Sunday, September 8, 2024

ಪ್ರಧಾನಿ ಮೋದಿ ಸಂಸದರ ವರ್ತನೆಯ ಬಗ್ಗೆ ಕರೆ ಮಾಡಿ ದುಃಖ ವ್ಯಕ್ತಪಡಿಸಿಕೊಂಡರು : ಜಗದೀಪ್ ಧಂಖರ್

ಜನಪ್ರತಿನಿಧಿ ವಾರ್ತೆ (ನವ ದೆಹಲಿ) : ಪ್ರಧಾನಿ ನರೇಂದ್ರ ಮೋದಿ ಇಂದು( ಬುಧವಾರ) ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರಿಗೆ ಕರೆ ಮಾಡಿ ಸಂಸತ್ತಿನ ಭವನದಲ್ಲಿ ಕೆಲವು ಸಂಸದರ  ವರ್ತನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಸಂಸತ್ತಿನ ಮೆಟ್ಟಿಲುಗಳ ಮೇಲೆ ಸಂಸತ್ತಿನಲ್ಲಿ ಭದ್ರತಾ ಲೋಪ ಆಗಿದ ಪ್ರತಿಪಕ್ಷಗಳ ಪ್ರತಿಭಟನೆಯ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಕಲ್ಯಾಣ್ ಬ್ಯಾನರ್ಜಿ ಅವರು ಧಂಖರ್ ಅವರನ್ನು ಲೇವಡಿ ಮಾಡಿದ ಹಿನ್ನೆಲೆಯಲಲ್ಲಿ ಪ್ರಧಾನಿ ಮೋದಿ ಉಪರಾಷ್ಟ್ರಪತಿಗೆ ಕರೆ ಮಾಡಿ ಸಂತೈಸಿದ್ದಾರೆ.

ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ಈ ಬಗ್ಗೆ ಹಂಚಿಕೊಂಡ ಉಪರಾಷ್ಟ್ರಪತಿ ಜಗದೀಪ್ ಧಂಖರ್, ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಕರೆ ಸ್ವೀಕರಿಸಿದ್ದೇನೆ. ಸಂಸದರ ವರ್ತನೆಯ ಬಗ್ಗೆ ಅವರು ದುಃಖವನ್ನು ವ್ಯಕ್ತಪಡಿಸಿದರು. ತಾನು ಇಪ್ಪತ್ತು ವರ್ಷಗಳಿಂದ ಇಂತಹುದ್ದೇ ಅಪಮಾನಗಳನ್ನು, ಅವಮಾನಗಳನ್ನು ಸ್ವೀಕರಿಸಿದ್ದೇನೆ ಎಂದು ಅವರು ಹೇಳಿದರು. ಉಪರಾಷ್ಟ್ರಪತಿಯಂತಹ ಸಾಂವಿಧಾನಿಕ ಹುದ್ದೆಗೆ ಹಾಗೂ ಪವಿತ್ರ ಸಂಸತಿಗೆ ಇಂತಹ ಅಗೌರವ ಸೂಚಿಸಿರುವುದು ವಿಷಾಧನಿಯ. ಸಂಸತ್ತಿನಲ್ಲಿಯೂ ಇಂತಹ ಘಟನೆ ನಡೆಯುತ್ತದೆ ಎಂಬುವುದು ದುರದೃಷ್ಟಕರವಾಗಿದೆʼ ಎಂದು ಮೋದಿ ಹೇಳಿದ್ದಾರೆಂದು ಅವರು ಬರೆದುಕೊಂಡಿದ್ದಾರೆ.

ಇನ್ನು, ಆಡಳಿತಾರೂಢ ಬಿಜೆಪಿಯ ಅಧಿಕಾರ ದುರ್ಬಳಕೆಗೆ ಗುರಿಯಾದ ಹಾಗೂ ಸಂಸತ್‌ ಅಧಿವೇಶನದ ಉಳಿದ ಅವಧಿಗೆ ಅಮಾನಾತಾದ ಸಂಸದರು ತಮ್ಮ ಅಮಾನತು ವಿರುದ್ಧ ಪ್ರತಿಭಟನೆ ನಡೆಸಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!