Sunday, September 8, 2024

ನೈಕಂಬ್ಳಿ ಕಂಡ್ಗದಲ್ಲಿ ಯಕ್ಷಗಾನ ಕಲಾವಿದ ವಾಟಾರು ರವಿ ಶೆಟ್ಟಿ ಅವರಿಗೆ ಸನ್ಮಾನ

ಕುಂದಾಪುರ: ಚಿತ್ತೂರು ಗ್ರಾಮದ ನೈಕಂಬ್ಳಿ ಕಂಡ್ಗದ ಮನೆಯ ವಠಾರದಲ್ಲಿ ಶ್ರೀಮತಿ ರತ್ನ ಮತ್ತು ಮಹಾಬಲ ಶೆಟ್ಟಿ ಅವರ ಹರಕೆ ಬಯಲಾಟವಾಗಿ ನಡೆದ ಮಾರಣಕಟ್ಟೆ ಮೇಳದ ವೇದಿಕೆಯಲ್ಲಿ ಬಡಗುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಸುದೀರ್ಘ ೩೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಾರಣಕಟ್ಟೆ ಮೇಳದ ಪ್ರಸಿದ್ಧ ಕಲಾವಿದ ವಾಟಾರು ರವಿ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸೇವಾಕರ್ತರಾದ ಮಹಾಬಲ ಶೆಟ್ಟಿ, ಸಮಾಜಸೇವಕ ಬೆಂಕಿಮಣಿ ಸಂತು ಅರೆಹೊಳೆ, ಯಕ್ಷಪ್ರೇಮಿ ಜಯರಾಮ ಶೆಟ್ಟಿ ಮೇಲ್ ಹೊಸೂರು ಹಾಗೂ ಸ್ಥಳೀಯ ಗಣ್ಯರು, ಕಲಾಪೋಷಕರು ಉಪಸ್ಥಿತರಿದ್ದರು.
ಪ್ರವೀಣ ಶೆಟ್ಟಿ ಮಕ್ಕಿಮನೆ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ‘ಪಾಪಣ್ಣ ವಿಜಯ- ಗುಣಸುಂದರಿ’ ಯಕ್ಷಗಾನ ಪ್ರದರ್ಶನ ನಡೆಯಿತು.

ಕಣ್ಣೀರಾದ ಗುಣಸುಂದರಿ:


‘ಪಾಪಣ್ಣ ವಿಜಯ ಗುಣಸುಂದರಿ’ ಅತ್ಯಂತ ಜನಪ್ರಿಯ ಪೌರಾಣಿಕ ಪ್ರಸಂಗ. ನಿತ್ಯನೂತನ ಆಖ್ಯಾನವಿದು. ಇಲ್ಲಿ ಪ್ರತಿಯೋರ್ವ ಕಲಾವಿದರಿಗೂ ತಮ್ಮ ಪಾತ್ರ ಪ್ರೌಢಿಮೆ ಮೆರೆಯಲು ಸಾಧ್ಯತೆ ಇದೆ. ಈ ಪ್ರದರ್ಶನದಲ್ಲಿಯೂ ಕೂಡಾ ಎಲ್ಲಾ ಕಲಾವಿದರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅದರಲ್ಲೂ ಕಥಾನಾಯಕಿ ಗುಣಸುಂದರಿ ಪಾತ್ರ ನಿರ್ವಹಿಸಿದ ಭರವೆಯ ಯುವ ಸ್ತ್ರೀವೇಷಧಾರಿ ಪ್ರದೀಪ್ ಶೆಟ್ಟಿ ನಾರ್ಕಳಿ ಪಾತ್ರವನ್ನು ರಂಗದಲ್ಲಿ ಗೆಲ್ಲಿಸಿಕೊಟ್ಟಿದ್ದಾರೆ. ಪ್ರತಿ ಸನ್ನಿವೇಶದಲ್ಲಿಯೂ ಕೂಡಾ ಪಾತ್ರಕ್ಕೆ ಗರಿಷ್ಠ ಒತ್ತು ನೀಡಿ ಪಾತ್ರವನ್ನು ಸಚೇತನವಾಗಿ ಕಡೆದು ನಿಲ್ಲಿಸಿದ್ದಾರೆ. ಕರುಣಾರಸದಲ್ಲಿ ಕುಳಿತ ಪ್ರೇಕ್ಷಕರ ಕಣ್ಣಲಿಗಳು ಒಸರುವಂತೆ ಮಾಡಿದ್ದಾರೆ. ಇದು ಕಲಾವಿದನ ನಿಜವಾದ ಕಲಾವಂತಿಕೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!