Sunday, September 8, 2024

ʼಕಾಂತಾರ -2ʼನಲ್ಲಿ 14ನೇ ಶತಮಾನದ ಪಂಜುರ್ಲಿಯ ಕಥೆ ತೆರೆ ಮೇಲೆ ತರಲಿದ್ದಾರೆ ಡಿವೈನ್‌ ಸ್ಟಾರ್‌ : ನವೆಂಬರ್‌ 27ಕ್ಕೆ ಸಿನೆಮಾ ಮುಹೂರ್ತ

ಜನಪ್ರತಿನಿಧಿ ವಾರ್ತೆ : ಕಾಂತಾರ ಸಿನೆಮಾದ ಮೂಲಕ ವಿಶ್ವದಾದ್ಯಂತ ಖ್ಯಾತಿ ಗಳಿಸಿದ ಕನ್ನಡದ ಬಹು ಬೇಡಿಕೆಯ ನಿರ್ದೇಶಕರುಗಳಲ್ಲಿ ಓರ್ವರಾದ ರಿಷಬ್‌ ಶೆಟ್ಟಿ ನಿರ್ದೇಶನದ ʼಕಾಂತಾರಾ -2ʼ ಈಗ ಸೆಟ್‌ ಏರುವುದಕ್ಕೆ ರೆಡಿಯಾಗಿದೆ. ಕೇವಲ 17 ಕೋಟಿ ವೆಚ್ಚದಲ್ಲಿ ʼಕಾಂತಾರʼ ಸಿನೆಮಾ ಜಗತ್ತಿನಾದ್ಯಂತ ಸುಮಾರು 400 ಕೋಟಿ ಬಾಕ್ಸ್‌ ಆಫೀಸ್‌ ಕಲೆಕ್ಶನ್‌ ಮಾಡಿತ್ತು. ನಿರ್ದೇಶಕ ರಿಷಬ್‌ ಡಿವೈನ್‌ ಸ್ಟಾರ್‌ ಆಗಿ ಈ ಸಿನೆಮಾದ ಮೂಲಕ ಖ್ಯಾತಿ ಗಳಿಸಿದ್ದರು. ಈಗ ರಿಷಬ್‌ ಶೆಟ್ಟಿ ʼಕಾಂತಾರ-2ʼ ನಲ್ಲಿ ಬ್ಯುಸಿಯಾಗಿದ್ದು, ನವೆಂಬರ್‌ 27ಕ್ಕೆ ಸಿನೆಮಾ ಮುಹೂರ್ತ ನಡೆಯಲಿದೆ ಎಂಬ ಮಾಹಿತಿ ಈಗ ಸಿನೆಮಾ ತಂಡದ ಆಪ್ತ ಬಳಗದಿಂದಲೇ ತಿಳಿದು ಬಂದಿದೆ.  

ʼಕಾಂತಾರ -2ʼ ನವೆಂಬರ್ 27ಕ್ಕೆ ಮೂಹೂರ್ತ :

ಹೌದು, ʼಕಾಂತಾರ-2ʼ ಸಿನೆಮಾಕ್ಕೆ ಸ್ಕ್ರಿಪ್ಟ್‌ ಈಗಾಗಲೇ ಅಂತಿಮ ಹಂತದಲ್ಲಿದ್ದು, ಸಿನೆಮಾ ತಂಡ ಸಕಲ ತಯಾರಿಗಳೊಂದಿಗೆ ಸಿನೆಮಾ ಸೆಟ್‌ ಏರಿಸುವುದಕ್ಕೆ ತಯಾರಾಗಿದೆ. ನವೆಂಬರ್‌ 27ಕ್ಕೆ ʼಕಾಂತಾರ -2ʼ ಸಿನೆಮಾಗೆ ಮುಹೂರ್ತವನ್ನು ಬಹಳ ಸರಳವಾಗಿ ನಡೆಸಲಿದೆ ಎಂದು ಸಿನೆಮಾ ತಂಡದ ಆಪ್ತ ವಲಯ ತಿಳಿಸಿದೆ. ಡಿಸೆಂಬರ್‌ ಒಳಗಾಗಿ ಬಾಕಿ ಉಳಿದಿರುವ ಸ್ಕ್ರಿಪ್ಟ್‌ ಕೆಲಸ ಮುಗಿಸಿ 2024ರ ಆರಂಭದಲ್ಲಿ ಸಿನೆಮಾ ಶೂಟಿಂಗ್‌ ಆರಂಭಿಸಲಿದೆ ಎಂದು ಸಿನೆಮಾ ತಂಡದ ಬಲ್ಲ ಮೂಲಗಳು ತಿಳಿಸಿವೆ.

