Sunday, September 8, 2024

ಮಕ್ಕಳಿಗೆ ತಮ್ಮ ಸೃಜನಶೀಲತೆ ವೃದ್ದಿಸಿಕೊಳ್ಳಲು ಪ್ರಸ್ತುತ ವಿಫುಲ ಅವಕಾಶ-ರಮೇಶ ಗುಲ್ವಾಡಿ

ಕುಂದಾಪುರ: ”ಮಕ್ಕಳಿಗೆ ತಮ್ಮ ಸೃಜನಶೀಲತೆ ಹೆಚ್ಚಿಸಿಕೊಳ್ಳಲು ಇಂದು ಹೆಚ್ಚು ಅವಕಾಶಗಳಿವೆ. ಬೈಲೂರು ಶಾಲೆ ಆ ನಿಟ್ಟಿನಲ್ಲಿ ಮಕ್ಕಳಿಗೆ ಕನ್ನಡ ನಡೆನುಡಿಯಂತಹ ಕಾರ್ಯಕ್ರಮದ ಮೂಲಕ ಉತ್ತಮ ಅವಕಾಶಗಳನ್ನು ಮಾಡಿಕೊಡುತ್ತಿದೆ” ಎಂದು ಕವಿ, ಸಾಹಿತಿ ರಮೇಶ ಗುಲ್ವಾಡಿ ಹೇಳಿದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಇಲ್ಲಿ ನ.೩೦ರಂದು ಕನ್ನಡ ನಡೆನುಡಿ ಸಮಾರೋಪ ಸಮಾರಂಭ ಮತ್ತು ಕನಕ ದಾಸರ ಜಯಂತಿಯಂದು ನಡೆದ ಸಭಾ ಕಾರ್ಯಕ್ರಮದಲ್ಲಿ ಮಕ್ಕಳ ಪತ್ರಿಕೆಯನ್ನು ಅನಾವರಣ ಮಾಡಿ ಮಾತನಾಡಿದರು.

ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರುತಿ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮಾಜಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸಂತೋಷ ಕುಮಾರ ಉಪಸ್ಥಿತರಿದ್ದರು.

ಕನಕದಾಸ ಜಯಂತಿಯ ಅಂಗವಾಗಿ ಮಕ್ಕಳು ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕನಕದಾಸರ ಕೀರ್ತನೆಗಳನ್ನು ಹಾಡಿದರು. ಇದೇ ಸಂದರ್ಭದಲ್ಲಿ ಸರಣಿ ಸಾಹಿತ್ಯ ರಚನಾ ಕಮ್ಮಟದಲ್ಲಿ ಮಕ್ಕಳು ರಚಿಸಿದ ಕಥೆ, ಕವನ, ಲೇಖನಗಳು ಮತ್ತು ರಮೇಶ ಗುಲ್ವಾಡಿಯವರ ಕವನಗಳ ವಾಚನ ಮತ್ತು ಗಾಯನದ ರಂಗರೂಪವನ್ನು ಪ್ರಸ್ತುತ ಪಡಿಸಿದರು. ನಂತರದಲ್ಲಿ ಮಕ್ಕಳು ಕನ್ನಡ ಗೀತೆಗಳನ್ನು ಕರೋಕೆಯೊಂದಿಗೆ ಹಾಡಿದರು.

ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಡಿ ಸ್ವಾಗತಿಸಿದರು. ಪದವೀಧರ ಶಿಕ್ಷಕಿ ರಕ್ಷಿತಾ ಜಿ. ಬಹುಮಾನಿತರ ಪಟ್ಟಿ ವಾಚಿಸಿದರು. ಸಹ ಶಿಕ್ಷಕ ಆನಂದ ಕುಲಾಲ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು. ಅತಿಥಿ ಶಿಕ್ಷಕಿ ಪ್ರಮೀಳಾ, ಗೌರವ ಶಿಕ್ಷಕಿ ನಯನ ಕಾರ್ಯಕ್ರಮ ಸಂಯೋಜಿಸಲು ಸಹಕರಿಸಿದರು. ಸಹಶಿಕ್ಷಕಿ ಸಂಧ್ಯಾ ಕೆ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!