spot_img
Wednesday, January 22, 2025
spot_img

2023ರಲ್ಲಿ 10ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ 29 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ !

ಜನಪ್ರತಿನಿಧಿ ವಾರ್ತೆ (ನವ ದೆಹಲಿ) : ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಒಂದು ಗಂಭೀರವಾದ ಮಾಹಿತಿಯನ್ನು ಹೊರ ಹಾಕಿದೆ. 2023 ರ ಶೈಕ್ಷಣಿಕ ವರ್ಷದಲ್ಲಿ 29 ಲಕ್ಷ ವಿದ್ಯಾರ್ಥಿಗಳು ತಮ್ಮ 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದೆ.

10ನೇ ತರಗತಿ ಪರೀಕ್ಷೆಯಲ್ಲಿ ಒಟ್ಟು 1,89,90,809 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 1,60,34,671 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, 29,56,138 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಎಂಬ ಮಾಹಿತಿಯನ್ನು ನೀಡಿದೆ.  

ಲೋಕಸಭೆಯಲ್ಲಿ ಅಧಿವೇಶನದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ ಡೇಟಾವನ್ನು ಹಂಚಿಕೊಂಡಿದ್ದಾರೆ.

10 ನೇ ತರಗತಿಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಹೆಚ್ಚಾಗುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ, 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂಬ ಮಾಹಿತಿಯನ್ನು ಈ ಡೇಟಾ ಬಹಿರಂಗಗೊಳಿಸಿದೆ.

2019 ರಿಂದ 2022 ರವರೆಗಿನ ಅಂಕಿಅಂಶಗಳನ್ನು ಗಮನಿಸುವುದಾದರೇ, 2019 ರಲ್ಲಿ 1,09,800 ಅನುತ್ತೀರ್ಣರಾದರೇ, 2020 ರಲ್ಲಿ 1,00,812 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ, 2021 ರಲ್ಲಿ ಈ ಅನುತ್ತೀರ್ಣರಾದ ವಿದ್ಯಾರ್ಥಿಗಳ ಪ್ರಮಾಣ 31,196 ಕ್ಕೆ ಇಳಿಕೆ ಕಂಡುಬಂದಿದೆ ಮತ್ತು 2022ರಲ್ಲಿ  1,17,202 ಕ್ಕೆ ಗಮನಾರ್ಹ ಏರಿಕೆಯನ್ನು ಕಾಣಬಹುದಾಗಿದೆ.

ಬಹುತೇಕ ಎಲಾ ಎಸ್‌ಎಸ್‌ಎಲ್‌ಸಿ ಬೋರ್ಡ್‌ಗಳು ಇದೇ  ವರದಿ ಮಾಡುತ್ತವೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳ ಪ್ರಮಾಣ ಹೆಚ್ಚಳವಾಗುತ್ತಿದೆ ಎಂಬ ವರದಿಯನ್ನೇ ಬಹುತೇಕ ಎಲ್ಲಾ ಶೈಕ್ಷಣಕ ಮಂಡಳಿಗಳು ಹೇಳಿವೆ. ಒಂದು ಶೈಕ್ಷಣಿಕ ಮಂಡಳಿಗೆ ಇದು ಸೀಮಿತವಾಗಿಲ್ಲ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS), ಅಸ್ಸಾಂ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, ಬಿಹಾರ ಸ್ಕೂಲ್ ಎಕ್ಸಾಮಿನೇಷನ್ ಬೋರ್ಡ್ (BSEB), ಛತ್ತೀಸ್‌ಗಢ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, ಗುಜರಾತ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಶನ್ ಬೋರ್ಡ್, ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್ ಹರಿಯಾಣ (HSEB) ಸೇರಿದಂತೆ ವಿವಿಧ ಮಂಡಳಿಗಳು , ಮಹಾರಾಷ್ಟ್ರ ಸ್ಟೇಟ್ ಬೋರ್ಡ್ ಆಫ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಶನ್, ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಮಧ್ಯಪ್ರದೇಶ, ಮಾಧ್ಯಮಿಕ ಶಿಕ್ಷಾ ಪರಿಷತ್ ಉತ್ತರ ಪ್ರದೇಶ, ಮತ್ತು ಇತರರು, ಕಳೆದ ವರ್ಷದಲ್ಲಿ ಗಣನೀಯ ಸಂಖ್ಯೆಯ 10 ನೇ ತರಗತಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಎಂದು ವರದಿ ಮಾಡಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿರುವುದಕ್ಕೆ ಹಲವು ಅಂಶಗಳು :

