Thursday, November 21, 2024

ಸಂಸತ್‌ ಭದ್ರತಾ ಲೋಪ : ಲೋಕಸಭಾ ಸ್ಪೀಕರ್‌ಗೆ ಸಂಸದ ಪ್ರತಾಪ್‌ ವಿವರಣೆ !?

ಜನಪ್ರತಿನಿಧಿ ವಾರ್ತೆ(ಬೆಂಗಳೂರು) : ಸಂಸತ್‌ ಕಲಾ[ದ ಸಂದರ್ಭದಲ್ಲಿ ಇಬ್ಬರು ದುಷ್ಕರ್ಮಿಗಳಿಗೆ ಪಬ್ಲಿಕ್ ಪಾಸ್ ನೀಡಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ ಇಕ್ಕಟ್ಟಿಗೆ ಸಿಲುಕಿದ್ದಾರೆ. ಪ್ರತಾಪ್ ಸಿಂಹ ಅವರನ್ನು ಸಂಸದ ಸ್ಥಾನದಿಂದ ಉಚ್ಚಾಟನೆ ಮಾಡಬೇಕು ಹಾಗೂ ವಿಚಾರಣೆಗೆ ಒಳಪಡಿಸಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ. ತಮ್ಮ ಕಚೇರಿಯಿಂದ ಸಂದರ್ಶಕರ ಪಾಸ್ ನೀಡಿದ ಕುರಿತು ಪ್ರತಾಪ್ ಸಿಂಹ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ವಿವರಣೆ ನೀಡಿದ್ದಾರೆ.

ಆರೋಪಿಗಳಲ್ಲಿ ಒಬ್ಬನಾಗಿರುವ ಡಿ. ಮನೋರಂಜನ್‌ನ ತಂದೆ ದೇವರಾಜೇ ಗೌಡ ಅವರು ತಮ್ಮ ಕ್ಷೇತ್ರದಲ್ಲಿ ವಾಸವಾಗಿದ್ದು, ಹೊಸ ಸಂಸತ್ ಭವನ ವೀಕ್ಷಿಸಲು ಪಾಸ್ ಕೊಡಿಸುವಂತೆ ತಮಗೆ ಮನವಿ ಮಾಡಿದ್ದರು ಎಂದು ಸ್ಪೀಕರ್‌ಗೆ ತಿಳಿಸಿದ್ದಾಗಿ ಮೂಲಗಳು ಹೇಳಿವೆ.

ಮನೋರಂಜನ್ ತಂದೆ ದೇವರಾಜ್ ತಮ್ಮ ಆಪ್ತ ಸಹಾಯಕರು ಮತ್ತು ತಮ್ಮ ಕಚೇರಿ ಜತೆ ನಿರಂತರ ಸಂಪರ್ಕದಲ್ಲಿದ್ದು, ಮನೋರಂಜನ್ ಹಾಗೂ ಸಾಗರ್ ಶರ್ಮಾಗೆ ಸಂಸತ್ ಪ್ರವೇಶಕ್ಕೆ ಪಾಸ್ ದೊರಕಿಸಲು ಪ್ರಯತ್ನಿಸುತ್ತಿದ್ದರು. ಇದರ ಹೊರತಾಗಿ ಆರೋಪಿ ಕುರಿತು ತಮಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಪ್ರತಾಪ್ ಸಿಂಹ ವಿವರಣೆ ಕೊಟ್ಟಿದ್ದಾರೆ ಎನ್ನಲಾಗಿದೆ.

