Sunday, April 28, 2024

ʼಕಾಂತಾರʼ ಪ್ರಿಕ್ವೇಲ್‌ ಬಗ್ಗೆ ನಿರ್ಮಾಣ ಸಂಸ್ಥೆ ʼಹೊಂಬಾಳೆ ಫಿಲ್ಮ್ಸ್‌ʼನಿಂದ ಮಹತ್ವದ ಘೋಷಣೆ  

ಜನಪ್ರತಿನಿಧಿ ವಾರ್ತೆ (ಚಂದನ ವನ, ಬೆಂಗಳೂರು)  : ಇಡೀಭಾರತೀಯ ಚಿತ್ರರಂಗವನ್ನೇ ಬೆರಗು ಕಣ್ಣಿನಿಂದ ನೋಡುವ ಹಾಗೆ ಮಾಡಿದ ಕನ್ನಡದ ಸುಪ್ರಸಿದ್ದ ಚಲನಚಿತ್ರ ʼಕಾಂತಾರʼ ಬಿಡುಗಡೆಯಾಗಿ ಒಂದು ವರ್ಷ ಪೂರೈಸಿದೆ. ʼಕಾಂತಾರʼ  ಪ್ರಿಕ್ವೇಲ್‌ ಬರಲಿದೆ ಎಂದು ಈ ಮೊದಲೇ ಘೋಷಣೆ ಆಗಿತ್ತು.ಈಗ ನಿರ್ಮಾಣ ಸಂಸ್ಥೆ ʼಹೊಂಬಾಳೆ ಫಿಲ್ಮ್ಸ್‌ʼ ಅಧಿಕೃತವಾಗಿ ಮಾಹಿತಿಯೊಂದನ್ನು ನೀಡಿದ್ದ ಸಿನಿರಸಿಕರನ್ನು ಕಾತರದಿಂದ ಕಾಯುವಂತೆ ಮಾಡಿದೆ.

ʼಕಾಂತಾರ -2ʼ ಚಿತ್ರದ ಫಸ್ಟ್‌ ಪೋಸ್ಟರ್‌ ನವೆಂಬರ್‌ 27 ರಂದು ಮದ್ಯಾಹ್ನ 12:25ಕ್ಕೆ ಬಿಡುಗಡೆಯಾಗಲಿದೆ ಎಂದು ʼಹೊಂಬಾಳೆʼ ಹೇಳಿಕೊಂಡಿದೆ.

ʼಕಾಂತಾರʼ ನಿರ್ದೇಶಕ, ನಟ ರಿಷಬ್‌ ಶೆಟ್ಟಿ ಅವರಿಗೆ ಒಂದು ಡಿವೈನ್‌ ಹಿಟ್‌ ತಂದುಕೊಟ್ಟಿತ್ತು. ಕನ್ನಡ ಚಿತ್ರರಂಗ ಹಿಂದೆಂದೂ ನೋಡದ ಬೆರುಗನ್ನು ಈ ಸಿನೆಮಾದ ಮೂಲಕ ನೋಡಿತ್ತು. ಇದೀಗ ʼಕಾಂತಾರ 2ʼ ಮತ್ತೊಂದು ಹೊಸ ನಿರೀಕ್ಷೆಯನ್ನು ಮೂಡಿಸಿದೆ. ಪ್ರಿಕ್ವೇಲ್‌ನಲ್ಲಿ ಪಂಜುರ್ಲಿಯ ಹಿನ್ನೆಲೆ ಇರಲಿದೆ ಎಂಬ ಮಾಹಿತಿಯನ್ನು ಸಿನೆಮಾ ತಂಡದ ಬಲ್ಲ ಮೂಲ ತಿಳಿಸಿದೆ.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!