರೆ.

ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ನಮೂದು ಮಾಡುವ ವಿಚಾರ ಅಖಿಲ ಭಾರತ ವೀರಶೈವ ಮಹಾಸಭಾದ 24 ನೇ ಮಹಾಧಿವೇಶನದಲ್ಲಾದ ನಿರ್ಣಯ, ಇದರೊಂದಿಗೆ ಲಿಂಗಾಯತರು ಹಿಂದೂಗಳಲ್ಲಾ ಎಂಬ ಕೆಲವು ನಾಯಕರ ಹೇಳಿಕೆಗಳ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲೇ ಯತ್ನಾಳ್ ಅವರು ಈ ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ ತಮ್ಮ ಅಧಿಕೃತ ಮೈಕ್ರೋ ಬ್ಲಾಗಿಂಗ್ ‌ʼಎಕ್ಸ್ʼನಲ್ಲಿ ಸರಣಿ ಪೋಸ್ಟ್ ಮಾಡಿರುವ ಯತ್ನಾಳ್, ಪ್ರತ್ಯೇಕ ಧರ್ಮ ವಿಚಾರವನ್ನು ಮತ್ತೆ ಎತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅವರು ಹಿಂದುತ್ವ ಈ ನೆಲದ ಆತ್ಮವಾಗಿದ್ದು ಬಸವಣ್ಣನವರು ಆರಾಧಿಸಿದ ಲಿಂಗವೂ ಈಶ್ವರನ ಅಂಶವೇ ಎಂದು ತಿಳಿಸಿದ್ದಾರೆ.

“ಲಿಂಗಾಯತರು ಹಿಂದೂಗಳಲ್ಲ ಎಂಬ ಕೆಲವರ ಹೇಳಿಕೆ ರಾಜಕೀಯ ಪ್ರೇರಿತವಾಗಿದ್ದು, ಹಿಂದೆ ಪ್ರತ್ಯೇಕ ಧರ್ಮದ ರೂವಾರಿಯಾಗಿದ್ದ ಸಿದ್ದರಾಮಯ್ಯನವರ ಯೋಜನೆಯ ಮುಂದುವರೆದ ಭಾಗವಾಗಿದೆ. ಹಿಂದುತ್ವ ಈ ನೆಲದ ಆತ್ಮ, ಬಸವಣ್ಣನವರು ಆರಾಧಿಸಿದ ಲಿಂಗವೂ ಈಶ್ವರನ ಅಂಶವೇ, ಹಿಂದುತ್ವ ಬದುಕುವ ದಾರಿ. ಜಗತ್ತಿನ ಯಾವುದಾದರೂ ಧರ್ಮ ಇನ್ನೊಬ್ಬರ ಮೇಲೆ ದಾಳಿ ಮಾಡದೆ, ಎಲ್ಲರನ್ನು ಗೌರವಿಸಿರುವುದು ಹಿಂದುತ್ವ ಮಾತ್ರ.” ಎಂದು ಸಿದ್ದರಾಮಯ್ಯ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು, “ಲಿಂಗಾಯತ, ವೀರಶೈವ ಹಿಂದುತ್ವದ ಭಾಗವೇ ಹೊರತು ಬೇರೆಯಲ್ಲ. 2018ರ ವಿಧಾನಸಭೆ ಚುನಾವಣೆಗಾಗಿ ಸಿದ್ದರಾಮಯ್ಯನವರು ಈ ಗೊಂದಲವನ್ನು ಸೃಷ್ಟಿ ಮಾಡಿದ್ದರು, ಈಗ ಲೋಕಸಭೆ ಚುನಾವಣೆಗೆ ಬೇರೆ ಯಾವುದೇ ಚರ್ಚಾ ವಿಷಯವಿಲ್ಲದೆ ಈ ಪ್ರತ್ಯೇಕ ಧರ್ಮದ ಚರ್ಚೆ ಆರಂಭಿಸಿದ್ದಾರೆ.” ಎಂದು ಆರೋಪಿಸಿದ್ದಾರೆ.

“ಪಂಚಪೀಠಗಳು, ಬಸವಣ್ಣನವರ ಅನುಯಾಯಿಗಳು ಹಾಗು ಶರಣರ ತತ್ವಗಳು ಎಲ್ಲವೂ ಹಿಂದೂ ಸಂಸ್ಕೃತಿಯ ಭಾಗವೇ, ಅಲ್ಲಿಯೂ ಶಿವ, ಇಲ್ಲಿಯೂ ಶಿವನೇ! ” ವೀರಶೈವ ಲಿಂಗಾಯತ” ಹಿಂದು ಸಂಸ್ಕೃತಿಯ ಭಾಗವಾಗಿದೆ. ಹರ ಹರ ಮಹದೇವ್!” ಎಂದು ಮತ್ತೊಂದು ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.
2018ರ ವಿಧಾನಸಭೆ ಚುನಾವಣೆಗೂ ಮೊದಲು ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಮುನ್ನಲೆಯಲ್ಲಿತ್ತು. ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಲಿಂಗಾಯತ ಸಮುದಾಯವನ್ನು ಹಿಂದೂ ಧರ್ಮದೊಳಗೆ ಗುರುತಿಸದೇ ಪ್ರತ್ಯೇಕ ಧರ್ಮವೆಂದು ಪರಿಗಣಿಸಬೇಕು ಎಂದು ಅನೇಕ ಹೋರಾಟಗಳು ನಡೆದಿದ್ದವು. ವಿರೋಧ ಪಕ್ಷವಾಗಿದ್ದ ಬಿಜೆಪಿ ಇದನ್ನು ವಿರೋಧಿಸಿತ್ತು. ಹೋರಾಟಗಾರರ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಈ ವಿಚಾರವಾಗಿ ಚುನಾವಣೆ ಬಳಿಕ ರಂಭಾಪುರಿ ಮಠದಲ್ಲಿ ನಡೆದ ಸಮಾರಂಭವೊಂದರಲ್ಲಿ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರು ಬಹಿರಂಗವಾಗಿ ಕ್ಷಮೆ ಯಾಚಿಸಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!