Sunday, September 8, 2024

ಕುಂದಾಪುರ ಬೆಸೆಯಲಿ ಅಯೋಧ್ಯೆಯ ಜತೆ-ಕುಂದಾಪುರ ರೈಲ್ವೇ ಸಮಿತಿ

ಕುಂದಾಪುರ: ಶತಕೋಟಿ ಭಾರತೀಯರ ಶತಮಾನಗಳ ಕನಸು ಅಯೋಧ್ಯೆಯ ಶ್ರೀ ರಾಮ ಮಂದಿರ ಇದೀಗ ರಾಷ್ಟ್ರಕ್ಕೆ ಸಮರ್ಪಣೆಯಾಗುತ್ತಿದೆ. ಈ ಹೊತ್ತಲ್ಲಿ ಭಾರತದ ಮೂಲೆ ಮೂಲೆಯೂ ಶ್ರೀ ರಾಮನ ಕಡೆ ವಿಮಾನ ರೈಲು ರಸ್ತೆಗಳ ಮೂಲಕ ಸಂಪರ್ಕಿಸಲು ಕಾರ್ಯಾರಂಭವಾಗಿದೆ.

ಹಿಂದೂ ಪವಿತ್ರ ತಾಣಗಳಾದ ಪ್ರಯಾಗ, ಕಾಶಿ, ಅಯೋದ್ಯೆ ,ಹರಿದ್ವಾರ ಸೇರಿದಂತೆ ಎಲ್ಲಾ ತಾಣಗಳಿಗೂ ಕುಂದಾಪುರ ಮೂಲಕ ರೈಲು ಆರಂಬಿಸಿ ಎನ್ನುವ ಕುಂದಾಪುರ ರೈಲ್ವೇ ಸಮಿತಿಯ ಹೋರಾಟಕ್ಕೆ ಇದೀಗ ಮತ್ತೆ ಜೀವ ಕಳೆ ಬಂದಿದ್ದು, ಶ್ರೀ ರಾಮ ಮಂದಿರ ಲೋಕಾರ್ಪಣೆಯಾಗುವ ಹೊತ್ತಲ್ಲೇ ಮಂಗಳೂರು ಉಡುಪಿ ಕುಂದಾಪುರ ಮೂಲಕ ನೇರ ರೈಲು ಸೇವೆ ಆರಂಭಿಸಿ ಎಂದು ಕುಂದಾಪುರ ರೈಲ್ವೇ ಸಮಿತಿ ಕೊಂಕಣ ರೈಲ್ವೇ, ಉಡುಪಿ ಸಂಸದರು ಹಾಗು ರೈಲ್ವೇ ಸಚಿವರಿಗೆ ಮನವಿ ನೀಡಿದೆ.

ಮಂಗಳೂರು ರೈಲು ನಿಲ್ದಾಣ ಮೇಲ್ದರ್ಜೆಗೆ ಏರುತಿದ್ದು ಹೊಸ ರೈಲುಗಳನ್ನು ಆರಂಬಿಸಲು ಸರ್ವ ಸನ್ನದ್ದವಾಗಿದೆ. ಕೊಂಕಣ ರೈಲ್ವೆ ಇದುವರೆಗೂ ಹೊಸ ರೈಲು ಆರಂಭಿಸಿ ಎನ್ನುವ ಮನವಿ ಈಡೇರಿಸದೇ ಇರಲು ಪ್ಲಾಟ್ ಪಾರಂ ಸಮಸ್ಯೆ ಹೇಳುತ್ತಿದ್ದು ಈ ಸಮಸ್ಯೆ ಈಗ ಪರಿಹಾರಗೊಂಡಿದೆ. ಹೀಗಾಗಿ ರೈಲು ಆರಂಭಿಸಿ ಭಾರತೀಯರ ಭಾವನೆಗಳನ್ನು ಗೌರವಿಸುವಂತೆ ಸಮಿತಿ ಕೋರಿದೆ.

ಒಂದೊಮ್ಮೆ ಅಯೋಧ್ಯೆ ಮಂಗಳೂರು ರೈಲು ಆರಂಭವಾದರೆ ಹಿಂದೂಗಳ ಪವಿತ್ರ ಸ್ಥಳಗಳಾದ ಕಾಶಿ, ಪ್ರಯಾಗ್ ಕೂಡಾ ಕುಂದಾಪುರದ ಜತೆ ಸಂಪರ್ಕಿಸಲ್ಪಡುತ್ತದೆ ಎಂದು ಕುಂದಾಪುರ ರೈಲ್ವೇ ಸಮಿತಿಯ ಗಣೇಶ್ ಪುತ್ರನ್ ಮನವಿ ಮಾಡಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!