Sunday, September 8, 2024

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಒಟ್ಟು 116 ಹೊಸ ಕೋವಿಡ್ –19 ಪ್ರಕರಣಗಳು ದಾಖಲು : ಆತಂಕ ಪಡುವ ಅಗತ್ಯವಿಲ್ಲ

ಜನಪ್ರತಿನಿಧಿ ವಾರ್ತೆ (ನವ ದೆಹಲಿ) :  ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಒಟ್ಟು 116 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು(ಮಂಗಳವಾರ) ತಿಳಿಸಿದೆ. ಸೋಂಕಿನಿಂದಾಗಿ ಕರ್ನಾಟಕದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿವೆ.

ಈವರೆಗಿನ ಹೊಸ ಕೋವಿಡ್‌ ಪ್ರಕರಣಗಳನ್ನು ಒಳಗೊಂಡು ದೇಶದಲ್ಲಿ ಸಕ್ರಿಯ ಪ್ರಕರಣಗಳು 4,170 ರಷ್ಟಿದ್ದರೆ, ಸೋಂಕಿನ ಕಾರಣದಿಂದ ಒಟ್ಟು ಸಾವಿನ ಸಂಖ್ಯೆ 5,33,337 ಕ್ಕೆ ಏರಿದೆ ಎಂದು ಮಾಹಿತಿ ನೀಡಿದೆ.

ನಿನ್ನೆ(ಸೋಮವಾರ), ದೇಶಲ್ಲಿ 628 ಹೊಸ ಕರೋನವೈರಸ್ ಪ್ರಕರಣಗಳ ಏರಿಕೆಯನ್ನು ಕಂಡಿತ್ತು ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ 4,054 ಕ್ಕೆ ಏರಿತ್ತು. 24 ಗಂಟೆಗಳಲ್ಲಿ ಕೇರಳದಲ್ಲಿ ಒಬ್ಬ ಸಾವು ವರದಿಯಾಗಿತ್ತು.

ಕಳೆದ ವಾರ, NITI ಆಯೋಗ್ ಸದಸ್ಯ (ಆರೋಗ್ಯ) ಡಾ ವಿಕೆ ಪಾಲ್, ಭಾರತದಲ್ಲಿನ ವೈದ್ಯಕೀಯ ಡಿಪಾರ್ಟ್‌ಮೆಂಟ್‌ ಹಾಗೂ ವಿಜ್ಞಾನಿಗಳು ಹೊಸ ಕೋವಿಡ್ ತಳಿಯ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆ ಮತ್ತು ಕೋವಿಡ್‌ ಪ್ರಕರಣಗಳು ಕಂಡು ಬಂದ ರಾಜ್ಯಗಳಲ್ಲಿ ಸೋಂಕು ನಿವಾರಣೆಗೆ ಬೇಕಾದ ಅಗತ್ಯ ಕ್ರಮಗಳನ್ನು ಪಾಲಿಸುವಲ್ಲಿ ಹಾಗೂ ಗಡಿ ಭಾಗಗಗಳಲ್ಲಿ ಟೆಸ್ಟಿಂಗ್‌ ಹೆಚ್ಚಿಸುವುದರ ಬಗ್ಗೆ ರಾಜ್ಯ ಸರ್ಕಾರಗಳು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.  

ದೇಶದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವಾಗ ಮತ್ತು JN.1 ರೂಪಾಂತರಿ ಸೋಂಕು ದಾಖಲಾಗುತ್ತಿದ್ದರೂ ಸಹ, ತಕ್ಷಣದ ಆತಂಕ ಪಡುವ ಯಾವುದೇ ಅಗತ್ಯವಿಲ್ಲ, ಏಕೆಂದರೆ ಸೋಂಕಿತರಲ್ಲಿ 92 ಪ್ರತಿಶತದಷ್ಟು ಜನರು ಮನೆ ಆಧಾರಿತ ಚಿಕಿತ್ಸೆಯಲ್ಲೇ ಗುಣಮುಖರಾಗುತ್ತಿದ್ದಾರೆ, ಈ ರೂಪಾಂತರಿ ವೈರಸ್‌ ಸಣ್ಣ ಮಟ್ಟದ ಅನಾರೋಗ್ಯದ ಲಕ್ಷಣಗಳನ್ನು ಸೃಷ್ಟಿಸುತ್ತದೆ ಅಷ್ಟೇ, ಯಾವುದೇ ರೀತಿಯಲ್ಲಿ ಭಯ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದು.

ಇನ್ನು, ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾತ್ತಿರುವ ಸಂಖ್ಯೆಯಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಏತನ್ಮಧ್ಯೆ ಹಂಚಿಕೊಂಡಿರುವ ಪರಿಷ್ಕೃತ ಕೋವಿಡ್  ನಿವಾರಣೆಗಾಗಿ ತಪಾಸಣೆಗಳನ್ನು ಪರಿಣಾಮಕಾರಿ ಅನುಸರಿಸಬೇಕು ಎಂದು ರಾಜ್ಯ ಸರ್ಕಾರಗಳನ್ನು , ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು  ಒತ್ತಾಯಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!