spot_img
Monday, April 27, 2026
spot_img

ಗಮಕ : ಸಾಹಿತ್ಯ ಶ್ರೀಮಂತಿಕೆಗೆ ರಸಬದ್ಧವಾದ ರಾಗಗಳ ಸಂಯೋಜನೆಯಿಂದ ಶೋತೃಗಳಿಗೆ  ಹೃದ್ಯ- ಎ.ಎಸ್.ಎನ್ ಹೆಬ್ಬಾರ್

 ಕುಂದಾಪುರ: ಪುರಾಣ ಹಾಗೂ ಆಧುನಿಕ ಕಾವ್ಯಗಳ ಸುಲಭ ಅರ್ಥೈಸುವಿಕೆಗೆ ಗಮಕ ಕಲೆ ಪೂರಕವಾದುದು. ಕಾವ್ಯಗಳಲ್ಲಿನ ಸಾಂದರ್ಭಿಕವಾದ ಸಾಹಿತ್ಯ ಶ್ರೀಮಂತಿಕೆಗೆ ರಸಬದ್ಧವಾದ ರಾಗಗಳ ಸಂಯೋಜನೆಯಿಂದ ಶೋತೃಗಳಿಗೆ  ಹೃದ್ಯವಾಗುತ್ತದೆ. ಮನೆಮನೆಗಳಲ್ಲಿ ಗಮಕ ಕಲೆ ಪ್ರಸ್ತುತಗೊಳ್ಳಬೇಕು ಯುವ ಮನಸುಗಳನ್ನು ಅರಳಿಸಬೇಕು ಎಂದು ಕುಂದಾಪುರದ ಖ್ಯಾತ ನ್ಯಾಯವಾದಿ ಎ ಎಸ್ ಎನ್ ಹೆಬ್ಬಾರ್ ಅವರು ಅಭಿಪ್ರಾಯಪಟ್ಟರು.

ಅವರು  ಕುಂದಾಪುರದ ‘ನುಡಿ’ ಯಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಕರ್ನಾಟಕ ಗಮಕ ಕಲಾ ಪರಿಷತ್ತು ಕುಂದಾಪುರ ಘಟಕ ಇವರ ಸಹಯೋಗದಲ್ಲಿ ಕನಕ ಜಯಂತಿಯ ಪ್ರಯುಕ್ತ ಹಮ್ಮಿಕೊಂಡಿದ್ದ  ಕನಕದಾಸ ಕೀರ್ತನೆಗಳ ಗಾಯನ ಮತ್ತು ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 ಗಮಕಿಯಾಗಿ ಶ್ರೀಮತಿ ಮಂಜುಳಾ ಸುಬ್ರಮಣ್ಯ ಮಂಚಿ ಹಾಗೂ ವ್ಯಾಖ್ಯಾನಕಾರರಾಗಿ ಸಂಸ್ಕೃತ ವಿದ್ವಾಂಸರಾದ ಡಾ. ರಾಘವೇಂದ್ರ ರಾವ್ ಪಡುಬಿದ್ರೆ,  ದ.ರಾ ಬೇಂದ್ರೆಯವರ ಮೇಘದೂತ ಕಾವ್ಯ ಭಾಗವನ್ನು ಪ್ರಸ್ತುತ ಪಡಿಸಿದರು.

 ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಮಾರ್ ಕೆಮ್ಮಣ್ಣು ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಸುಧಾ ಹೆಬ್ಬಾರ್ ಉಪಸ್ಥಿತರಿದ್ದರು.

 ಉಡುಪಿ ತಾಲೂಕು ಗಮಕ ಕಲಾಪರಿಷತ್  ಅಧ್ಯಕ್ಷರಾದ  ಎಂ ಎಲ್ ಸಾಮಗ ಸ್ವಾಗತಿಸಿದರು.

  ಗಮಕ ಕಲಾ ಪರಿಷತ್ ಕುಂದಾಪುರ ಘಟಕದ ಅಧ್ಯಕ್ಷರಾದ ಎಚ್ ಸುಜಯೀ0ದ್ರ ಹಂದೆ  ಕಾರ್ಯಕ್ರಮವನ್ನು ನಿರ್ವಹಿಸಿದರು.  ಕಾರ್ಯದರ್ಶಿ ವಿಶ್ವನಾಥ ಕರಬ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!