spot_img
Wednesday, January 22, 2025
spot_img

2024ರ ಟಿ20 ವಿಶ್ವಕಪ್‌ಗೂ ರೋಹಿತ್‌ ಟೀಂ ಇಂಡಿಯಾವನ್ನು ಮುನ್ನಡೆಸಲಿ : ಸೌರವ್‌ ಗಂಗೂಲಿ

ಜನಪ್ರತಿನಿಧಿ ವಾರ್ತೆ (ನವದೆಹಲಿ ) : ರೋಹಿತ್‌ ಶರ್ಮಾ ಒಬ್ಬ ಪ್ರಬುದ್ಧ ನಾಯಕ. ಆದ್ದರಿಂದ 2024ರ ಟಿ20 ವಿಶ್ವಕಪ್‌ ಟೂರ್ನಿಯವರೆಗೆ ಅವರೇ ಟೀಂ ಇಂಡಿಯಾದ ನಾಯಕರಾಗಿ ಮುನ್ನಡೆಸುತ್ತಾರೆ ಎಂದು ನಾನು ಭಾವಿಸುತ್ತೇನೆಂದು ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸೌರವ್‌ ಗಂಗೂಲಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವೆಸ್ಟ್‌ ಇಂಡೀಸ್‌ ಹಾಗೂ ಅಮೇರಿಕಾ ಜಂಟಿ ಆಶ್ರಯದಲ್ಲಿ  ಆಯೋಜನೆಗೊಂಡಿರುವ ೨೦೨೪ರ ಟಿ20-ವಿಶ್ವಕಪ್‌ ಟೂರ್ನಿಯವರೆಗೂ ಟೀಂ ಇಂಡಿಯಾವನ್ನು ರೋಹಿತ್‌ ಅವರೇ ಮುನ್ನಡೆಸಬೇಕೆಂದು ಸಲಹೆ ನೀಡಿದ್ದಾರೆ.

ಟೀಂ ಇಂಡಿಯಾದ ಹಾಲಿ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಇದುವರೆಗೂ ತಮ್ಮ ನಾಯಕತ್ವದಲ್ಲಿ 51 ಟಿ-20 ಇಂಟರ್ನ್ಯಾಶನಲ್‌ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 39ರಲ್ಲಿ ಜಯ ತಂದು ಕೊಟ್ಟಿದ್ದಾರೆ, ಇನ್ನು 4 ಪಂದ್ಯಗಳಲ್ಲಿ ಗೆಲುವು ಪಡೆದರೆ ಯಶಸ್ವಿ ನಾಯಕರಾಗುವ ಮೂಲಕ ಐಯಾನ್‌ ಮಾರ್ಗನ್‌ ಮತ್ತು ಬಾಬರ್‌ ಆಝಮ್‌ ಅವರ ಹೆಸರಿನಲ್ಲಿರುವ ದಾಖಲೆಗಳನ್ನು ಮುರಿಯಲಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!