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣಗೊಳ್ಳುತ್ತಿರುವುದಕ್ಕೆ ಹಲವಾರು ಅಂಶಗಳನ್ನು ಎತ್ತಿ ತೋರಿಸಿದ್ದಾರೆ.

“ಶಾಲೆಗಳಿಗೆ ಹಾಜರಾಗದಿರುವುದು, ಶಾಲಾ ಸೂಚನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿನ ಸವಾಲುಗಳು, ಅಧ್ಯಯನದಲ್ಲಿ ಆಸಕ್ತಿಯ ಕೊರತೆ, ಪ್ರಶ್ನೆ ಪತ್ರಿಕೆಗಳಲ್ಲಿನ ತಪ್ಪುಗಳು ಅಥವಾ ಗೊಂದಲಗಳ, ಅರ್ಹ ಶಿಕ್ಷಕರ ಕೊರತೆ, ಪೋಷಕರಿಂದ ಶಿಕ್ಷಣಕ್ಕೆ ಸಾಕಷ್ಟು ಬೆಂಬಲ ದೊರೆಯದೇ ಇರುವುದು  ಸೇರಿದಂತೆ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ವೈಫಲ್ಯಕ್ಕೆ ಕಾರಣವಾಗುವ ಅಂಶಗಳು ಸಾಕಷ್ಟಿವೆ. ಶಾಲೆಗಳಲ್ಲಿ ಪೂಋಖೌಆದ ಓದಿನ ವಾತಾವರಣ ಇಲ್ಲದೇ ಇರುವುದನ್ನು ಒಳಗೊಂಡು, ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆ ಹಾಗೂ ಡಿಜಿಮೀಡಿಯಾಗಳ ಆಕರ್ಷಣೆ ಇತ್ಯಾದಿಗಳು ವಿದ್ಯಾರ್ಥಿಗಳ ಪ್ರಮುಖ ಹಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳ್ಳುವುದಕ್ಕೆ ಮುಖ್ಯ  ಎಂದು ಕೇಂದ್ರ  ಶಿಕ್ಷಣ ಸಚಿವರು ಹೇಳಿದ್ದಾರೆ.

ಕೋವಿಡ್‌ ಸೋಂಕ್ರಾಮಿಕ ರೋಗವೂ ಕಲಿಕೆಗೆ ಕೆಟ್ಟ ಪ್ರಭಾವ !

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥೀಗಳು ಅನುತ್ತೀರ್ಣವಾಗುತ್ತಿರುವ ಪ್ರಮಾಣ ಹೆಚ್ಚಳವಾಗುತ್ತಿರುವುದಕ್ಕೆ ಕೋವಿಡ್‌ ಸಾಂಕ್ರಾಮಿಕ ರೋಗ ಬೀರಿದ ಕೆಟ್ಟ ಪರಿಣಾಮವೂ ಕಾರಣ ಎಂದು ಕೇಂದ್ರ ಶಿಕ್ಷಣ ಸಚಿವರು ಉಲ್ಲೇಖಿಸದ ವಿಷಯವನ್ನು ತಳ್ಳಿ ಹಾಕುವಂತಿಲ್ಲ. ಮತ್ತೊಂದು ಸಂಭವನೀಯ ಅಂಶವೆ ಶಿಕ್ಷಣದ ಮೇಲೆ ಕೋವಿಡ್ -19 ಸಾಂಕ್ರಾಮಿಕದ ಕೆಟ್ಟ ಪ್ರಭಾವ.

