Sunday, September 8, 2024

ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯನೆಂದು ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ: ಪ್ರಕರಣ ದಾಖಲು


ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಭಕ್ತರೊಬ್ಬರಿಗೆ ತಾನು ದೇವಸ್ಥಾನದ ಆಡಳಿತ ಮಂಡಳಿತ ಸದಸ್ಯ ಎಂದು ನಂಬಿಸಿ ವಿಶೇಷ ಪೂಜೆ ಮಾಡಿಸುವುದಾಗಿ ಹೇಳಿ ರೂ 30,73,600 ವಂಚಿಸಿರುವ ಘಟನೆ ನಡೆದಿದೆ.

ಬೆಂಗಳೂರಿನ ದಿಲ್ನಾ (45ವ) ಇವರು ಕಳೆದ ವರ್ಷ ತನ್ನ ಪತಿ ಮತ್ತು ತನ್ನ ಸಂಸಾರದೊಂದಿಗೆ ಕೊಲ್ಲೂರು ದೇವಸ್ಥಾನಕ್ಕೆ ಬಂದಾಗ ಇವರ ಅಣ್ಣ ದಿಲೀಶ್ ಅವರಿಗೆ ಸುಧೀರ ಕುಮಾರ ಎಂಬಾತನು ಪರಿಚಯವಾಗಿದ್ದು, ತಾನು ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ನೆಂದು ನಂಬಿಸಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುವುದಾಗಿ ಹೇಳಿ ಹಣ ಹಾಕುವಂತೆ ಕೇಳಿದ್ದಾನೆ. ವಿದೇಶದಲ್ಲಿರುವ ವಿಲ್ಮಾ ಮತ್ತು ಅವರ ಅಣ್ಣ ದಿಲೀಶ್‌ರವರಿಂದ ಹಲವು ಬಾರಿ ಸುಧೀರ ಕುಮಾರ ತನ್ನ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡಿದ್ದಾನೆ. ಅಲ್ಲದೇ ವಿಲ್ಮಾ ತಾಯಿಗೆ ಸಂಬಂಧಿಸಿದ ಜಾಗದ ಖಾತೆ ಬದಲಾವಣೆ ಮಾಡಿಸಿಕೊಡುವುದಾಗಿ ಹೇಳಿ ಖಾತೆಗೆ ಹಣ ಹಾಕಿಸಿಕೊಂಡಿದ್ದು ಮಾತ್ರವಲ್ಲದೆ ತಾಯಿ ಬಳಿ ಜಾಗದ ಖಾತೆ ಬದಲಾವಣೆ ಬಗ್ಗೆ ಕೆಲವು ಸಹಿಯನ್ನು ಹಾಕಿ ಕೊಡುವಂತೆ ಹೇಳಿ ಸಹಿ ಹಾಕಿಸಿಕೊಂಡಿದ್ದು ಮತ್ತು ಸುಧೀರ ಕುಮಾರ ಹಣವನ್ನು ಪಡೆದು ದೇವಸ್ಥಾನದಲ್ಲಿ ಯಾವುದೇ ಪೂಜೆ ಮಾಡಿಸದೇ ಅಲ್ಲದೇ ಜಾಗದ ಖಾತೆ ಬದಲಾವಣೆಯನ್ನು ಮಾಡದೇ ಇದ್ದಾಗ ಅನುಮಾನಗೊಂಡ ವಿಲ್ಮಾ ಅವರು ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನಕ್ಕೆ ಬಂದು ಸಂಬಂಧಪಟ್ಟವರಲ್ಲಿ ವಿಚಾರಿಸಿದಾಗ ಸುಧೀರ ಕುಮಾರರವರು ದೇವಸ್ಥಾನದ ಅಡಳಿತ ಮಂಡಳಿಯ ಸದಸ್ಯನು ಆಗಿರದೇ ದೇವಸ್ಥಾನಕ್ಕೆ ಯಾವುದೇ ರೀತಿಯೂ ಸಂಬಂಧವಿರದ ವ್ಯಕ್ತಿ ಎಂದು ತಿಳಿಸುತ್ತಾರೆ. ವಿಲ್ಮಾ ಮತ್ತು ಅವರ ಅಣ್ಣ ದಿಲೀಶ್ ರವರಿಗೆ ಸುಧೀರ ಕುಮಾರ ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯನೆಂದು ಹೇಳಿ ಪೂಜೆ ಮಾಡಿಸುವುದಾಗಿಯೂ ಮತ್ತು ವಿಲ್ಮಾ ಅವರ ತಾಯಿಗೆ ಸಂಬಂಧಿಸಿದ ಜಾಗದ ಖಾತೆಯ ಬದಲಾವಣೆ ಮಾಡಿಕೊಡುವುದಾಗಿ ನಂಬಿಸಿ ವಿಲ್ಮಾ ಮತ್ತು ಅಣ್ಣ ದಿಲೀಶ್ ರವರಿಗೆ ಒಟ್ಟು ರೂ. 30,73,600/- ರೂಪಾಯಿ ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುವುದಾಗಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!