spot_img
Wednesday, April 22, 2026
spot_img

ಯಾವ ರಾಜ್ಯದ ಕುಟುಂಬಗಳು ಹೆಚ್ಚು ಸಂಪಾದಿಸುತ್ತವೆ !? : ಸಮೀಕ್ಷಾ ವರದಿ

ಜನಪ್ರತಿನಿಧಿ ವಾರ್ತೆ (ನವ ದೆಹಲಿ ) : ಇಂಡಿಯಾʼಸ್‌ ಪಲ್ಸ್‌ ಪರ್ಸನಲ್‌ ಫೈನಾನ್ಸ್‌ ಸಮೀಕ್ಷೆ 2023-24ರ ವರದಿ ಬಿಡುಗಡೆ ಮಾಡಿದ್ದು, ಯಾವ ರಾಜ್ಯದ ಕುಟುಂಬಗಳು ಹೆಚ್ಚು ಸಂಪಾದನೆ ಮಾಡುತ್ತವೆ ಎಂಬ ಮಾಹಿತಿಯನ್ನು ಹೊರ ಹಾಕಿದೆ.

ವರದಿ ಹೇಳುವ ಪ್ರಕಾರ 2023ರಲ್ಲಿ ಕರ್ನಾಟಕದಲ್ಲಿ ಒಂದು ಕುಟುಂಬ ಮಾಸಿಕವಾಗಿ 35,411 ರೂ, ಆದಾಯ ಗಳಿಸುತ್ತದಾದರೇ, ಮಹಾರಾಷ್ಟ್ರದಲ್ಲಿ 35,392 ರೂ. ಹಾಗೂ ಚಂಡೀಗಢದಲ್ಲಿ  34,588 ರೂ. ಆದಾಯ ಗಳಿಸುತ್ತದೆ ಎಂದು ವರದಿ ಹೇಳಿದೆ. ಈ ಮೂರು ರಾಜ್ಯಗಳಲ್ಲಿ ರಾಷ್ಟ್ರೀಯ ಸರಾಸರಿ ಮಾಸಿಕ ಆದಾಯ ರೂ. 25,910 ರೂ ಎಂದು ಹೇಳಿದೆ.

ಇನ್ನು, ಇದೇ ಸಮೀಕ್ಷೆ 2022ರಲ್ಲಿ, ಒಂದು ಕುಟುಂಬ ಮಾಸಿಕವಾಗಿ ಮಹಾರಾಷ್ಟ್ರದಲ್ಲಿ 35,559 ರೂ. ಆದರೇ, ಕರ್ನಾಟಕದಲ್ಲಿ 28,840 ರೂ. ಹಾಗೂ ದೆಹಲಿಯಲ್ಲಿ 28,356 ರೂ. ಆದಾಯ ಗಳಿಸುತ್ತದೆ ಎಂದು ವರದಿ ಮಾಡುತ್ತದೆ. 2022 ರಲ್ಲಿ ಈ ಮೇಲಿನ ಮೂರು ರಾಜ್ಯಗಳಲ್ಲಿ ರಾಷ್ಟ್ರೀಯ ಸರಾಸರಿ ಮಾಸಿಕ ಆದಾಯ 23,000 ರೂ ಎಂದು ವರದಿ ಹೇಳಿದೆ.

2022 ರಲ್ಲಿ ಯಾವ ರಾಜ್ಯದ ಕುಟುಂಬಗಳು ಹೆಚ್ಚು ಸಂಪಾದನೆ ಮಾಡುತ್ತವೆ ಎಂಬ ಸಮೀಕ್ಷೆಯ ವರದಿಯ ಪಟ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನ ಪಡೆದರೇ, 2023ರಲ್ಲಿ ಮೊದಲನೇ ಸ್ಥಾನ ಪಡೆದಿದೆ ಎಂದು ವರದಿ ಹೇಳಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!