Sunday, September 8, 2024

ಕಾವ್ಯ‌ಎನ್ನುವುದು ಸಮಾಜದ ಸ್ಥಿತಿಯನ್ನು ತಿಳಿಸುವ ದಿಕ್ಸೂಚಿ: ಜಯಂತ್‌ಕಾಯ್ಕಿಣಿ

ನಡೂರಿನಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ

ಬ್ರಹ್ಮಾವರ: ಕಾವ್ಯ‌ ಎನ್ನುವುದು ನಮ್ಮ ಸಮಾಜದ ಸ್ಥಿತಿಯನ್ನು ಹೇಳುವಂತಹ ದಿಕ್ಸೂಚಿ. ಮಕ್ಕಳ ಮನಸ್ಸುಕಾವ್ಯಮಯವಾಗಿದ್ದು, ಈ ಸಂದರ್ಭದಲ್ಲಿ‌ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವಲ್ಲಿ ಎಲ್ಲರೂ ಪ್ರೋತ್ಸಾಹವನ್ನು ನೀಡಬೇಕು‌ ಎಂದು ಸಾಹಿತಿ ಜಯಂತ್‌ ಕಾಯ್ಕಿಣಿ ಹೇಳಿದರು.

ಅವರು ಶನಿವಾರ ನಡೂರು ಶ್ರೀ ವಾಣಿ ಪ್ರೌಢಶಾಲೆಯ ವಠಾರದಲ್ಲಿ ಬಾರಕೂರಿನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರ (ರಜತ ಸಂಭ್ರಮ), ಬ್ರಹ್ಮಾವರ ಗಾಳಿಮನೆ ನಡೂರು ದಿ.ಶಿವರಾಮ ಶೆಟ್ಟಿಜನ್ಮ ಶತಮಾನೋತ್ಸವ ಸಮಿತಿ ನಡೂರು, ಶ್ರೀ ವಾಣಿ ಪ್ರೌಢಶಾಲೆಯ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್,ಶ್ರೀ ರಾಮಕೃಷ್ಣ‌ ಆಶ್ರಮ, ಬಾರಕೂರು‌ ಅನ್ ಲೈನ್‌ಡಾಟ್‌ಕಾಮ್ ಸಂಸ್ಥೆಗಳ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಜಿಲ್ಲಾ ಮಟ್ಟದ ೨೦ನೇ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ರಂಗಕರ್ಮಿ‌ ಆಲ್ವಿನ್‌ ಅಂದ್ರಾದೆ ಮಕ್ಕಳ ಸ್ವರಚಿತ ಕವನ ಸಂಕಲನ ಬಿಡುಗಡೆಗೊಳಿಸಿದರು. ಅತಿಥಿಗಳಾಗಿ ಬಿ.ಸೀತಾರಾಮ ತೋಳ್ಪಾಡಿತ್ತಾಯ, ಶಬೀರ್ ಹುಸೈನ್ ಮಲೇಶ್ಯಾ, ಡಾ.ಪಾಂಡು ಶೆಟ್ಟಿಕೆನಡಾ, ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ಗೌರವಾಧ್ಯಕ್ಷ ಬಿ.ಶ್ರೀನಿವಾಸ ಶೆಟ್ಟಿಗಾರ್, ವಾಣಿ ವಿದ್ಯಾಭಿವೃದ್ಧಿ ಸಂಘದ‌ ಆಧ್ಯಕ್ಷ ಬಿ.ಭೋಜ ಹೆಗ್ಡೆ, ಜನ್ಮಶತಮಾನೋತ್ಸವ ಸಮಿತಿಯ‌ ಅಧ್ಯಕ್ಷ ರಾಜಾರಾಮ್ ಶೆಟ್ಟಿ ಸಖಾರಾಮ ಸೋಮಯಾಜಿ, ವಿಶ್ವನಾಥ ಶೆಟ್ಟಿ, ಅಶೋಕ್ ಸಿ.ಪೂಜಾರಿ ಉಪಸ್ಥಿತರಿದ್ದರು. ಸಾಧಕರಾದ ನರೇಂದ್ರಕುಮಾರ್‌ ಕೋಟ, ಡಾ. ಪ್ರಶಾಂತ್ ಶೆಟ್ಟಿ‌ಅವರನ್ನು ಸಮ್ಮಾನಿಸಲಾಯಿತು.

ಕ್ರೀಡೆ. ಕಲಿಕೆ, ಸಾಂಸ್ಕೃತಿಕಮೊದಲಾದ ವಿಭಾಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಕ್ಕೆ‌ಆಯ್ಕಡಯಾದ ಹಾಗು ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಕಾರ್ತಿಕ್ ಸ್ವಾಗತಿಸಿದರು. ಪ್ರಧಾನ ಸಂಘಟಕ ರಾಮಭಟ್ಟ ಸಜಂಗದ್ದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ್‌ ಆಚಾರ್ , ಸುಶಾಂತ್ , ನಂದಿತಾ ಕಾರ್ಯಕ್ರಮ ನಿರ್ವಹಿಸಿದರು. ಕೀರ್ತನಾ ವಂದಿಸಿದರು.

ಮಕ್ಕಳ ಸಾಹಿತ್ಯಕ್ಕೆ‌ಎಲ್ಲಾ ಸಮ್ಮೇಳನಗಳಲ್ಲಿ ಅವಕಾಶ ನೀಡಬೇಕು: ಯಶಸ್ವಿನಿ
ಮಕ್ಕಳ ಸಾಂಸ್ಕೃತಿಕ ಹಾಗು ನೈತಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮಕ್ಕಳ ಸಾಹಿತ್ಯಕ್ಕೆದೊಡ್ಡವರ ಸಮ್ಮೇಳನಗಳಲ್ಲಿ ಅವಕಾಶ ನೀಡಬೇಕು. ಬದುಕಿಗೆ ಮೊಬೈಲ್‌ಗುಂಗಿನಿಂದ ಹೊರಬರಲು ನೈತಿಕ ಮೌಲ್ಯಗಳಿಂದ ಬದುಕು ಸುಂದರವಾಗಿ ಅರಳಲು ಸಾಹಿತ್ಯ‌ಅಗತ್ಯ‌ಎಂದುಬ್ರಹ್ಮಾವರ‌ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆಯ (ಸಿಬಿ‌ಎಸ್ ಇ) ೧೦ನೇ ತರಗತಿ ವಿದ್ಯಾರ್ಥಿನಿ ಯಶಸ್ವಿನಿ ಎ. ಹೇಳಿದರು. ಅವರುಸಮ್ಮೇಳನದ ಆಧ್ಯಕ್ಷತೆ ವಹಿಸಿ ಮಾತನಾಡಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!