ಕೋವಿಡ್‌ ಸಾಂಕ್ರಾಮಿಕ ರೋಗ ಕಾಲಘಟ್ಟ ಅಸಮಾನತೆಗಳನ್ನು ಹೆಚ್ಚಿಸಿತು, ಅಳಿವಿನಂಚಿನಲ್ಲಿರುವ ಸಮುದಾಯಗಳ ಮೇಲೆ ಪರಿಣಾಮ ಬೀರುತ್ತದೆ. ಆ ಸಮುದಾಯಗಳಲ್ಲಿನ ವಿದ್ಯಾರ್ಥಿಗಳು ಇದರಿಂದ ಹೊರತಾಗಿರಲಿಲ್ಲ. ಸಾಮಾಜಿಕ ಬಿಕ್ಕಟ್ಟು, ಶೈಕ್ಷಣಿಕ ಅಡೆತಡೆ, ಆನ್‌ಲೈನ್‌ ತರಗತಿಗಳು ಇವೆಲ್ಲಾ  ಹಿಂದುಳಿದವರಿಗೆ ಸಾಮಾಜಿಕ-ಆರ್ಥಿಕ ಪ್ರಗತಿಗೆ ಅಡೆತಡೆಗಳನ್ನು ತೀವ್ರಗೊಳಿಸಿತು.

2021 ರ ಯುನಿಸೆಫ್ ವರದಿಯು ದಕ್ಷಿಣ ಏಷ್ಯಾದಲ್ಲಿ ದೊಡ್ಡ ಮಟ್ಟದಲ್ಲಿ ಶೈಕ್ಷಣಿಕ ಹಿನ್ನಡೆಯಾಗಿರುವುದನ್ನು ಬಹಿರಂಗಪಡಿಸಿದೆ/ ಕೋವಿಡ್‌ ಸೋಂಕಿನ ಪರಿಣಾಮದಿಂದ ಸುಮಾರು 434 ಮಿಲಿಯನ್ ವಿದ್ಯಾರ್ಥಿಗಳು ಕಲಿಕೆಯ ನಷ್ಟವನ್ನು ಅನುಭಿಸಿದರು.

ಇನ್ನು, ಭಾರತದಲ್ಲಿ, 14-18 ವರ್ಷ ವಯಸ್ಸಿನ ಹದಿಹರೆಯದವರಲ್ಲಿ 80 ಪ್ರತಿಶತದಷ್ಟು ವಿದ್ಯಾರ್ಥಿಗಳು ಕೋವಿಡ್‌ ಸಾಂಕ್ರಾಮಿಕ ಕಾಲ ಘಟ್ಟದಲ್ಲಿ ಶಾಲಾ ಕಲಿಕಾ ಆಸಕ್ತಿಯನ್ನು ಕಳೆದುಕೊಂಡರು ಮತ್ತು ಡಿಜಿಮೀಡಿಯಾಗಳತ್ತ ತಮ್ಮ ಚಿತ್ತವನ್ನು ಹರಿಸಿದರು ಎಂದು ವರದಿ ಮಾಡಿದೆ. ಶ್ರೀಲಂಕಾದಲ್ಲಿ, 69 ಪ್ರತಿಶತ ಪೋಷಕರು ತಮ್ಮ ಪ್ರಾಥಮಿಕ ಶಾಲಾ ಮಕ್ಕಳು “ಕಡಿಮೆ” ಅಥವಾ “ಬಹಳಷ್ಟು ಕಡಿಮೆ” ಕಲಿಯುತ್ತಿದ್ದಾರೆಂದು ಎಂಬುವುದನ್ನು ಗಮನಿಸಿದ್ದಾರೆ. ವಿಶೇಷವಾಗಿ ಹುಡುಗಿಯರು, ಹಿಂದುಳಿದ ವರ್ಗಗಳ ಮಕ್ಕಳು ಮತ್ತು ವಿಕಲಾಂಗ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ವ್ಯತಿರಿಕ್ತ ಪರಿಣಾಮ ಅನುಭವಿಸಿದ್ದಾರೆ ಎಂದು ವರದಿ ಹೇಳಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!