Sunday, September 8, 2024

ಜೆಎನ್.1 ಕೊರೋನಾ ರೂಪಾಂತರಿ ಸೋಂಕಿನ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ : ಐಎನ್ಎಸ್‌ಎಸಿಒಜಿ

ಜನಪ್ರತಿನಿಧಿ (ನವ ದೆಹಲಿ) : ಜೆಎನ್.1 ಕೊರೋನಾ ರೂಪಾಂತರಿ ಬಗ್ಗೆ ಯಾವುದೇ ಆತಂಕ ಬೇಡ ಎಂದು ಭಾರತೀಯ ಸಾರ್ಸ್‌ -ಕೋವ್‌೨ ಜಿನೋಮ್‌ ಒಕ್ಕೂಟದ (ಐಎನ್ಎಸ್‌ಎಸಿಒಜಿ) ಮುಖ್ಯಸ್ಥ ಡಾ. ಎನ್.ಕೆ. ಅರೋರಾ ಹೇಳಿದ್ದಾರೆ.

ಕೇರಳದಲ್ಲಿ ಮೃತಪಟ್ಟ ವ್ಯಕ್ತಿ ಕೇವಲ ಕೋರೋನಾ ಸೋಂಕಿನಿಂದ ಮೃತಪಟ್ಟಿದ್ದಲ್ಲ,. ಆತನಿಗೆ ಗಂಭೀರವಾದ ಆರೋಗ್ಯ ಸಮಸ್ಯೆ ಇತ್ತು ಎಂದು ಅವರು ಹೇಳಿದ್ದಾರೆ.  

ಕೇರಳದಲ್ಲಿ ಮೃತಗೊಂಡ ವ್ಯಕ್ತಿ ಹೃದಯ, ಶ್ವಾಸಕೋಶ ಹಾಗೂ ಮೂತ್ರಪಿಂಡ ಸಮಸ್ಯೆಗಳಿಂದ ಬಳಲುತ್ತಿದ್ದರು. ಈ ಕಾರಣಗಳಿಂದ ಸಾವು ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ. ಕೇವಲ ಜೆಎನ್.1 ಕೊರೋನಾ ರೂಪಾಂತರಿ ಸೋಂಕಿನಿಂದಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ರೂಪಾಂತರಿ ಬಗ್ಗೆ ಯಾವುದೇ ರೀತಿಯಲ್ಲಿ ಆತಂಕ ಪಡುವ ಅವಶ್ಯಕತೆ ಇಲ್ಲ. ಸೋಂಕಿತರ ಮಾದರಿಗಳ ಒಟ್ಟು ಸಂಖ್ಯೆ ಬಹಳಷ್ಟು ಕಡಿಮೆ ಇದೆ. ಸದ್ಯ, ಎಲ್ಲಾ ರಾಜ್ಯಗಳಿಂದ ಮಾದರಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಕೋರೋನಾ ಪ್ರಕರಣಗಳ ಹೆಚ್ಚಳ ಹಾಗೂ ಕೊರೋಮಾ ಸೋಂಕಿನ ಜೆಎನ್.1 ರೂಪಾಂತರಿ ಸೋಂಕು ದೇಶದಲ್ಲಿ ಮೊದಲ ಬಾರಿಬಗೆ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೋವಿಡ್‌ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಲು ಕೇಂದ್ರ ಆರೋಗ್ಯ ಇಲಾಖೆ ಎಲ್ಲಾ ರಾಜ್ಯಗಳು ಹಾಊ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!