spot_img
Wednesday, January 22, 2025
spot_img

ರಶ್ಮಿಕಾ, ಕತ್ರಿನಾ ಕೈಫ್‌ ನಂತರ ಈಗ ಬಾಲಿವುಡ್‌ ನಟಿ ಕಾಜೋಲ್‌ ಡೀಪ್‌ಫೇಕ್‌ ವೀಡಿಯೋ ವೈರಲ್‌

ಜನಪ್ರತಿನಿಧಿ ವಾರ್ತೆ : ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ, ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ನಂತರ ಇದೀಗ ಮತ್ತೋರ್ವ ಬಾಲಿವುಡ್‌ ನಟಿ ಕಾಜೋಲ್‌ ಅವರ ಡೀಪ್‌ಫೇಕ್‌ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ನಟಿ ಕಾಜೋಲ್‌ ಅವರು ಬಟ್ಟೆ ಬದಲಾಯಿಸುತ್ತಿರುವ ರೀತಿಯ ಒಂದು ವೀಡಿಯೋ ಹರಿದಾಡುತ್ತಿದೆ. ಕ್ಯಾಮೆರಾ ಮುಂದೆ ಬಟ್ಟೆ ಬದಲಾಯಿಸುತ್ತಿರುವ ಮಹಿಳೆಯೊಬ್ಬರ ಮುಖಕ್ಕ ಕಾಜೋಲ್‌ ಅವರ ಮುಖವನ್ನು ಡೀಫ್‌ಪೇಕ್‌ ತಂತ್ರಜ್ಙಾನವನ್ನು ಬಳಸಿ ವೈರಲ್‌ ಮಾಡಲಾಗಿದೆ.

ಬ್ರಿಟನ್‌ ಮೂಲದ ಸೋಶಿಯಲ್‌ ಮೀಡಿಯಾ ಇನ್ಲ್ಪುವೆನ್ಸರ್‌ ರೋಸಿ ಬ್ರೀನ್‌ ಈ ವೈರಲ್‌ ಆಗಿರುವ ವೀಡಿಯೋದಲ್ಲಿ ಇರುವ ಅಸಲಿ ಮಹಿಳೆ ಎಂದು ಸದ್ಯ ಗುರುತಿಸಲಾಗಿದೆ.

ಅವರು 2023ರ ಜೂನ್‌ 5 ರಂದು ರೆಡಿ ವಿಥ್‌ ಮಿ ಟ್ರೆಂಡ್‌ನ ಭಾಗವಾಗಿ ಟಿಕ್‌ ಟಾಕ್‌ ಲ್ಲಿ ತಮ್ಮ ಈ ವೀಡಿಯೋವನ್ನು ಹಂಚಿಕೊಂಡಿದ್ದರು. ಅದೇ ವೀಡಿಯೋಗೆ ಈಗ ಎಐ ಡೀಪ್‌ಫೇಕ್‌ ತಂತ್ರಜ್ಙಾನ ಬಳಸಿ ಕಾಜೋಲ್‌ ಮುಖವನ್ನು ಎಡಿಟ್‌ ಮಾಡಲಾಗಿದೆ. ವೀಡಿಯೋದಲ್ಲಿ ಕ್ಯಾಮೆರಾದ ಮುಂದೆ ಬಟ್ಟೆ ಬದಾಲಯಿಸುತ್ತಿರುವಂತೆ ಬಿಂಬಿಸಲಾಗಿದೆ.

ಇನ್ನು, ನಟಿ ರಶ್ಮಿಕಾ ಮಂದಣ್ಣ ಅವರ ವೀಡಿಯೋ ಹಾಗೂ ನಟಿ ಕತ್ರಿನಾ ಕೈಫ್‌ ಫೋಟೋವೊಂದು ಡೀಫ್‌ಫೇಕ್‌ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೆ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದೆ.

ಹೆಚ್ಚು ವೀಕ್ಷಣೆ ಪಡೆಯುವುದಕ್ಕಾಗಿ ಎಐ ಆಧಾರಿತ ಡೀಫ್ ಫೇಕ್ ವಿಡಿಯೋ, ಫೋಟೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಾಮಾಜಿಕ ಜಾಲತಾಣಗಳ ಮಧ್ಯವರ್ತಿಗಳಿಗೆ ಖಡಕ್‌ ವಾರ್ನ್‌ ಮಾಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಸಂದೇಶ, ಮಾಹಿತಿ, ನಕಲಿ ಫೋಟೋ ಹಾಗೂ ವಿಡಿಯೋಗಳ ರೆಕಗ್ನೈಸ್‌ ಮಾಡಿ ಅವುಗಳಿಗೆ ನಿರ್ಬಂಧ ಹೇರುವ ಸಮಂಜಸವಾದ ಪ್ರಯತ್ನಗಳನ್ನು ಮಾಡಬೇಕೆಂದು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹೆಚ್ಚುತ್ತಿರುವ ಇಂತಹ ನಕಲಿ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಪ್ಲ್ಯಾಟ್‌ಫಾರ್ಮ್‌ ಗಳಿಂದ ತೆಗೆದು ಹಾಕಲು ಸಾಮಾಜಿಕ ಜಾಲತಾಣ ಕಂಪನಿಗಳಾದ Facebook, Instagram, X, Snap ಮತ್ತಿತರ ಜಾಲತಾಣಗಳಿಗೆ ಪ್ರಮಾಣಿಕ ಪ್ರಯತ್ನ ಮಾಡುವಂತೆ ಹೇಳಿದೆ. ಆದಾಗ್ಯೂ, ಸಾಮಾಜಿಕ ಜಾಲತಾಣಗಳಲ್ಲಿ ಈಗ ನಟಿ ಕಾಜೋಲ್‌ ಅವರ ಡೀಪ್‌ಫೇಕ್‌ ವೀಡಿಯೋ ವೈರಲ್‌ ಆಗಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!