Sunday, September 8, 2024

ಬೆಂಗಳೂರು ಕಂಬಳ ಕೆರೆಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಚಾಲನೆ : ಅಶೋಕ್‌ ರೈ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ರಾಜ್ಯಾದ್ಯಂತ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಂಬಳ ಈಗ ಬಾರಿ ಸದ್ದು ಮಾಡುತ್ತಿದ್ದು, ಕಂಬಳ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ.

ಕರಾವಳಿ ಕರ್ನಾಟಕದ ಎಲ್ಲಾ ಸಂಘ-ಸಂಸ್ಥೆ, ಜಾತಿಯವರೊಂದಿಗೆ ಸಮಾಲೋಚನೆ ನಡೆಸಿ ಒಮ್ಮತದಿಂದ ಇಲ್ಲಿ ಕಂಬಳ ಆಯೋಜನೆ ಮಾಡಬೇಕೇಂಬ ನಿರ್ಧಾರ ಮಾಡಿದ್ದೇವೆ.ಇದು ನಮ್ಮ ಸಂಕಲ್ಪವೂ ಆಗಿದೆ. ಶನಿವಾರ (ನ.25)ರ ಬೆಳಿಗ್ಗೆ 10.30 ಕ್ಕೆ ಕಾರ್ಯಕ್ರಮ ಆರಂಭವಾಗುತ್ತದೆ. ದಿವಂಗತ, ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತ ಪುನೀತ್‌ ರಾಜ್‌ಕುಮಾರ್‌ ಅವರ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಕಂಬಳ ಕೆರೆಗೆ ಚಾಲನೆ ನೀಡಲಿದ್ದಾರೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್‌ ರೈ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಂಬಳದ ರೂಪುರೇಷೆಗಳ ಬಗ್ಗೆ ಮಾತನಾಡಿದ ಅವರು, ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಎಲ್ಲಾ ಸಚಿವರು ಹಾಗೂ ಸಿನೆಮಾ ನಟ, ನಟಿಯರು ಕಂಬಳದಲ್ಲಿ ಭಾಗಿಯಾಗಲಿದ್ದಾರೆ. ರವಿವಾರ (ನ.26) ರಂದು ಸಂಜೆ 5.30ಕ್ಕೆ ಕಂಬಳ ಕಾರ್ಯಕ್ರಮ ಮುಗಿಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಂಬಳ 6 ಸೆಗ್ಮೆಂಟ್​ನಲ್ಲಿ ನಡೆಯುತ್ತೆ. ಕಂಬಳ ಇತಿಹಾಸದಲ್ಲಿ ತೃತೀಯ ಬಹುಮಾನ ಇರಲಿಲ್ಲ. ಬೆಂಗಳೂರಿನ ಕಂಬಳದಲ್ಲಿ ಮೂರನೇ ಸ್ಥಾನಕ್ಕೂ ಕೂಡ 4 ಗ್ರಾಂ ಚಿನ್ನ 25 ಸಾವಿರ ಬಹುಮಾನ ನೀಡಲು ನಿರ್ಧರಿಸಿದ್ದೇವೆ. ಮೊದಲನೇ ಸ್ಥಾನಕ್ಕೆ 16 ಗ್ರಾಂ ಚಿನ್ನ 1 ಲಕ್ಷ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ. ಎರಡನೇ ಸ್ಥಾನಕ್ಕೆ 8 ಗ್ರಾಂ ಚಿನ್ನ 50 ಸಾವಿರ ನಗದು ಬಹುಮಾನವನ್ನು ನೀಡಿ ಗೌರವಿಸಲಾಗುತ್ತದೆ. ಕೋಣ ಓಡಿಸಿ ವಿಜಯಶಾಲಿ ಆದವರಿಗೆ ಕೂಡ ವಿಶೇಷ ಬಹುಮಾನ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ, ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ, ಕಂಬಳ ಇತಿಹಾಸ ತಜ್ಞ ಗುಣುಪಾಲ, ಕಡಂಬ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!