spot_img
Monday, April 27, 2026
spot_img

ಮಾರಾಟಗಾರ ಮೋದಿಯವರೇ…. : HAL ಗೆ ಆಗಮಿಸಿದ ಮೋದಿಗೆ ಕಾಂಗ್ರೆಸ್‌ ಹೇಳಿದ್ದೇನು ?

ಜನಪ್ರತಿನಿಧಿ ವಾರ್ತೆ (ಬೆಂಗಳೂರು) :  ಬೆಂಗಳೂರಿನ ಎಚ್​​ಎಎಲ್​ನಲ್ಲಿ (HAL) ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜಧಾನಿ ಬೆಂಗಳೂರಿಗೆ ಆಗಮಿಸಿದ್ದರು.

ಯುದ್ಧ ವಿಮಾನ ತೇಜಸ್‌ನಲ್ಲಿ ಒಂದು ಸುತ್ತು ಪ್ರಯಾಣ ಬೆಳೆಸಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ “ಎಕ್ಸ್‌” ನಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದರು. ಈ ಸಂಬಂಧ ರಾಜ್ಯ ಕಾಂಗ್ರೆಸ್‌ ಮೋದಿ ಅವರನ್ನು ವ್ಯಂಗ್ಯ ಮಾಡಿದೆ.

ಸದಾ ʼಶೋಕಿಲಾಲʼ ಎಂದು ಮೋದಿಯನ್ನು ಹೀಯಾಳಿಸುವ ಕಾಂಗ್ರೆಸ್‌, ಇಂದು(ಶನಿವಾರ) ತೇಜಸ್‌ ಪ್ರಯಾಣದ ವೇಳೆ ಫೋಟೋ ತೆಗೆಸಿಕೊಂಡ ಪ್ರಧಾನಿ ಮೋದಿಯವರನ್ನು ಎಂದಿನಂತೆ ಟೀಕಿಸಿದೆ.  

ಮಾರಾಟಗಾರ ನರೇಂದ್ರ ಮೋದಿ ಅವರೇ, ನಮ್ಮ ಹೆಮ್ಮೆಯ ಹೆಚ್ಎಎಲ್ ನ್ನು ಮಾರಬೇಡಿ! ಕೇವಲ ಫೋಟೋಶೂಟ್ ಮಾಡಿಸಿಕೊಳ್ಳಲು HALಗೆ ಬಂದಿದ್ದೀರೋ ಅಥವಾ ಅದಾನಿಯ ಏಜೆಂಟ್ ಆಗಿ ಬಂದಿದ್ದೀರೋ ಗೊತ್ತಿಲ್ಲ. ಆದರೆ ನಮ್ಮ HALನ್ನು ನಮಗೆ ಬಿಡಿ! ಎಂದು ಮೋದಿಯನ್ನು ಹಾಸ್ಯಾಸ್ಪದವಾಗಿ ತಿವಿದು ಟೀಕೆ ಮಾಡಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!