“ಲೋಕಸಭೆಯಲ್ಲಿ ಒಳಗೆ ನುಗ್ಗಿದ ಇಬ್ಬರಿಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಪಾಸ್ ವಿತರಣೆ ಮಾಡಿದ್ದಾರೆ. ಸಂಸತ್ತು ಮತ್ತು ದೇಶದ ಭದ್ರತೆಯಲ್ಲಿ ಲೋಪ ಉಂಟಾಗಿದೆ. ತಮ್ಮ ಲಾಗಿನ್ ಐಟಿ ಮತ್ತು ಪಾಸ್‌ವರ್ಡ್‌ಗಳನ್ನು ಹಂಚಿಕೊಂಡಿದ್ದಕ್ಕೆ ಟಿಎಂಸಿಯ ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟನೆ ಮಾಡಲಾಗಿತ್ತು. ಅದು ರಾಷ್ಟ್ರೀಯ ಭದ್ರತೆಯ ಪ್ರಶ್ನೆಯಾಗಿ ಪರಿಗಣಿಸಲಾಗಿತ್ತು. ಇಂದು ಬಿಜೆಪಿ ಸಂಸದರು ದುಷ್ಕರ್ಮಿಗಳಿಗೆ ಪಾಸ್ ನೀಡುವ ಮೂಲಕ ಬೇಜವಾಬ್ದಾರಿಯುತ ನಡೆ ಅನುಸರಿಸಿದ್ದಾರೆ” ಎಂದು ಟಿಎಂಸಿ ನಾಯಕ ಶಶಿ ಪಂಜಾ ಅವರು ಪ್ರತಾಪ್ ಸಿಂಹ ಅಮಾನತಿಗೆ ಆಗ್ರಹಿಸಿದ್ದಾರೆ.

ಸಂಸತ್‌ನಲ್ಲಿ ಗುರುವಾರ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, “ಈ ಘಟನೆಯನ್ನು ಪ್ರತಿಯೊಬ್ಬರೂ ಖಂಡಿಸಿದ್ದಾರೆ. ನೀವು (ಸ್ಪೀಕರ್) ಈ ಪ್ರಕರಣವನ್ನು ನೀವು ಗಂಭೀರವಾಗಿ ಪರಿಗಣಿಸಿದ್ದೀರಿ. ನಾವು ಯಾರಿಗೆ ಸಂಸತ್ ಪಾಸ್‌ಗಳನ್ನು ನೀಡುತ್ತಿದ್ದೇವೆ ಎಂಬ ಬಗ್ಗೆ ಜಾಗರೂಕತೆಯಿಂದ ಇರಬೇಕು. ಭವಿಷ್ಯದಲ್ಲಿ ಎಲ್ಲಾ ಮುನ್ನೆಚ್ಚರಿಕೆಗನ್ನು ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದರು.

ನಿರುದ್ಯೋಗ ಮತ್ತು ಮಣಿಪುರ ಹಿಂಸಾಚಾರದಂತಹ ಸಂಗತಿಗಳ ಬಗ್ಗೆ ತಮಗೆ ಕಳವಳ ಇತ್ತು. ಸಂಸದರ ಗಮನ ಸೆಳೆಯಲು ಮತ್ತು ಈ ವಿಚಾರಗಳ ಬಗ್ಗೆ ಅವರು ಚರ್ಚೆ ನಡೆಸುವಂತೆ ಮಾಡಲು ಬಯಸಿದ್ದಾಗಿ ವಿಚಾರಣೆ ವೇಳೆ ನಾಲ್ಕೂ ಮಂದಿ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ, ಸಂಸತ್ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು, ಸಂಸತ್‌ನಲ್ಲಿ ಭದ್ರತೆಯನ್ನು ಉಲ್ಲಂಘಿಸಿ ದಾಂಧಲೆ ನಡೆಸಿದ ಕೃತ್ಯದಲ್ಲಿ ಭಾಗಿಯಾದ ‘ಬಂಡಾಯಗಾರ’ರಿಗೆ 10 ಲಕ್ಷ ರೂ ಕಾನೂನು ನೀಡುವುದಾಗಿ ಘೋಷಿಸಿದ್ದಾನೆ. ಡಿ. 13ರಂದು ಸಂಸತ್‌ನ ತಳಹದಿಯು ನಡುಗಿದೆ. ಇದು ನಡುಗುವುದು ಮುಂದುವರಿಯಲಿದೆ ಎಂದು ಆತ ಹೇಳಿದ್ದಾನೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!