spot_img
Friday, April 24, 2026
spot_img

ಋತುಚಕ್ರವು ಅಂಗವಿಕಲತೆ ಅಲ್ಲ : ವೇತನ ಸಹಿತ ಮುಟ್ಟಿನ ರಜೆಗೆ ರಾಜ್ಯಸಭೆಯಲ್ಲಿ ಸ್ಮೃತಿ ಇರಾನಿ ವಿರೋಧ

ಜನಪ್ರತಿನಿಧಿ ವಾರ್ತೆ (ನವ ದೆಹಲಿ)  :  ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಮಹಿಳಾ ಉದ್ಯೋಗಿಗಳಿಗೆ ಕಡ್ಡಾಯ ವೇತನ ಸಹಿತ ಮುಟ್ಟಿನ ರಜೆಯ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸಿದ್ದಾರೆ.

ಮನೋಜ್ ಕುಮಾರ್ ಝಾ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಇರಾನಿ, ಮಹಿಳೆಯರಿಗೆ ಮುಟ್ಟು ಎನ್ನುವುದು ಜೀವನದ ನೈಸರ್ಗಿಕದತ್ತವಾಗಿದ್ದು, ಅದನ್ನು ವಿಶೇಷ ರಜೆ ನಿಬಂಧನೆಗಳ ಅಗತ್ಯವಿರುವ ಅಂಗವಿಕಲತೆ ಎಂದು ಪರಿಗಣಿಸಬಾರದು ಎಂದು ಅವರು ಹೇಳಿದ್ದಾರೆ.

ಋತುಸ್ರಾವದ ಮಹಿಳೆಯಾಗಿ, ಋತುಚಕ್ರವು ಅಂಗವಿಕಲತೆ ಅಲ್ಲ, ಇದು ಮಹಿಳೆಯರ ಜೀವನ ಪ್ರಯಾಣದ ನೈಸರ್ಗಿಕದತ್ತವಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಟ್ಟಿನ ರಜೆಯು ಉದ್ಯೋಗಿಗಳಲ್ಲಿ ಮಹಿಳೆಯರ ವಿರುದ್ಧ ತಾರತಮ್ಯಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದ ಅವರು, “ಋತುಸ್ರಾವವಾಗದ ಯಾರಾದರೂ ಮುಟ್ಟಿನ ಬಗ್ಗೆ ನಿರ್ದಿಷ್ಟ ದೃಷ್ಟಿಕೋನವನ್ನು ಹೊಂದಿದ್ದಾರೆ ಎಂಬ ಕಾರಣಕ್ಕಾಗಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನಿರಾಕರಿಸುವ ಸಮಸ್ಯೆಗಳನ್ನು ನಾವು ಪ್ರಸ್ತಾಪಿಸಬಾರದು.” ಎಂದಿದ್ದಾರೆ.

ಇನ್ನು, ಋತುಚಕ್ರದ ಸಂದರ್ಭದಲ್ಲಿ ಮಹಿಳೆಯರು ರಜೆ ಪಡೆಯಬೇಕೇ? ದೇಶಾದ್ಯಂತ ಜನರು ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಈ ಸಮಸ್ಯೆ ಹಲವು ವರ್ಷಗಳಿಂದ ಮುಂದುವರೆದಿದೆ.  ಸದ್ಯ ಇದಕ್ಕೆ ಸರ್ಕಾರ ಸ್ಪಂದಿಸಿದ್ದು, ಸಂಸತ್ತಿನ ಸಮಿತಿ ತನ್ನ ವರದಿಯನ್ನು  ಒಪ್ಪಿಸಿದೆ. ಇದರಲ್ಲಿ ಮಹಿಳಾ ನೌಕರರಿಗೆ ವಿಶೇಷ ‘ಮುಟ್ಟಿನ ರಜೆ’ ಆರೋಗ್ಯ ಸಂಬಂಧಿತ ಸಮಸ್ಯೆಯಾಗಿದೆ ಎಂದು ಕಾರ್ಮಿಕ ಸಚಿವಾಲಯ ಹೇಳಿತ್ತು.

