Sunday, September 8, 2024

ಅರ್ಜುನ ಸಾವಿಗೀಡಾದ ಜಾಗ, ಮೈಸೂರಿನ ಎಚ್.ಡಿ. ಕೋಟೆಯಲ್ಲಿ ಸ್ಮಾರಕ ನಿರ್ಮಾಣ : ಸಿಎಂ ಸಿದ್ದರಾಮಯ್ಯ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) :  ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಸಾವಿಗೀಡಾದ 63 ವರ್ಷದ ಆನೆ ನಾಡಹಬ್ಬ ದಸರಾ ಖ್ಯಾತಿಯ ‘ಅರ್ಜುನ’ನ ಸ್ಮಾರಕವನ್ನು ನಿರ್ಮಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು(ಬುಧವಾರ) ಘೋಷಿಸಿದ್ದಾರೆ.

ವರದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಿಂದಲೇ ಸ್ಮಾರಕ ನಿರ್ಮಾಣವಾಗಲಿದ್ದು, ಅರ್ಜುನ ಪ್ರಾಣ ಕಳೆದುಕೊಂಡ ಅರಣ್ಯದಲ್ಲಿರುವ ಜಾಗ ಹಾಗೂ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆಯಲ್ಲಿ ಸ್ಮಾರಕ ನಿರ್ಮಾಣವಾಗಲಿದೆ ಎಂದು ಅವರು ಹೇಳಿದ್ದಾರೆ.

ಐತಿಹಾಸಿಕ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಅರ್ಜುನ ಚಾಮುಂಡೇಶ್ವರಿ ದೇವಿಯ ಚಿನ್ನದ ಅಂಬಾರಿಯನ್ನು ಹೊತ್ತಿದ್ದನು. ಅರ್ಜುನ ಮತ್ತು ಕನ್ನಡಿಗರ ನಡುವೆ ಭಾವನಾತ್ಮಕ ಸಂಬಂಧವಿತ್ತು. ‘ಅರ್ಜುನ ಆನೆಯ ಸಾವಿಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿ ಕೇಳಿದ್ದೇನೆ. ಅರ್ಜುನ ಪ್ರಾಣಬಿಟ್ಟಿದ್ದ ಸಕಲೇಶಪುರದ ಅರಣ್ಯದಲ್ಲಿಯೇ ಸ್ಮಾರಕ ನಿರ್ಮಿಸಲು ಹೇಳಿದ್ದು, ಮೈಸೂರಿನ ಎಚ್.ಡಿ. ಕೋಟೆಯಲ್ಲಿಯೂ ಸ್ಮಾರಕ ನಿರ್ಮಿಸಲು ನಿರ್ದೇಶನ ನೀಡಿದ್ದೇವೆ’ ಎಂದವರು ಪುನರುಚ್ಚರಿಸಿದರು.

ಅರ್ಜುನನನ್ನು ನೋಡಿಕೊಳ್ಳುತ್ತಿದ್ದ ಮಾವುತ್ ವಿನು, ಕಾರ್ಯಾಚರಣೆಯ ಸಮಯದಲ್ಲಿ ಅರ್ಜುನನ ಕಾಲಿಗೆ ಗಾಯವಾಯಿತು ಮತ್ತು ರಕ್ತಸ್ರಾವವಾಯಿತು. ಇದರ ನಡುವೆಯೂ ಆತ ಕಾಡಾನೆಯೊಂದಿಗೆ ಕಾಳಗ ನಡೆಸಿದ. ಆ ನಂತರ ಅವನ ಕಾಲಿಗೆ ಗುಂಡು ತಗುಲಿತು. ಅರ್ಜುನನು ಏಕಾಂಗಿಯಾಗಿ ಹೋರಾಡಿ ಗೆಲ್ಲುತ್ತಿದ್ದನು. ಆದರೆ, ಕಾಲಿಗೆ ಗಾಯವಾಗಿದ್ದರಿಂದ ಗೆಲ್ಲಲಾಗಲಿಲ್ಲ. ಕಾಡಾನೆ ಅರ್ಜುನನನ್ನು ಕೊಂದು ಹಾಕಿದೆ. ಅರ್ಜುನ 10 ಜನರ ಪ್ರಾಣ ಉಳಿಸಿ ತನ್ನ ಪ್ರಾಣ ತೆತ್ತಿದ್ದಾನೆ ಎಂದು ಭಾವುಕರಾಗಿ ನುಡಿದಿದ್ದಾರೆ.

ಚಾಮುಂಡೇಶ್ವರಿ ದೇವಿಗೆ ಅರ್ಜುನನ ಮಹತ್ವದ ಸೇವೆ ಮತ್ತು ಮೆರವಣಿಗೆಯಲ್ಲಿ ಲಕ್ಷಾಂತರ ಜನರ ನಡುವೆ ಆತನ ಗತ್ತು ಗಾಂಭೀರ್ಯ ನಡಿಗೆಯು ಮೈಸೂರು ಹಾಗೂ ರಾಜ್ಯದ ಜನರ ಮನಸ್ಸಿನಲ್ಲಿ ಶಾಶ್ವತವಾಗಿರಲಿದೆ ಎಂದು ಅವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!