Sunday, September 8, 2024

ರಾಜ್ಯದಲ್ಲಿ ಶಾಲೆಗಳು ನೋಡ ನೋಡುತ್ತಿದ್ದಂತೆಯೇ ಕುಸಿದು ಬೀಳುವ ಮಟ್ಟಕ್ಕೆ ಹದಗೆಟ್ಟಿವೆ : ಬಿಜೆಪಿ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಕುಡಿಯುವ ನೀರು ಲಭ್ಯತೆ ಶೌಚಗೃಹ ಕೊರತೆ ಎದುರಿಸುತ್ತಿದ್ದ ರಾಜ್ಯದ 551 ಶಾಲೆಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಅವುಗಳಲ್ಲಿ 482 ಶಾಲೆಗಳ ಸ್ಥಿತಿ ತೃಪ್ತಿಕರವಾಗಿದೆ ಹಾಗೂ 69 ಶಾಲೆಗಳ ಸ್ಥಿತಿ ತೃಪ್ತಿಕರವಾಗಿಲ್ಲ  ಎಂಬುವುದು ಕಂಡು ಬಂದಿದೆ ಶಾಲಾ ಶಿಕ್ಷಣ ಇಲಾಖೆ ಹೈಕೋರ್ಟ್‌ಗೆ ತಿಳಿಸಿರುವ ಪತ್ರಿಕಾ ವರದಿಯೊಂದನ್ನು ಉಲ್ಲೇಖಿಸಿ ಬಿಜೆಪಿ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರವನ್ನು ಟೀಕೆ ಮಾಡಿದೆ.

ತನ್ನ ಅಧಿಕೃತ ʼಎಕ್ಸ್‌ʼ ಖಾತೆಯ ಮೂಲಕ ಕಾಂಗ್ರೆಸ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ, ರಾಜ್ಯದಲ್ಲಿ ಶಾಲೆಗಳು ನೋಡ ನೋಡುತ್ತಿದ್ದಂತೆಯೇ ಕುಸಿದು ಬೀಳುವ ಮಟ್ಟಕ್ಕೆ ಹದಗೆಟ್ಟಿವೆ. ಅವುಗಳನ್ನು ಸರಿಪಡಿಸುವುದು ಬಿಟ್ಟು ಮಧು ಬಂಗಾರಪ್ಪ ಅವರ ಸಚಿವಾಲಯ ಎನ್ಇಪಿ ರದ್ದು, ಪಠ್ಯ ಪುಸ್ತಕ ಪರಿಷ್ಕರಣೆ ಇಂತಹ ಅನಗತ್ಯ ಕೆಲಸಗಳಿಗೆ ತಲೆಕೆಡಿಸಿಕೊಳ್ಳುತ್ತಿದೆ ಎಂದು ಜರಿದಿದೆ.

ಮುಂದಿನ ತಲೆಮಾರನ್ನು ಸೂಕ್ತ ರೀತಿಯಲ್ಲಿ ಸಿದ್ಧಪಡಿಸುವ ಶಿಕ್ಷಣದ ಮೂಲಸೌಕರ್ಯವನ್ನೇ ಸರಿಯಾಗಿ ನೀಡಲಾಗದ ಮೇಲೆ ನಾಡು ಕಟ್ಟುವ ಕೆಲಸದ ಬಗ್ಗೆ ಕಾಂಗ್ರೆಸ್ ಗೆ ಮಾತನಾಡುವ ಅಧಿಕಾರವೂ ಇಲ್ಲ ತಿವಿದಿದೆ.

ಎಟಿಎಂ ವ್ಯವಹಾರಕ್ಕೆ ಸ್ವಲ್ಪ ಬ್ರೇಕ್ ಹಾಕಿ ಮೂಲಸೌಕರ್ಯಗಳನ್ನಾದರೂ ಸರಿಪಡಿಸಿ ಎಂದು ಒತ್ತಾಯಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!