Sunday, September 8, 2024

ಸಂಸ್ಕೃತಿ, ಸಂಸ್ಕಾರಗಳು ಕಲಾ ಚಟುವಟಿಕೆಯಿಂದ ವೃದ್ಧಿಸುತ್ತದೆ-ಪೂರ್ಣಿಮಾ

ಕುಂದಾಪುರ: ವಿವಿಧ ಕಲೆಗಳಿಂದ ಕೂಡಿದ ಉಡುಪಿ ಕಲಾ ವಿಭಾಗದಲ್ಲಿ ಪರಿಪೂರ್ಣತೆಯನ್ನು ಸಾಧಿಸಿದೆ. ಕುಟುಂಬದಲ್ಲಿ ಒಂದೆರಡು ಮಕ್ಕಳನ್ನು ಹೊಂದಿರುವ ಪ್ರಸ್ತುತ ಕಾಲಘಟ್ಟದಲ್ಲಿ ಓದು ಮತ್ತು ಕಲೆ ಎರಡೂ ವಿಭಾಗದಲ್ಲಿ ಬೆಳೆಯುವಂತೆ ಪೋಷಕರು ಮಕ್ಕಳನ್ನು ಬೆಳೆಸುತ್ತಾರೆ. ಹಾಗಾಗಿ ಪ್ರತೀ ಕುಟುಂಬದಲ್ಲಿಯೂ ಬೇರೆ ಬೇರೆ ಕಲಾ ವಿಭಾಗದಲ್ಲಿ ತೊಡಗಿಸಿಕೊಂಡ ಮಕ್ಕಳನ್ನು ಇಂದಿನ ಕಾಲಘಟ್ಟದಲ್ಲಿ ಕಾಣಬಹುದು. ಸಂಸ್ಕೃತಿ, ಸಂಸ್ಕಾರಗಳು ಕಲಾ ಚಟುವಟಿಕೆಯಿಂದ ವೃದ್ಧಿಸುತ್ತದೆ ಎಂದು ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಕಾರ್ಯಕ್ರಮ ಉದ್ಘಾಟಿಸಿ ಮಾತನ್ನಾಡಿದರು.

ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಸಹಕಾರದೊಂದಿಗೆ ತೆಕ್ಕಟ್ಟೆ ಹಯಗ್ರೀವದಲ್ಲಿ ನವೆಂಬರ್ 26ರಂದು ಶ್ರೀ ಸರಸ್ವತಿ ಲಲಿತಕಲಾ ಟ್ರಸ್ಟ್, ಮಣೂರು ಸಂಸ್ಥೆಯ ಉದ್ಘಾಟನೆ ನಡೆಸಿ ಮಾತನ್ನಾಡಿದರು.

ತೆಕ್ಕಟ್ಟೆಯ ಪರಿಸರಕ್ಕೆ ಸಾಂಸ್ಕೃತಿಕ ರಾಯಭಾರತ್ವಕ್ಕೆ ಇನ್ನೊಂದು ಸಂಸ್ಥೆ ಸರಸ್ವತಿ ಲಲಿತಕಲಾ ಟ್ರಸ್ಟ್, ಮಣೂರು ಸೇರಿಕೊಂಡಿದೆ. ಸಂಸ್ಕೃತಿಯನ್ನು ಮನದಟ್ಟು ಮಾಡುವ, ಸಂಸ್ಕಾರದ ಚಿತ್ರಣವನ್ನು ಬಿತ್ತರಿಸುವ ಕಾರ್ಯವನ್ನು ಕಲೆ ಮಾಡಿದೆ. ಆದರೆ ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ಕಲೆಗೆ ಅವಕಾಶವಿಲ್ಲ. ಕಲೆಗೆ ಮಹತ್ವ ಬರಬೇಕಾದರೆ ಶೈಕ್ಷಣಿಕ ಭಾಗವಾಗಬೇಕಾಗುತ್ತದೆ. ಖಾಸಗಿ ಶಾಲೆಗಳು ಕಲೆಗೆ ಮಹತ್ವ ನೀಡುತ್ತಿದ್ದರೂ ಅದು ಪ್ರಾಮುಖ್ಯವಾಗಿ ನೆಲೆನಿಂತಿಲ್ಲ. ಕಲೆಗೆ ಶಾಲೆಗಳಲ್ಲಿ ಪ್ರಾತಿನಿಧ್ಯ ದೊರೆಯಬೇಕು ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರಾದ ಶ್ರೀಮತಿ ಪಾರ್ವತಿ ಜಿ. ಐತಾಳ್, ಅಭಿಪ್ರಾಯಪಟ್ಟರು.

ಯಕ್ಷಗುರುಗಳಾದ ಲಂಬೋದರ ಹೆಗಡೆ, ಡಾ. ವಾಸುದೇವ ಹೊಳ್ಳ ಉಪಸ್ಥಿತರಿದ್ದರು. ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಶಾರದಾ ಹೊಳ್ಳ ಸ್ವಾಗತಿಸಿ, ಕು| ನೇಹ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ರಂಗದಲ್ಲಿ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!