spot_img
Sunday, April 26, 2026
spot_img

2022ರಲ್ಲಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ಅತಿ ಹೆಚ್ಚು ಆಸಿಡ್ ದಾಳಿ ಪ್ರಕರಣಗಳು : ಎನ್‌ಸಿಆರ್‌ಬಿ ವರದಿ

ಜನಪ್ರತಿನಿಧಿ ವಾರ್ತೆ(ಬೆಂಗಳೂರು) : ಬೆಂಗಳೂರಿನಲ್ಲಿ 2022ರಲ್ಲಿ ಮಹಿಳೆಯರ ಮೇಲೆ ಅತಿ ಹೆಚ್ಚು ಆಸಿಡ್ ದಾಳಿ ಪ್ರಕರಣಗಳು ವರದಿಯಾಗಿವೆ ಎಂದು ನ್ಯಾಶನಲ್‌ ಕ್ರೈಮ್‌ ರೆಕಾರ್ಡ್‌ ಬ್ಯೂರೋ ಹೇಳಿದೆ.

ನ್ಯಾಶನಲ್ ಕ್ರೈಮ್ ರೆಕಾರ್ಡ್ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿದ ಇತ್ತೀಚಿನ ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ಆಸಿಡ್ ದಾಳಿ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡಿದೆ ಎಂದು ವರದಿ ಹೇಳಿದೆ. ಆರೋಪಿಗಳನ್ನು ಶಿಕ್ಷೆ ನೀಡಲು ಮತ್ತು ಸಂತ್ರಸ್ತ ಮಹಿಳೆಯರಿಗೆ ಸೂಕ್ತ ಕಕ್ರಮ ತೆಗೆದುಕೊಳ್ಳಲು ಅಧಿಕಾರಿಗಳು ಪ್ರತಿ ಪ್ರಕರಣವನ್ನು ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದಾರೆ.

ಎನ್‌ಸಿಆರ್‌ಬಿ 2022 ರಲ್ಲಿ ದೇಶದ 19 ಮೆಟ್ರೊ ಪಾಲಿಟನ್‌ ನಗರಗಳಲ್ಲಿ ಮಹಿಳೆಯರ ಮೇಲೆ ನಡೆದಿರುವ ಆ್ಯಸಿಡ್‌ ದಾಳಿಗಳು ಕುರಿತು ಇತ್ತೀಚೆಗೆ ವರದಿ ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ ಬೆಂಗಳೂರಿನಲ್ಲಿ ಕಳೆದ ವರ್ಷ ಎಂಟು ಮಹಿಳೆಯರ ಮೇಲೆ ಆ್ಯಸಿಡ್‌ ದಾಳಿ ನಡೆದಿದೆ. ಇದರೊಂದಿಗೆ ಬೆಂಗಳೂರು ಆ್ಯಸಿಡ್‌ ದಾಳಿ ಪ್ರಕರಣಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಎನ್‌ಸಿಆರ್‌ಬಿ ಪಟ್ಟಿಯಲ್ಲಿರುವ 19 ಮೆಟ್ರೋಪಾಲಿಟನ್ ನಗರಗಳಲ್ಲಿ, ಬೆಂಗಳೂರು ನಂತರ ದೆಹಲಿ ಮತ್ತು ಅಹಮದಾಬಾದ್‌ಗಳು ಕ್ರಮವಾಗಿ ಏಳು ಮತ್ತು ಐದು ಮಹಿಳೆಯರ ಆಸಿಡ್ ದಾಳಿಗೆ ಬಲಿಯಗಿದ್ದಾರೆ ಎಂದು ವರದಿ ತಿಳಿಸಿದೆ.

ದೆಹಲಿಯಲ್ಲಿ ಏಳು ಮಹಿಳೆಯರ ಮೇಲೆ ಆ್ಯಸಿಡ್‌ ದಾಳಿ ನಡೆದಿದ್ದು, ರಾಷ್ಟ್ರ ರಾಜಧಾನಿಯು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಐದು ಆ್ಯಸಿಡ್‌ ಪ್ರಕರಣಗಳು ದಾಖಲಾಗಿರುವ ಅಹಮದಾಬಾದ್‌ ಮೂರನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಮೂವರ ಮಹಿಳೆಯರ ಮೇಲೆ ಆ್ಯಸಿಡ್‌ ದಾಳಿ ಯತ್ನ ನಡೆದಿದೆ ಮತ್ತು ಐದು ಮಹಿಳೆಯರ ಮೇಲೆ ಆ್ಯಸಿಡ್‌ ಹಾಕಲಾಗಿದೆ. ಹೈದರಾಬಾದ್‌ ಮತ್ತು ಅಹಮದಾಬಾದ್‌ ನಗರದಲ್ಲಿ ತಲಾ ಎರಡು ಆ್ಯಸಿಡ್‌ ದಾಳಿ ಯತ್ನ ಪ್ರಕರಣಗಳು ನಡೆದಿವೆ ಎನ್‌ಸಿಆರ್‌ಬಿ ವಿಶ್ಲೇಷಣೆ ಹೇಳಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!