Sunday, September 8, 2024

ಡಿ.23ರಂದು ನಡೂರು ಶ್ರೀ ವಾಣಿ ಪ್ರೌಢಶಾಲೆಯ ವಠಾರದಲ್ಲಿ ಪ್ರೌಢಶಾಲಾ ಮಟ್ಟದ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ

ಬ್ರಹ್ಮಾವರ: ಬಾರಕೂರಿನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರ (ರಜತ ಸಂಭ್ರಮ), ಬ್ರಹ್ಮಾವರ ಗಾಳಿಮನೆ ನಡೂರು ದಿ.ಶಿವರಾಮ ಶೆಟ್ಟಿಜನ್ಮ ಶತಮಾನೋತ್ಸವ ಸಮಿತಿ ನಡೂರು, ಶ್ರೀ ವಾಣಿ ಪ್ರೌಢಶಾಲೆಯ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ,ಶ್ರೀ ರಾಮಕೃಷ್ಣ‌ ಆಶ್ರಮ , ಬಾರಕೂರು‌ ಅನ್ ಲೈನ್‌ ಡಾಟ್‌ಕಾಮ್ ಸಂಸ್ಥೆಗಳ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ 20ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಡಿ.23ರಂದು ನಡೂರು ಶ್ರೀ ವಾಣಿ ಪ್ರೌಢಶಾಲೆಯ ವಠಾರದಲ್ಲಿ ಜರಗಲಿದೆ‌ಎಂದು ಪ್ರಧಾನ ಸಂಘಟಕ ರಾಮಭಟ್ಟ ಸಜಂಗದ್ದೆ ಹೇಳಿದರು.

ಬ್ರಹ್ಮಾವರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ‌ ಅವರು ಮಾತನಾಡಿ 9ಕ್ಕೆ ಬಾಲ ಪ್ರತಿನಿಧಿಗಳು ಮತ್ತು ಅತಿಥಿಗಳ ಮೆರವಣಿಗೆಗೆ ಕಾಡೂರು ಗ್ರಾ.ಪಂ.ಅಧ್ಯಕ್ಷಜಲಂಧರ ಶೆಟ್ಟಿ ಚಾಲನೆ ನೀಡಲಿದ್ದಾರೆ.9.30ಕ್ಕೆ ಸಾಹಿತಿ ಜಯಂತ ಕಾಯ್ಕಿಣಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಬ್ರಹ್ಮಾವರ‌ ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆಯ (ಸಿಬಿ‌ಎಸ್ ಇ) 10ನೇ ತರಗತಿ ವಿದ್ಯಾರ್ಥಿನಿ ಯಶಸ್ವಿನಿ ಎ.ಬಾರಕೂರು ಸಮ್ಮೇಳನದ ಸರ್ವಾಧ್ಯಕ್ಷೆಯಾಗಿದ್ದಾರೆ.

ರಂಗಕರ್ಮಿ‌ ಆಲ್ವಿನ್‌ ಅಂದ್ರಾದೆ ಮಕ್ಕಳ ಸ್ವರಚಿತ ಕವನ ಸಂಕಲನ ಬಿಡುಗಡೆಗೊಳಿಸಲಿದ್ದಾರೆ. ಅತಿಥಿಗಳಾಗಿ ವಿದ್ಯಾಂಗ‌ ಉಪನಿರ್ದೇಶಕ ಕೆ.ಗಣಪತಿ, ಪ್ರಮುಖರಾದ ಬಿ.ಸೀತಾರಾಮ ತೋಳ್ಪಾಡಿತ್ತಾಯ, ಶಬೀರ್ ಹುಸೈನ್ ಮಲೇಶ್ಯಾ, ಡಾ.ಪಾಂಡು ಶೆಟ್ಟಿ, ಡಾ, ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ಗೌರವಾಧ್ಯಕ್ಷ ಬಿ.ಶ್ರೀನಿವಾಸ ಶೆಟ್ಟಿಗಾರ್, ವಾಣಿ ವಿದ್ಯಾಭಿವೃದ್ಧಿ ಸಂಘದ‌ ಆಧ್ಯಕ್ಷ ಬಿ.ಭೋಜ ಹೆಗ್ಡೆ, ಜನ್ಮಶತಮಾನೋತ್ಸವ ಸಮಿತಿಯ‌ ಅಧ್ಯಕ್ಷ ರಾಜಾರಾಮ್ ಶೆಟ್ಟಿ ಉಪಸ್ಥಿತರಿರುವರು.

ಈ ಸಂದರ್ಭ ಸಾಧಕರಾದ ನರೇಂದ್ರಕುಮಾರ್‌ ಕೋಟ, ಡಾ. ಪ್ರಶಾಂತ್ ಶೆಟ್ಟಿ ಮತ್ತು ಬಾರಕೂರಿನ ಸರಕಾರಿ ಪ್ರಥಮದರ್ಜೆ ಕಾಲೇಜು ಸೇರಿದಂತೆ ವಿವಿಧ ಪದವಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಹೆಸರು ಮಾಡಿರುವ ರಾಜಶೇಖರ ಹೆಬ್ಬಾರ್ ಈ ಸಾಧಕರನ್ನು ಸಂಮಾನ ಗೌರವಿಸಲಾಗುವುದು.

ಸಮಾರೋಪ ಸಮಾರಂಭ:
ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ‌ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ‌ ಅಧ್ಯಕ್ಷ ನೀಲಾವರ ಸುರೆಂದ್ರ‌ ಅಡಿಗ, ಶಬಾನ ಅಂಜುಮ್, ಅಭಿಲಾಷ‌ಎಸ್., ಬ್ರಹ್ಮಾವರ ಮತ್ತುಡಾ. ಕೃಷ್ಣಮೂರ್ತಿ‌ ಉಪಸ್ಥಿತರಿರುತ್ತಾರೆ. ಸಮಾರೋಪ ಸಮಾರಂಭದಲ್ಲಿ ಸಮ್ಮೇಳನದಲ್ಲಿ ಭಾಗವಹಿಸಿದ ಬಾಲಪ್ರತಿನಿಧಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ‌ಅಶೋಕ್ ಪೂಜಾರಿ, ಸಖಾರಾಮ ಸೋಮಯಾಜಿ, ವಿಶ್ವನಾಥ ಶೆಟ್ಟಿ, ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!