spot_img
Wednesday, January 22, 2025
spot_img

ಡಿಕೆಶಿ ಪ್ರಕರಣ ಹಿಂಪಡೆಯುವ ರಾಜ್ಯ ಸಚಿವ ಸಂಪುಟದ ನಿರ್ಧಾರ ಸಂವಿಧಾನಕ್ಕೆ ವಿರುದ್ಧವಾಗಿದೆ : ವಿಜಯೇಂದ್ರ

ಜನಪ್ರತಿನಿಧಿ ವಾರ್ತೆ :  ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್‌ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿದೆ. ಜಾರಿ ನಿರ್ದೇಶನಾಲಯೂ ತನಿಖೆ ನಡೆಸುತ್ತಿದೆ. ಶಿವಕುಮಾರ್‌ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪವಿರುವ ಬಗ್ಗೆ ತನಿಖೆಯಲ್ಲಿ ಸಾಕ್ಷ್ಯಗಳು ಸಿಕ್ಕಿವೆ ಎಂದು ಸಿಬಿಐ ಹೇಳಿತ್ತು. ಹೀಗಿರುವಾಗ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆಯುವಲ್ಲಿ ರಾಜ್ಯ ಸಚಿವ ಸಂಪು ಮಾಡಿರುವ ನಿರ್ಧಾರ ಕಾನೂನಿಗೆ ವಿರುದ್ಧ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ ವಿಜಯೇಂದ್ರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ವಿರುದ್ಧ ಸಿಬಿಐ ತನಿಖೆಯ ಅನುಮತಿಯನ್ನು ಹಿಂಪಡೆಯುವ ರಾಜ್ಯ ಸಚಿವ ಸಂಪುಟದ ತೀರ್ಮಾನ ಕಾನೂನುಬಾಹೀರವಾದದ್ದು, ಶಿವಕುಮಾರ್‌ ಅಪರಾಧಿ ಎಂದು ನಾನು ಹೇಳುವುದಿಲ್ಲ. ಡಿಕೆಶಿ ಅಪರಾಧಿಯೋ ಅಥವಾ ಅಲ್ಲವೋ ಎಂಬುವುದು ಕೋರ್ಟ್‌ನಲ್ಲಿ ತೀರ್ಮಾನ ಆಗಬೇಕು. ತನಿಖೆಯನ್ನು ಎದುರಿಸಿ, ಅವರ ಮೇಲಿನ ಆರೋಪಗಳಿಂದ ಹೊರಬರುವ ಎಲ್ಲಾ ಅವಕಾಶಗಳು ಅವರ ಮುಂದೆ ಇದೆ. ಅದನ್ನು ಅವರು ಬಳಸಿಕೊಳ್ಳಲಿ. ಅದನ್ನು ಬಿಟ್ಟು ಅವರ ರಾಜಕೀಯ ಪ್ರಭಾವವನ್ನು ಹೀಗೆ ಸಚಿವ ಸಂಪುಟದ ಮೇಲೆ ಬೀರುವುದು ಸರಿ ಅಲ್ಲ ಎಂದು ಅವರು ಹೇಳಿದ್ದಾರೆ.

ರಾಜ್ಯದ ಜನರು, ದೇಶದ ಜನರು ಡಿಕೆಶಿ ಪ್ರಕರಣವನ್ನು ಗಮನಿಸಿದ್ದಾರೆ. ರಾಜ್ಯ ಸಂಪುಟದ ನಿರ್ಧಾರ ಸಂಪೂರ್ಣವಾಗಿ ಕಾನೂನಿಗೆ ವಿರುದ್ಧವಾಗಿದೆ. ಖಂಡನೀಯವಾಗಿದೆ. ಸಂವಿಧಾನಕ್ಕೆ ವಿರುದ್ಧ ಆದದ್ದು. ರಾಜ್ಯ ಸಚಿವ ಸಂಪುಟದ ಈ ತೀರ್ಮಾನವನ್ನು ಬಿಜೆಪಿ ಖಂಡಿಸುತ್ತದೆ ಎಂದು ಅವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!