Sunday, September 8, 2024

ನ್ಯಾಯಾಧೀಶನಿಂದ ಲೈಂಗಿಕ ಕಿರುಕುಳ : ದಯಾ ಮರಣ ಅನುಮತಿ ಕೋರಿ ಸಿಜೆಐಗೆ ಪತ್ರ : ಅಲಹಾಬಾದ್ ಹೈಕೋರ್ಟ್‌ನಿಂದ ವರದಿ ಕೇಳಿದ ಚಂದ್ರಚೂಡ್‌  

ಜನಪ್ರತಿನಿಧಿ ವಾರ್ತೆ (ಉತ್ತರ ಪ್ರದೇಶ) : ಪ್ರಸ್ತುತ ಉತ್ತರ ಪ್ರದೇಶದ ಬುಂದೇಲ್‌ ಖಂಡ್ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಿಯೋಜನೆಗೊಂಡಿರುವ ಮಹಿಳಾ ಸಿವಿಲ್ ನ್ಯಾಯಾಧೀಶೆಯೊಬ್ಬರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಡಿ. ವೈ. ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದು, ಕೆಲಸದ ಸ್ಥಳದಲ್ಲಿ ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಬಂದಾ ಸಿವಿಲ್ ನ್ಯಾಯಾಧೀಶೇ ಆಗಿರುವ ಅರ್ಪಿತಾ ಸಾಹು ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಬಾರಾಬಂಕಿ ಸಿವಿಲ್ ನ್ಯಾಯಾಲಯದಲ್ಲಿ ಪೋಸ್ಟಿಂಗ್ ಸಂದರ್ಭದಲ್ಲಿ ಅನುಭವಿಸಿದ ದೈಹಿಕ ಮತ್ತು ಮಾನಸಿಕ ಕಿರುಕುಳದ ವಿವರಗಳನ್ನು ಒಳಗೊಂಡಿದೆ. ಜಿಲ್ಲಾ ನ್ಯಾಯಾಧೀಶರು ತನಗೆ ನೀಡಿದ ಕಿರುಕುಳ ಮತ್ತು ನೋವಿನ ವಿಚಾರವನ್ನು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ಎರಡು ಪುಟಗಳ ಪತ್ರದಲ್ಲಿ, ನ್ಯಾಯಾಧೀಶೆ ಸಾಹು ಅವರು, ಜಿಲ್ಲಾ ನ್ಯಾಯಾಧೀಶರ ಅನುಚಿತ ದೈಹಿಕ ವಾಂಛೆಗಳು ಮತ್ತು ಕಿರುಕುಳ ಮಾಡಿರುವ ವಿಚಾರದ ಬಗ್ಗೆ ಅವರು ಉಲ್ಲೇಖಿಸಿದ್ದಾರೆ. ಸಾಕಷ್ಟು ಬಾರಿ ಅನುಚಿತವಾಗಿ ವರ್ತಿಸಿದ ಬಳಿಕ ಈ ರೀತಿಯ ವರ್ತೆನೆ ಹಿಡಿಸುವುದಿಲ್ಲ ಎಂದು ಹಲವು ಬಾರಿ ಕೇಳಿಕೊಂಡರೂ ಅದನ್ನು ಲೆಕ್ಕಿಸದೇ ರಾತ್ರಿ ಸಮಯದಲ್ಲಿ ಭೇಟಿಯಾಗುವಂತೆ ಜಿಲ್ಲಾ ನ್ಯಾಯಾಧೀಶರು ಒತ್ತಡ ಹೇರುತ್ತಿದ್ದರು ಎಂದು ಪತ್ರದಲ್ಲಿ ಅವರು ಆರೋಪಿಸಿದ್ದಾರೆ

ಈ ಸಂಬಂಧ ನಾನು ಹಲವು ಬಾರಿ ದೂರುಗಳನ್ನು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಬೇಸತ್ತು ತನ್ನ ಜೀವನವನ್ನು ಗೌರವಯುತವಾಗಿ ಕೊನೆಗೊಳಿಸಲು ಅನುಮತಿ ಕೋರಿ ಪತ್ರ ಬರೆಯುತ್ತಿದ್ದೇನೆ ಎಂದು ಅವರು ಸಿಜೆಐಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ತನಗೆ ಮಿತಿಮೀರಿದ ಲೈಂಗಿಕ ಕಿರುಕುಳ ನೀಡಲಾಗಿದೆ. ತನ್ನನ್ನು ಸಂಪೂರ್ಣ ಕಸದಂತೆ ನಡೆಸಿಕೊಳ್ಳಲಾಗಿದೆ. ಎಂದು ನ್ಯಾಯಾಧೀಶೆ ಅರ್ಪಿತಾ ಸಾಹು ಸಿಜೆಐಗೆ ಬರೆದ ಪತ್ರದಲ್ಲಿ ಅವಲತ್ತುಕೊಂಡಿದ್ದಾರೆ.

ಇನ್ನು, ಈ ಸಂಬಂಧ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಅಲಹಾಬಾದ್ ಹೈಕೋರ್ಟ್‌ನಿಂದ ವರದಿ ಕೇಳಿದ್ದಾರೆ.

ಮೂಲಗಳ ಪ್ರಕಾರ, ಸ್ಟೇಟಸ್ ಅಪ್‌ಡೇಟ್ ಕೇಳುವಂತೆ ಸುಪ್ರೀಂ ಕೋರ್ಟ್ ಸೆಕ್ರೆಟರಿ ಜನರಲ್ ಅತುಲ್ ಎಂ ಕುರ್ಹೇಕರ್ ಅವರಿಗೆ ಮುಖ್ಯ ನ್ಯಾಯಮೂರ್ತಿ ಸೂಚಿಸಿದ್ದಾರೆ ಎಂಬ ವರದಿ ಇದೆ. ಇದಾದ ನಂತರ, ಕುರ್ಹೇಕರ್ ಅವರು ಅಲಹಾಬಾದ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಪತ್ರ ಬರೆದು, ಮಹಿಳಾ ನ್ಯಾಯಾಧೀಶರು ನೀಡಿದ ಎಲ್ಲಾ ದೂರುಗಳ ಬಗ್ಗೆ ಮಾಹಿತಿ ಕೇಳಿದ್ದಾರೆ ಎಂದು  ವರದಿಯಾಗಿದೆ.

ಪತ್ರದಲ್ಲಿ ಯಾರೂ ನನ್ನನ್ನು ಈ ಬಗ್ಗೆ ಸಣ್ಣ ದಯೆಯಿಂದ ಈವರೆಗೆ ಕೇಳಿದವರಿಲ್ಲ, ಏನಾಯಿತು, ನೀವು ಯಾಕೆ ತೊಂದರೆಗೀಡಾಗಿದ್ದೀರಿ? ಎಂಬ ಪ್ರಶ್ನೆ ಮಾಡಿ ಸಣ್ಣ ಸೌಜನ್ಯವನ್ನೂ ಕೂಡ ಯಾರೂ ತೋರಿಸಿಲ್ಲ. ನನಗೆ ದಯಾ ಮರಣಕ್ಕೆ ಅನುಮತಿ ನೀಡುವಂತೆ ಅವರು ಪತ್ರದಲ್ಲಿ ಬರೆದಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!