Sunday, September 8, 2024

ಶ್ರೀರಾಮ ಮಂದಿರ ಉದ್ಘಾಟನಾ ಸಮಾರಂಭ : ಸೋನಿಯಾ ಸೇರಿ ಪ್ರಮುಖ ವಿರೋಧ ಪಕ್ಷದ ನಾಯಕರಿಗೆ ಆಹ್ವಾನ !

ಜನಪ್ರತಿನಿಧಿ ವಾರ್ತೆ (ಉತ್ತರ ಪ್ರದೇಶ) : ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭಕ್ಕೆ ವಿಪಕ್ಷಗಳ ಉನ್ನತ ನಾಯಕರನ್ನು ಆಹ್ವಾನಿಸಲಾಗಿದೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಉದ್ಘಾಟನೆಗೆ ಹಿರಿಯ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಚೌಧರಿ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಆಹ್ವಾನ ಕಳುಹಿಸಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.

ಆದರೆ, ಸುದ್ದಿ ಸಂಸ್ಥೆ ಪಿಟಿಐ, ಕಾಂಗ್ರೆಸ್ ನಾಯಕರು ಪಾಲ್ಗೊಳ್ಳುವ ಸಾಧ್ಯತೆಯಿಲ್ಲ ಎಂದು ವರದಿ ಮಾಡಿದೆ.

ಹೊಸದಾಗಿ ನಿರ್ಮಿಸಲಾದ ದೇವಾಲಯದ ಗರ್ಭಗುಡಿಯಲ್ಲಿ ರಾಮಲಲ್ಲಾನ ಹೊಸ ವಿಗ್ರಹದ ಪ್ರತಿಷ್ಠಾಪನೆಗೆ ಗಣ್ಯರನ್ನು ಆಹ್ವಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಇತರ ವಿರೋಧ ಪಕ್ಷದ ನಾಯಕರಿಗೆ ಹೆಚ್ಚಿನ ಆಹ್ವಾನಗಳನ್ನು ಕಳುಹಿಸುವ ಸಾಧ್ಯತೆಯಿದೆ ಎಂದು ಕೂಡ ಪಿಟಿಐ ವರದಿ ಮಾಡಿದೆ.

ಇನ್ನು, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಹಲವು ಗಣ್ಯರ ಉಪಸ್ಥಿತಿ ಇರುವ ಸಮಾರಂಭದ ಸಿದ್ಧತೆಗಳು ಭರದಿಂದ ಸಾಗಿವೆ ಮತ್ತು ಜನವರಿ 15 ರೊಳಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಪ್ರಾಣ ಪ್ರತಿಷ್ಠಾ ಪೂಜೆಯು ಜನವರಿ 16 ರಂದು ಪ್ರಾರಂಭವಾಗಿ ಜನವರಿ 22 ರಿಂದ ಮುಕ್ತಾಯಗೊಳ್ಳಲಿದೆ.

ರಾಮಮಂದಿರದ ಪ್ರತಿಷ್ಠಾಪನಾ ಸಮಾರಂಭದ ಅಂಗವಾಗಿ ಜನವರಿ 17 ರಂದು ಅಯೋಧ್ಯೆಯಲ್ಲಿ 100 ದೇವತೆಗಳ ವಿಗ್ರಹಗಳೊಂದಿಗೆ ಭಗವಾನ್ ರಾಮನ ಜೀವನದ ದೃಶ್ಯಗಳನ್ನು ಪ್ರದರ್ಶಿಸುವ ಟ್ಯಾಬ್ಲೋಕ್ಸ್ ಮೆರವಣಿಗೆಯೂ ಇರಲಿದೆ.

ಮೆರವಣಿಗೆಯಲ್ಲಿ ಭಗವಾನ್ ರಾಮನ ಜನ್ಮದಿಂದ ವನವಾಸದವರೆಗಿನ ಜೀವನ, ಲಂಕಾ ವಿರುದ್ಧದ ವಿಜಯ ಮತ್ತು ಅಯೋಧ್ಯೆಗೆ ಹಿಂದಿರುಗಿದ ಚಿತ್ರಗಳು ಇರುತ್ತವೆ ಎಂದು ಟ್ಯಾಬ್ಲೋಕ್ಸ್ ಸಿದ್ಧಪಡಿಸುವ ಮುಖ್ಯ ಶಿಲ್ಪಿ ರಂಜಿತ್ ಮಂಡಲ್ ಹೇಳಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!