spot_img
Thursday, April 23, 2026
spot_img

ಸಂಸತ್‌ ಭದ್ರತಾ ಲೋಪ : ಗಂಬೀರ ಚರ್ಚೆಯ ವಿಷಯವೇ ಅಲ್ಲ ಎಂದು ಪ್ರತಿಪಾದಿಸುತ್ತಿರುವುದು ಬಿಜೆಪಿ ಸರ್ಕಾರ ದೇಶಕ್ಕೆ ಎಸಗುತ್ತಿರುವ ಮಹಾ ದ್ರೋಹ : ಕಾಂಗ್ರೆಸ್‌

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಸಂಸತ್‌ ನಲ್ಲಿ ಭದ್ರತಾ ಲೋಪ ಆಗಿದೆ ಎನ್ನುವ ಕಾರಣಕ್ಕೆ ಪ್ರತಿಪಕ್ಷದ ೪೯ ಸಂಸದನ್ನು ಅಧಿವೇಶನದ ಉಳಿದ ಭಾಗಗಳಿಗೆ ಅಮಾನತು ಮಾಡಿರುವುದನ್ನು ರಾಜ್ಯ ಕಾಂಗ್ರೆಸ್‌ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದೆ.

ತನ್ನ ಸಾಮಾಜಿಕ ಜಾಲತಾಣ ʼಎಕ್ಸ್‌ʼನಲ್ಲಿ ಬಿಜೆಪಿ ವಿರುದ್ಧ ಟೀಕೆ ಮಾಡಿದ ಕಾಂಗ್ರೆಸ್‌,  ಚರ್ಚೆ, ಪ್ರಶ್ನೋತ್ತರಗಳಿಲ್ಲದ ಸಂಸತ್ತನ್ನು ಕೇವಲ ಕಟ್ಟಡವಾಗಿ ಸೀಮಿತಗೊಳಿಸಿದೆ ಕೇಂದ್ರ ಸರ್ಕಾರ ಎಂದು ಹೇಳಿದೆ.

ಗೃಹಸಚಿವ ಅಮಿತ್‌ ಶಾ ಪ್ರಶ್ನೆಗಳನ್ನು ತಪ್ಪಿಸಿಕೊಂಡು ಓಡಿಹೋಗಿರುವುದಕ್ಕೆ. ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪದ ಬಗ್ಗೆ ಮಾತಾಡದೆ ಪಲಾಯನ ಮಾಡಿರುವುದಕ್ಕೆ. ಚರ್ಚೆಗೆ ಆಗ್ರಹಿಸಿದ ವಿಪಕ್ಷಗಳ ಸಂಸದರನ್ನು ಅಮಾನತು ಮಾಡಿರುವುದಕ್ಕೆ. ಮುಖ್ಯ ಕಾರಣ ಕೇಂದ್ರ ಸರ್ಕಾರದ ಹೊಣೆಗೇಡಿತನ. ಸಂಸತ್ ಭವನದ ಭದ್ರತಾ ಮುಖ್ಯಸ್ಥನ ಹುದ್ದೆ ಖಾಲಿ ಉಳಿಸಿದ ಕೇಂದ್ರ ಸರ್ಕಾರ ಭದ್ರತಾ ಸಿಬ್ಬಂದಿಗಳ ಕೊರತೆಯನ್ನೂ ನೀಗಿಸಲಿಲ್ಲ. ಇಂತಹ ಭದ್ರತಾ ಲೋಪವು ಗಂಬೀರ ಚರ್ಚೆಯ ವಿಷಯವೇ ಅಲ್ಲ ಎಂದು ಪ್ರತಿಪಾದಿಸುತ್ತಿರುವುದು ಬಿಜೆಪಿ ಸರ್ಕಾರ ದೇಶಕ್ಕೆ ಎಸಗುತ್ತಿರುವ ಮಹಾ ದ್ರೋಹ ಎಂದು ಆಕ್ರೋಶ ಹೊರಹಾಕಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!