spot_img
Friday, April 24, 2026
spot_img

‘ಆವರ್ಸೆ ಶ್ರೀ ಶಂಕರನಾರಾಯಣ ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರಸಂಗ ಬಿಡುಗಡೆ

ಕುಂದಾಪುರ: ಪಂಚ ಶಂಕರನಾರಾಯಣ ಕ್ಷೇತ್ರಗಳಲ್ಲಿ ಒಂದಾದ ಆವರ್ಸೆ ಶಂಕರನಾರಾಯಣ ದೇವಸ್ಥಾನದ ಗತ ಪುರಾಣವನ್ನಿರಿತು ಆವರ್ಸೆ ಶ್ರೀ ಶಂಕರನಾರಾಯಣ ಕ್ಷೇತ್ರ ಮಹಾತ್ಮೆ ಎನ್ನುವ ಯಕ್ಷಗಾನ ಪ್ರಸಂಗವನ್ನು ಪ್ರಸಂಗಕರ್ತ ಪಿ.ವಿ ಆನಂದ ಸಾಲಿಗ್ರಾಮ ತನ್ನ ೫೦ನೇ ಪ್ರಸಂಗವಾಗಿ ರಚಿಸಿದ್ದು ಸೂರಾಲು ಶ್ರೀ ಮಹಾಲಿಂಗೇಶ್ವರ ಮೇಳದವರು ಈ ಪ್ರಸಂಗವನ್ನು ಪ್ರದರ್ಶನ ಮಾಡಲಿದ್ದು ಪ್ರಸಂಗ ಬಿಡುಗಡೆ ಕಾರ್ಯಕ್ರಮ ನ.೨೭ರಂದು ಸೂರಾಲು ಮೇಳದ ವೇದಿಕೆಯಲ್ಲಿ ನಡೆಯಿತು.

ಪ್ರಸಂಗವನ್ನು ವಂಡಾರು ಮನೆತನದ ಯಜಮಾನರಾದ ಪ್ರವೀರ್ಣ ಹೆಗ್ಡೆ ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಆಡಳಿತ ಮೊಕ್ತೇಸರರಾದ ಆವರ್ಸೆ ಸುಧಾಕರ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಸಂಗಕರ್ತ ಪಿ.ವಿ.ಆನಂದ ಹಾಗೂ ಸೂರಾಲು ಮೇಳದ ಸಂಚಲಕರಾದ ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಉದ್ಯಮಿಗಳಾದ ಚೋರಾಡಿ ರಾಜೀವ ಶೆಟ್ಟಿ, ರಕ್ಷಿತಾ ಕ್ಯಾಶ್ಯೂ ಆವರ್ಸೆ ಇದರ ಮಾಲಕರಾದ ಸುಧಾಕರ ಶೆಟ್ಟಿ, ಕ್ಷೇತ್ರದ ಅರ್ಚಕರಾದ ಸುಬ್ರಹ್ಮಣ್ಯ ಐತಾಳ್, ನಿವೃತ್ತ ಅಧ್ಯಾಪಕರಾದ ಶೇಖರ ಶೆಟ್ಟಿ ಆವರ್ಸೆ, ನಿವೃತ್ತ ಸೇನಾಧಿಕಾರಿ ಆನಂದ ಶೆಟ್ಟಿ ಆವರ್ಸೆ, ನಿವೃತ್ತ ಅಧ್ಯಾಪಕ ಯಕ್ಷಗಾನ ಪ್ರೇಮಿ ಸಂಜೀವ್ ಪೂಜಾರಿ ಉಪಸ್ಥಿತರಿದ್ದರು.

ಅಧ್ಯಾಪಕರಾದ ಶಶಿಧರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ನ್ಯಾಯವಾದಿ ಲಕ್ಷ್ಮಣ್ ಶೆಟ್ಟಿ ವಂದಿಸಿದರು. ಬಳಿಕ ಸೂರಾಲು ಮೇಳದವರಿಂದ ‘ಶ್ರೀ ಶಂಕರನಾರಾಯಣ ಕ್ಷೇತ್ರ ಮಹಾತ್ಮೆ’ ಪ್ರದರ್ಶನಗೊಂಡಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!