spot_img
Wednesday, April 22, 2026
spot_img

ದೇಶದಲ್ಲಿ ಶೇ. 54ರಷ್ಟು ಕುಟುಂಬಗಳ ಆರ್ಥಿಕ ಸ್ಥಿತಿಗತಿ ಇಂದಿಗೂ ಮೊದಲಿನಂತೆ ಇದೆ : ಸಮೀಕ್ಷಾ ವರದಿ

ಜನಪ್ರತಿನಿಧಿ ವಾರ್ತೆ( ನವ ದೆಹಲಿ) : ಇಂಡಿಯಾʼಸ್‌ ಪಲ್ಸ್‌ ಪರ್ಸನಲ್‌ ಫೈನಾನ್ಸ್‌ ಸಮೀಕ್ಷೆ 2023-24ರ ವರದಿ ಬಿಡುಗಡೆ ಮಾಡಿದೆ. ಯಾವ ರಾಜ್ಯದ ಕುಟುಂಬಗಳು  ಅತಿ ಕಡಿಮೆ ಆದಾಯ ಗಳಿಸುತ್ತವೆ ಎಂಬ ವರದಿಯ ಪಟ್ಟಿ ಬಿಡುಗಡೆ ಮಾಡಿದೆ.

2023 ರಲ್ಲಿ ಬಿಹಾರದಲ್ಲಿ ಪ್ರತಿ ತಿಂಗಳಿಗೆ ಒಂದು ಕುಟುಂಬ ಸರಾಸರಿ  17,567 ರೂ, ಒಡಿಶಾದಲ್ಲಿ 18,519 ಹಾಗೂ ಜಾರ್ಖಂಡ್‌ ನಲ್ಲಿ 18,863 ರೂ. ಗಳಿಕೆ ಮಾಡುತ್ತದೆ ಎಂದು ವರದಿ ಹೇಳಿದೆ. ರಾಷ್ಟ್ರೀಯ ಸರಾಸರಿ ಮಾಸಿಕ ಆದಾಯ 2023ರಲ್ಲಿ 25,910 ರೂ. ಆಗಿತ್ತು, ಇನ್ನು 2022ರಲ್ಲಿ ಬಿಹಾರದಲ್ಲಿ 14,366 ರೂ., ಜಾರ್ಖಂಡ್‌ ನಲ್ಲಿ 15,804 ರೂ. ಹಾಗೂ ಪಶ್ಚಿಮ ಬಂಗಾಳದಲ್ಲಿ 16,441 ರೂ.  ಮಾಸಿಕವಾಗಿ ಗಳಿಸುತ್ತಿದ್ದರು.  2022ರಲ್ಲಿ ರಾಷ್ಟ್ರೀಯ ಸರಾಸರಿ ಮಾಸಿಕ ಆದಾಯ 23,000 ರೂ. ಆಗಿತ್ತು.

ಮನೆ ಖರ್ಚು ವೆಚ್ಚ ನಿಭಾಯಿಸಲು ಸಾಧ್ಯವಾಗದಷ್ಟು ಗಳಿಸುತ್ತಿರುವ ಕುಟುಂಬಗಳೆಷ್ಟು ಎನ್ನುವ ಸಮೀಕ್ಷಾ ವರದಿಯನ್ನೂ ಕೂಡ ನೀಡಿದ್ದು, ಶೇ. 7 ರಷ್ಟಯ ಕುಟುಂಬಗಳು ದೇಶದಲ್ಲಿ ಮನೆಯ ಖರ್ಚು ವೆಚ್ಚ ನಿಭಾಯಿಸಲು ಸಾಧ್ಯವಾಗದಷ್ಟು ಗಳಿಸುತ್ತಿದ್ದರೇ, ಶೇ.93ರಷ್ಟು ಕುಟುಂಬಗಳು ಕುಟುಂಬ ನಿರ್ವಹಣೆಗೆ ಬೇಕಾದಷ್ಟು ಸಂಪಾದಿಸುತ್ತಿವೆ ಎಂದು ಹೇಳಿದೆ.

ಇನ್ನು ಕಳೆದ ಐದು ವರ್ಷಗಳಲ್ಲಿ ಕುಟುಂಬಗಳ ಆರ್ಥಿಕ ಸ್ಥಿತಿಗಳನ್ನು ಗಮನಿಸುವುದಾದರೇ, ಶೇ. 30ರಷ್ಟು ಉತ್ತಮವಾಗಿದ್ದರೇ, ಶೇ. 54ರಷ್ಟು ಕುಟುಂಬಗಳು ಯತಾಸ್ಥಿತಿ ಕಾಯ್ದುಕೊಂಡಿದೆ ಅಂದರೇ ಮೊದಲಿನಂತೆ ಇದೆ, ಇನ್ನು ಶೇ.16ರಷ್ಟು ಕುಟುಂಬಗಳ ಸ್ಥೀತಿ ಅತ್ಯಂತ ಶೋಚನೀಯ ಎಂದು ವರದಿ ಹೇಳಿದೆ.

ಭಾರತದಲ್ಲಿ ಎಷ್ಟು ಕುಟುಂಬಗಳು ತಮ್ಮ ಆದಾಯದಲ್ಲಿ ಎಷ್ಟು ಪ್ರಮಾಣ ಉಳಿತಾಯ ಮಾಡುತ್ತಿದೆ ಎಂಬ ವರದಿಯನ್ನೂ ಕೂಡ ನೀಡಿದ್ದು, 2022ರಲ್ಲಿ ಶೇ.70ರಷ್ಟು ಕುಟುಂಬಗಳು ಉಳಿತಾಯ ಮಾಡುತ್ತಿದ್ದರೇ, 2023ರಲ್ಲಿ ಶೇ. 88ರಷ್ಟು ಕುಟುಂಬಗಳು ಉಳಿತಾಯ ಮಾಡುತ್ತಿದೆ ಎಂಬ ವರದಿ ನೀಡಿದೆ. ಈ ವರ್ಷದಲ್ಲಿ ಉಳಿತಾಯ ಮಾಡುತ್ತಿರುವ ಕುಟುಂಬಗಳ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವುದನ್ನು ಈ ವರದಿಯಲ್ಲಿ ಗಮನಿಸಬಹುದಾಗಿದೆ. ಇನ್ನು, ಎಷ್ಟು ಕುಟುಂಬಗಳು ಉಳಿತಾಯ ಮಾಡುತ್ತಿಲ್ಲ ಎಂಬ ವರದಿಯನ್ನು ಗಮನಿಸುವುದಾದರೇ, 2023ರಲ್ಲಿ ಶೇ.12 ರಷ್ಟು ಕುಟುಂಬಗಳು ಉಳಿತಾಯ ಮಾಡುತ್ತಿಲ್ಲ ಹಾಗೂ 2022ರಲ್ಲಿ ಶೇ.20 ರಷ್ಟು ಕುಟುಂಬಗಳು ಉಳಿತಾಯ ಮಾಡುತ್ತಿಲ್ಲ ಎಂಬ ವರದಿ ನೀಡಿದೆ. ಎರಡು ವರ್ಷಗಳಲ್ಲಿ ಉಳಿತಾಯ ಮಾಡುತ್ತಿರುವ ಕುಟುಂಬ ಹಾಗೂ ಉಳಿತಾಯ ಮಾಡುವಷ್ಟು ಆದಾಯ ಇಲ್ಲದೇ ಇರುವ ಕುಟುಂಬಗಳ ಸರಾಸರಿ ಸಮೀಕ್ಷಾ ವರದಿಯನ್ನು ಇಲ್ಲಿ ಗಮನಿಸಬಹುದಾಗಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!