Sunday, September 8, 2024

ಟೀಂ ಇಂಡಿಯಾ ಕ್ರಿಕೇಟ್‌ ಟೀಂʼನ ಲೆಜೆಂಡರಿ ಕ್ಯಾಪ್ಟನ್ ಧೋನಿ ಧರಿಸುತ್ತಿದ್ದ ಐಕಾನಿಕ್​ ʼ7ʼ ನಂಬರ್ ಗೆ ನಿವೃತ್ತಿ ಘೋಷಿಸಿದ ಬಿಸಿಸಿಐ !

ಜನಪ್ರತಿನಿಧಿ ವಾರ್ತೆ (ನವ ದೆಹಲಿ) :  ಟೀಂ ಇಂಡಿಯಾ ಕ್ರಿಕೇಟ್‌ ಟೀಂ ನ ಲೆಜೆಂಡರಿ ಕ್ಯಾಪ್ಟನ್​ ಎಂ.ಎಸ್​. ಧೋನಿ ಧರಿಸುತ್ತಿದ್ದ ಐಕಾನಿಕ್​ ʼ7ʼ ನಂಬರ್​ ಜರ್ಸಿಗೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ನಿವೃತ್ತಿ ಘೋಷಿಸುವ ಮೂಲಕ ಗೌರವ ಸೂಚಿಸಿದೆ. ಕ್ರಿಕೆಟ್​ ದಂತಕತೆ, ಭಾರತ ರತ್ನ ಸಚಿನ್ ತೆಂಡೂಲ್ಕರ್ ನಂತರ ಬಿಸಿಸಿಐ ನಿವೃತ್ತಿಗೊಳಿಸಿದ ಎರಡನೇ ಜರ್ಸಿ ಧೋನಿ ಅವರದ್ದಾಗಿದೆ ಎನ್ನುವುದು ವಿಶೇಷ.

ಟೀಂ ಇಂಡಿಯಾಗೆ ಧೋನಿ ನೀಡಿರುವ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಅವರ ಜರ್ಸಿಗೆ ನಿವೃತ್ತಿ ನೀಡಲು ಬಿಸಿಸಿಐ ನಿರ್ಧರಿಸಿದ್ದು, ಇನ್ನು ಮುಂದೆ 7ನೇ ನಂಬರಿನ ಜರ್ಸಿಯನ್ನು ಯಾವೊಬ್ಬ ಆಟಗಾರ ಕೂಡ ಬಳಸುವಂತಿಲ್ಲ. ಧೋನಿಗೆ ಮಾತ್ರ ಸೀಮಿತವಾಗಿರಲಿದೆ.

ಟೀಂ ಇಂಡಿಯಾ ಕ್ರಿಕೇಟಿಗನಾಗಿ ಮತ್ತು ಕ್ಯಾಪ್ಟನ್‌ ಆಗಿ ಕ್ರಿಕೇಟ್‌ ಜಗತ್ತಿನಲ್ಲಿ ಅನೇಕ ದಾಖಲೆಗಳನ್ನು ಬರೆದಿರುವ ಧೋನಿ, ಕ್ರಿಕೆಟ್​ ಲೋಕದ ಅಪ್ರತಿಮ ವ್ಯಕ್ತಿ ಎನಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ನಾಯಕನಾಗಿ 2007ರಲ್ಲಿ ಟಿ20 ವಿಶ್ವಕಪ್​, 2011ರಲ್ಲಿ ಏಕದಿನ ವಿಶ್ವಕಪ್​ ಮತ್ತು 2013ರಲ್ಲಿ ಚಾಂಪಿಯನ್ಸ್​ ಟ್ರೋಫಿಯಂತಹ ಎಲ್ಲ ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ ಎನ್ನುವುದು ಧೋನಿಗಿರುವ ಹೆಗ್ಗಳಿಕೆ.

ಟೀಂ ಇಂಡಿಯಾ ಪರ 350 ಏಕದಿನ ಪಂದ್ಯಗಳನ್ನು ಆಡಿರುವ ಧೋನಿ 10 ಶತಕ ಮತ್ತು 73 ಅರ್ಧ ಶತಕಗಳೊಂದಿಗೆ 50.57 ರನ್ ಸರಾಸರಿಯಲ್ಲಿ ಒಟ್ಟು 10,773 ರನ್​ ಕಲೆಹಾಕಿದ್ದಾರೆ. ಟಿ20 ಪಂದ್ಯಗಳ ವಿಚಾರಕ್ಕೆ ಬಂದರೆ, ಒಟ್ಟು 98 ಪಂದ್ಯಗಳನ್ನು ಆಡಿರುವ ಧೋನಿ, 37.60 ಸರಾಸರಿಯೊಂದಿಗೆ 126.13 ಸ್ಟ್ರೈಕ್​ರೇಟ್​ನಲ್ಲಿ 1617 ರನ್ ಗಳಿಸಿದ್ದಾರೆ. ಟೆಸ್ಟ್​ ಪಂದ್ಯದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಧೋನಿ, 97 ಪಂದ್ಯಗಳಲ್ಲಿ 6 ಶತಕ ಮತ್ತು 33 ಅರ್ಧಶತಕಗಳೊಂದಿಗೆ 4876 ರನ್​ ಕಲೆಹಾಕಿದ್ದಾರೆ.

ವಿಕೆಟ್​ಕೀಪರ್​ ಆಗಿ ತಮ್ಮ ವೃತ್ತಿಬದುಕಿನಲ್ಲಿ​ ಧೋನಿ ಅವರು ಅತ್ಯದ್ಭುತ ಕೌಶಲಗಳನ್ನು ತೋರಿದ್ದಾರೆ. ತಮ್ಮ ಚಾಕಚಕ್ಯತೆಯಿಂದ ಅನೇಕ ಪಂದ್ಯಗಳಲ್ಲಿ ಸ್ಪಂಪೌಟ್​ ಹಾಗೂ ರನೌಟ್​ ಮಾಡುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿದ ಉದಾಹರಣೆಗಳಿವೆ. ವಿಶ್ವ ಕ್ರಿಕೆಟ್​ನ ಶ್ರೇಷ್ಠ ವಿಕೆಟ್​ ಕೀಪರ್​ಗಳ ಪೈಕಿಯಲ್ಲಿ ಮಹೇಂದ್ರ ಸಿಂಗ್ ಧೋನಾಗ್ರ ಸಾಲಿನಲ್ಲಿ ನಿಲ್ಲುತ್ತಾರೆ. ಒಟ್ಟು ಅವರು ತಮ್ಮ ಅಂತಾರಾಷ್ಟ್ರೀಯ ಕ್ರಿಕೇಟ್‌ ವೃತ್ತಿ ಜೀವನದಲ್ಲಿ 294 ಬಾರಿ ವಿಕೆಟ್​ಗಳನ್ನು ತೆಗೆದು ಸಾಧನೆಗೈದಿದ್ದಾರೆ.

(ಸೋರ್ಸ್‌ : ಇಂಡಿಯಾ ಟುಡೇ)

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!