14ನೇ ಶತಮಾನದ ಕಥೆ ʼಕಾಂತಾರ -2ʼ :

ನಿರ್ದೇಶಕ ರಿಷಬ್‌ ಶೆಟ್ಟಿ ʼಕಾಂತಾರ-2ʼ ಸೀಕ್ವೇಲ್‌ ಅಲ್ಲ, ಪ್ರಿಕ್ವೇಲ್‌ ಎಂದಿದ್ದರು.  ಇದೀಗ ಸಿನೆಮಾಕ್ಕಾಗಿ ಪಂಜುರ್ಲಿಯ ಇತಿಹಾಸದ ಆಳಕ್ಕೆ ಸಿನೆಮಾ ತಂಡ ಇಳಿದಿದ್ದು, 14ನೇ ಶತಮಾನದ ಕಥೆಯನ್ನು ತೆರೆ ಮೇಲೆ ತರುವುದಕ್ಕೆ ಸಿನೆಮಾ ತಂಡ ತಯಾರಾಗಿದೆ ಅಂತೆ. ಪಂಜುರ್ಲಿ ದೈವದ ಹುಟ್ಟಿನ ಕಥೆಯನ್ನು ನಿರ್ದೇಶಕರು ಹೇಳಲು ಹೊರಟಿದ್ದು, ಸಿನೆಮಾಕ್ಕಾಗಿ ವಿಜಯ್‌ ಕಿರಗಂದೂರು ನೇತೃತ್ವದ ಹೊಂಬಾಳೆ ಫಿಲ್ಮ್ಸ್‌ 110 ಕೋಟಿ ಹೂಡಿಕೆ ಮಾಡುತ್ತಿದೆಯಂತೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಬರುವ ವರ್ಷ ಅಂತ್ಯದೊಳಗೆ  ಪಂಜುರ್ಲಿ ದೈವದ ಕಥೆ ಥಿಯೇಟರ್‌ಗಳಲ್ಲಿ ರಾರಾಜಿಸಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಸಿನೆಮಾಕ್ಕಾಗಿ ಕುದುರೆ ಸವಾರಿ ಕಲಿಯುತ್ತಿರುವ ರಿಷಬ್‌ :

ನಿರ್ದೇಶಕ ರಿಷಬ್‌ ಶೆಟ್ಟಿ ಸಿನೆಮಾ ರಂಗದಲ್ಲಿ ಒಂದು ದೊಡ್ಡ ನಿರೀಕ್ಷೆಯನ್ನೇ ಹುಟ್ಟು ಹಾಕಿದ್ದಾರೆ. ಅವರ ನಿರ್ದೇಶನದ ಸಿನೆಮಾಗಳು ತೆರೆಗೆ ಬರಲಿವೆ ಎಂದರೇ ಸಾಕು, ಸಿನಿ ಪ್ರಿಯರು ಕಾತರಿದಿಂದ ಕಾಯುತ್ತಾರೆ. ಸಿನಮಾ ಕಥೆಗಾಗಲಿ, ಪಾತ್ರಗಳಿಗಾಗಲಿ ರಿಷಬ್‌ ತಂಡ ಎಂದಿಗೂ ರಾಜಿ ಮಾಡುವುದಿಲ್ಲ. ಸಿನೆಮಾಕೆಕ ಬೇಕಾಗಿ ಕೆಲವು ಹೊಸ ಪಾತ್ರಗಳಿಗೆ ಸೂಕ್ತ ನಟ, ನಟಿಯರ ಆಯ್ಕೆ ಪ್ರಕ್ರಿಯೆಯಲ್ಲಿ ಸಿನೆಮಾ ತಂಡ ಇದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಮಾತ್ರವಲ್ಲದೇ, ನಿರ್ದೇಶಕ ರಿಷಬ್‌ ʼಕಾಂತಾರ-2ʼಗಾಗಿ ಕುದುರೆ ಸವಾರಿ, ಕಳರಿ ಫೈಟ್‌ ನನ್ನು ಕೂಡ ಅಭ್ಯಾಸ ಮಾಡುತ್ತಿದ್ದಾರೆ ಎಂಬ ವಿಷಯ ಸಿನೆಮಾ ತಂಡದ ಆಪ್ತ ಮೂಲ ತಿಳಿಸಿದೆ. ಈಗಾಗಲೆ ಚಿತ್ರ ತಂಡ ಸಿನೆಮಾ ನಿರ್ಮಾಣಕ್ಕಾಗಿ ಪಂಜುರ್ಲಿ ಹಾಗೂ ಗುಳಿಗ ದೈವದ ಮೊರೆ ಹೋಗಿದ್ದು, ದೈವಗಳು ಅಸ್ತು ಎಂದಿವೆ. ʼಕಾಂತಾರʼ ಸಿನೆಮಾ ರಂಗದಲ್ಲಿ ಸೃಷ್ಟಿಸಿದ ಡಿವೈನ್‌ ಕ್ರೇಜ್ಹ್‌ ʼಕಾಂತಾರ-2ʼ ನಲ್ಲಿಯೂ ಹೇಗೆ ಮುಂದುವರಿಸಿಕೊಂಡು ಹೋಗಲಿದೆ ಸಿನೆಮಾ ತಂಡ ಎನ್ನುವುದು ಸದ್ಯಕ್ಕಿರುವ ಕುತೂಹಲ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!