spot_img
Wednesday, April 22, 2026
spot_img

ಹಿಂದೂ ಯುವಕರಿಗೆ ಕೇಸರಿ ಧರಿಸುವಂತೆ ಕರೆ ನೀಡುತ್ತೇವೆ : ರೇಣುಕಾಚಾರ್ಯ

ಜನಪ್ರತಿನಿಧಿ ವಾರ್ತೆ (ದಾವಣಗೆರೆ) : ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲೀಂ ವಿದ್ಯಾರ್ಥಿನಿಯರಿಗೆ ಹಿಜಾಬ್‌ ಧರಿಸಲು ಅವಕಾಶ ನೀಡಿದರೆ, ಹಿಂದೂ ಯುವಕ, ಯುವತಿಯರಿಗೂ ಕೇಸರಿ ಶಾಲು ಧರಿಸಲು ಅವಕಾಶ ನೀಡಬೇಕು ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ವರದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರ್ಕಾರದ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ. ಹಿಜಾಬ್‌ ಆದೇಶ ವಾಪಾಸ್‌ ಪಡೆದರೇ ಹಿಂದೂ ಯುವಕರಿಗೆ ಕೇಸರಿ ಶಾಲಿ ಧರಿಸುವಂತೆ ನಾವೇ ಕರೆ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೇಸ್‌ ನೇತೃತ್ವದ ಸರ್ಕಾರ ಇಲ್ಲ, ಬದಲಾಗಿ ಟಿಪ್ಪು ನೇತೃತ್ವದ ತುಘಲಕ್‌ ಸರ್ಕಾರ ಇದೆ. ಸಿಎಂ ಸಿದ್ದರಾಮಯ್ಯ ಅವರು ಊಟ, ಬಟ್ಟೆ ನಮ್ಮ ಹಕ್ಕಿ ಎನ್ನುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಎಲ್‌ಕೆಜಿಯಿಂದ ಕಾಲೇಜಿನವರೆಗೆ ಸಮವಸ್ತ್ರ ಕಡ್ಡಾಯ ಮಾಡಲಾಗಿದ್ದು, ೨೦೨೧ರಲ್ಲಿ ಉಡುಪಿ ಪಿಯು ಕಾಲೇಜಿನ ವಿದ್ಯಾರ್ಥಿನಿಯರು ಹಿಜಾಬ್‌ ನನ್ನು ಮುನ್ನೆಲೆಗೆ ತಂದಿದ್ದರು. ಅಂದು ರಾಜ್ಯದಲ್ಲಿ ದೊಡ್ಡ ಘಟನೆಯೇ ನಡೆದು ಹೋಯಿತು ಎಂದು ಅವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!