ಪಿರಿಯೆಡ್ಸ್ ಲೀವ್ ನೀತಿಗೆ ಶಿಫಾರಸು :

ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ತನ್ನ ಹಿಂದಿನ ವರದಿಯಲ್ಲಿ ಇದನ್ನು ಶಿಫಾರಸು ಮಾಡಿತ್ತು. ಸಮಿತಿಯು  ‘ಮುಟ್ಟಿನ ರಜೆ’ ನೀತಿಯನ್ನು ರೂಪಿಸಲು ಕಾರ್ಮಿಕ ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು. ಈ ನೀತಿಯ ಪ್ರಕಾರ ಮುಟ್ಟಿನ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ರಜೆಯನ್ನು ಅನುಮತಿಸಲಾಗಿತ್ತು.

ವೈದ್ಯಕೀಯ ಪ್ರಮಾಣಪತ್ರವನ್ನು ಕೇಳಬಾರದು :

ಹೆಚ್ಚಿನ ಮಹಿಳೆಯರು ಋತುಚಕ್ರದ ಕಾರಣದಿಂದಾಗಿ ದೌರ್ಬಲ್ಯವನ್ನು ಅನುಭವಿಸುತ್ತಾರೆ ಎಂದು ಸಮಿತಿ ಹೇಳಿದೆ. ಈ ಕಾರಣದಿಂದಾಗಿ, ಕೆಲಸದ ಸ್ಥಳದಲ್ಲಿ ಅವರ ಕೆಲಸದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಸಮಿತಿಯು ಮಹಿಳೆಯರಿಗೆ ಮಾಸಿಕ ಅಥವಾ ವಾರ್ಷಿಕ ಋತುಚಕ್ರದ ರಜೆ ಅಥವಾ ಅನಾರೋಗ್ಯ ರಜೆ (ಎಸ್ಎಲ್)/ ಅರ್ಧ ವೇತನದ ಮೇಲೆ ರಜೆ ನೀಡುವಂತೆ ಶಿಫಾರಸು ಮಾಡಿದೆ. ಆದರೆ ಈ ರಜೆಗೆ ಪ್ರತಿಯಾಗಿ, ಯಾವುದೇ ರೀತಿಯ ವೈದ್ಯಕೀಯ ಪ್ರಮಾಣಪತ್ರವನ್ನು ಕೇಳಬಾರದು ಅಥವಾ ರಜೆ ತೆಗೆದುಕೊಳ್ಳಲು ಸಮರ್ಥನೆಯನ್ನು ಕೇಳಬಾರದು ಎನ್ನುವುದನ್ನು ಕೂಡಾ ಸಮಿತಿ ಸೂಚಿಸಿದೆ.

ರಜೆಗೆ ಸಂಬಂಧಿಸಿದಂತೆ ಸರ್ಕಾರದ ನಿಯಮಗಳೇನು? :

ಸಮಿತಿಯು ಸೋಮವಾರ ಮಂಡಿಸಿದ ತನ್ನ ಹೊಸ ವರದಿಯಲ್ಲಿ, ಕೇಂದ್ರ ನಾಗರಿಕ ಸೇವೆಗಳ (ರಜೆ) ನಿಯಮಗಳು, 1972 ಕೇಂದ್ರ ಸರ್ಕಾರದ ಮಹಿಳಾ ಉದ್ಯೋಗಿಗಳ ಕಲ್ಯಾಣಕ್ಕಾಗಿ ವಿವಿಧ ರೀತಿಯ ವೇತನದ ರಜೆಗಳ ರೂಪದಲ್ಲಿ ವಿವಿಧ ಪ್ರೋತ್ಸಾಹಕಗಳನ್ನು ಹೊಂದಿದೆ ಎಂದು ಹೇಳಿದೆ. ಇವುಗಳಲ್ಲಿ ಮಾತೃತ್ವ ರಜೆ ಮತ್ತು ಮಕ್ಕಳ ಆರೈಕೆ ರಜೆಗಳೂ ಸೇರಿವೆ. ಯಾವುದೇ ಸರ್ಕಾರಿ ನೌಕರನು ತನ್ನ ವೈಯಕ್ತಿಕ ಅಗತ್ಯಗಳನ್ನು ಪೂರೈಸಲು ವರ್ಷದಲ್ಲಿ 30 ದಿನಗಳ ಗಳಿಕೆ ರಜೆ ಮತ್ತು ಎಂಟು ದಿನಗಳ ಕ್ಯಾಶುಯಲ್ ರಜೆ (CL) ಪಡೆಯುತ್ತಾನೆ ಎಂದು ಅದು ಹೇಳುತ್ತದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!